Saturday, July 21, 2007

ನೀಲಿ ಗಗನವೇ ಶಾಪ ಕೊಡು.............

ಅಬ್ಬಾ ಗಗನವೇ.. ಅದೆಷ್ಟು ನಕ್ಷತ್ರಗಳನ್ನ ನಿನ್ನೆದೆಯಲ್ಲಿಟ್ಟುಕೊಂಡು ಹಾಗೆ ಶಾಂತವಾಗಿದ್ದೀಯ? ನನಗೂ ಹೇಳಿ ಕೊಡು.ನಿನ್ನ ಸಹನಾ ಶಕ್ತಿಯನ್ನ. ನನ್ನೆದೆಯಲ್ಲಿ ಒಂದೇ ಒಂದು ನಕ್ಷತ್ರವನ್ನಿಟ್ಟುಕೊಳ್ಳಲಾಗದೆ ನಿನ್ನ ಮುಂದೆ ಕುಬ್ಜನಾಗಿ ನಿಂತಿರುವ ನನ್ನೆದೆಗೆ ನಿನ್ನ ಪ್ರೀತಿ ಕೊಡು ನಿನ್ನ ಸಹನೆ ಕೊಡು ನೋವುಗಳನ್ನ ಮರೆಯಬೇಕಿದೆ. ಅಷ್ಟಕ್ಕೂ ಮರೆಯುವುದಕ್ಕೆ ಅಂತ ಮಾತಿಗೆ ಹೇಳುತ್ತೇನಷ್ಟೆ ನಿಜಕ್ಕು ಅದು ಸಾದ್ಯಾನ ಅಂತ ನಿನ್ನೆದೆ ಗೂಡಲ್ಲಿ ಹುದುಗಿರುವ ಅಸಂಖ್ಹ್ಯಾತ ನಕ್ಷತ್ರಗಳನ್ನೆ ಕೇಳಿ ನೋಡು ! ಅಷ್ಟು ನಕ್ಷತ್ರಗಳಲ್ಲಿ ಒಂದೆ ಒಂದು ಮರೆಯುವುದಕ್ಕೆ ಸಾದ್ಯಾ ಅನ್ನುವುದೇ ಆದರೆ ನಾನು ಈ ಬದುಕು ಈ ಬವಣೆ ಈ ನೋವು ಈ ಹಿಂಸೆ ಈ ಜಗತ್ತಿನ ಅಷ್ಟೂ ಮೋಸಗಳಿಗೆ ಒಂದು ವಿದಾಯ ಹೇಳಿ ನಾನು ಕೂಡ ನಿನ್ನೆದೆಯಲ್ಲಿ ಒಂದು ನಕ್ಷತ್ರವಾಗುತ್ತೇನೆ.[:(]
ಗೊತ್ತಿಲ್ಲ ನಿನಗೆ ಪ್ರತಿ ದಿನ ಪ್ರತಿ ಗಳಿಗೆ ನಾನು ಅನುಭವಿಸುತ್ತಿರುವ ನೋವು ದುಃಖ ಹಿಂಸೆ ಅವಮಾನವನ್ನ ನಾನು ಜಗತ್ತಿಗೇ ಹಂಚಿ ಮತ್ತೆ ನಿನ್ನೆದೆಗೆ ಸುರಿದರೂ ಕಾಲಿಯಾಗದಷ್ಟಿದೆ. ಪ್ರತಿ ಆ ಕ್ಷಣ ಕೂಡ ನನಗೆ ಒಂದು ಜ್ಯೋತೀರ್ವರ್ಷದ ಸಮಾನ. ನಿನಗೆ ಗೊತ್ತ? ನಾನು ಅಂತ ಪ್ರತೀ ಕ್ಷಣಗಳನ್ನು ಕೂಡ ಪ್ರೀತಿಯಿಂದ ಅನುಭವಿಸುತ್ತಿದ್ದೇನೆ.ನೋವಲ್ಲಿದ್ದಷ್ಟು ಹೊತ್ತೂ "ಅವರು " ನೆನಪಲ್ಲಿರುತ್ತಾರಲ್ಲ ಎಂಬ ವಿಲಕ್ಷಣ ಆಸೆ. ಆಸೆ ನಿರಾಸೆಗಳ ಲೆಕ್ಕವಿಲ್ಲ .ಬದುಕಿನಲ್ಲಿ ಯಾವತ್ತೊ ಪ್ರೀತಿಯ ಲೆಕ್ಕದಲ್ಲಿ ನಪಾಸು ನಾನು..ಮತ್ತೆ ಪಾಸು ಮಾಡೊಕೆ ಇದು ಪರೀಕ್ಷೆಯಲ್ಲ ಕೇವಲ ನನ್ನ ಕನಸುಗಳ ಕೇವಲ ಕನಸುಗಳ ನಿರೀಕ್ಷೆ ಅಷ್ಟೆ.
ಮನಸಿನ ಯಾವುದೋ ಒಂದು ಮೂಲೆಯಲ್ಲಿ ನೆನಪು ಅನ್ನೊದು ಇದ್ದಿದ್ದರೆ ಅದನ್ನ ಮರೆತು ಬಿಡಬಹುದಿತ್ತು ಅಲ್ಲವ? ವಿಷಮ ಶೀತ ಜ್ವರದ ಹಾಗೆ ಮೈಮನವನ್ನೆಲ್ಲ ಆವರಿಸಿದ ಆ ಮಾಯೆಯ ಸುಳಿಯಿಂದ ಹೇಗೆ ಹೊರಬರಲಿ ಹೇಳು ನೀಲಿ ಗಗನವೇ. ನೀನು ನೊಂದಿದ್ದೀಯ? ಅದಕ್ಕೇನ ಒಂದೊಂದು ಸಲ ಮಳೆಯ ರೂಪದಲ್ಲಿ ಅಷ್ಟೂ ದುಃಖವನ್ನ ಹೊರಹಾಕುವುದು? ನಿನ್ನ ಹಾಗೆ ಮಳೆ ಸುರಿಸುವ ತಾಕತ್ತು ನನಗಿಲ್ಲ ಆದರೆ ನಾನು ಸುರಿಸುವ ಕಣ್ಣೀರಿನಲ್ಲಿರುವ ನೋವಿಗೆ ನೀನು ಮತ್ತೆ ನಿನ್ನ ಅಸಾಂಖ್ಯಾತ ನೋವುಗಳು ಸಾಟಿಯಾಗಲಾರಿರಿ ನೆನಪಿಡಿ. ನನಗೆ ಹೋಲಿಕೆ ಮಾಡಿ ಅಭ್ಯಾಸವಿಲ್ಲ ಕೇವಲ ಮೋಸ ಹೋಗಿ ಅಭ್ಯಾಸವಷ್ಟೆ.ಪ್ರೀತಿಯಲ್ಲಿ ಮೋಸ ಹೋಗುವುದು ನನಗೆ ಅಂತ ವಿಚಿತ್ರವೆನಿಸುತ್ತಿಲ್ಲ.ಆದರೆ ಪ್ರೀತಿ ಮೋಸಮಾಡುವುದು ನನಗೆ ವಿಚಿತ್ರವೆನಿಸುತ್ತೆ....ಯಾಕೊ ಬದುಕೇ ವಿಚಿತ್ರವೆನಿಸುತ್ತೆ ಯಾರಿಗೋ ಯಾರೋ ಕಣ್ಣೀರು ಹಾಕುವುದು, ಯಾರಿಗೋಸ್ಕರವೋ ಬದುಕಿ ಬಿಡುವುದು,ಯಾರೋ ನಮ್ಮ ಬದುಕಾಗಿಬಿಡುವುದು, ಅವರಿಲ್ಲವೆಂದ ಮಾತ್ರಕ್ಕೆ ಬದುಕೇ ಇಲ್ಲವೆನಿಸುವುದು ಇದು ಯಾವ ಮಾಯೆಯ ಮಾಯೆ? ಬಿಡು ಕಳೆದು ಹೋಗಿದ್ದರ ಬಗ್ಗೆ ಅಗಾಧ ನೋವಿದೆ...ಆ ನೋವು ಆ ಮಧುರ ಯಾತನೆ ಈ ಪ್ರಪಂಚದಲ್ಲಿ ನಾನಿರುವವರೆಗೆ ಇರುತ್ತೆ. ನಿನ್ನಲ್ಲಿ ಕೇಳಿಕೊಳ್ಳುವುದು ಇಷ್ಟೆ. ನನಗೆ ಯಾವತ್ತು ಈ ನೋವು ಮರೆತುಹೊಗದಂತ ಶಾಪ ಕೊಡು .ನೀನು ನೀಲಿಗಗನ.. ನಿನ್ನ ನಕ್ಷತ್ರಗಳ ಜೊತೆ ನಗುನಗುತ್ತಿರು..ನಾನು ನನ್ನ ನೋವುಗಳ ಜೊತೆ ಒಳಗೆ ಅಳುತ್ತ ಹೊರಗೆ ನಗುತ್ತಿರುತ್ತೇನೆ..

ನಿನ್ನ ಚೋಮು....

Tuesday, July 17, 2007

ಕುಸುಮ ಸಿರಿಯೆ,

ಕುಸುಮ ಸಿರಿಯೆ, ದೇಹ ದಣಿದು ಮನೆಗೆ ಬಂದು ಉಂಡು ಮಲಗೂವರೆಗೂ ಅಸ್ಟೆ ಈ ಜಗ,ಜನ ಎಲ್ಲ ಚಾಪೆ ಹಾಸಿ ಅಂಗಾತ ಮಲಗಿ ಆಕಾಸ ದಿಟ್ಟಿಸಿದರೆ ಅಸಂಕ್ಯ ಚುಕ್ಕಿಗಳ ನಡುವೆ ನೀನು ಕಾಣುತಿಯ್ಯ ........ ಆಗಲೆ ಅರಿವಾಗೋದು ನನ್ನ ಈ ಮನದ ಬಾನೂವು ನಿನ್ನಯ ಹೊಲಪಿನಿಂದ miss ಆಗಿದೆ ಎಂದು.... ಹೇಳು ಚೆಲುವೆ ನೀ ಎಂದು ಬರುವೆ ಎಂದು???????????????????????????

ನಿನ್ ಮೇಲೆ ಯಾಕ್ ಗೂಬೆ ಕೂರಿಸಲಿ..!?

ಪ್ರಿಯಾ..ಹೇಗ್ ನಡಿತಾ ಇದಿಯೇ ನಿನ್ನ Engineering Examsssuu...? ಅದ್ ಅತ್ಲಾಗ್ ಹಾಳಾಗ್ ಹೋಗ್ಲಿ... ಇಲ್ಲಿ ಕೇಳು..ನನ್ನ Diploma Result ಬಂದಿದೆ ಕಣೇ!Fail ಆಗ್ಬಿಟ್ಟೆ... Distinction ತಗೋಳದ್ರಲ್ಲಿ.. ಬರಿ First ಕ್ಲಾಸ್‍ನಲ್ಲಿ ಪಾಸಾಗಿದಿನಿ..!! ನಮ್ ಗುರುಗಳ್ ಹೇಳ್ತಾ ಇದ್ರು ಪ್ರೀತಿ..ಗೀತಿ ಅಂಥ ತಲೆ ಕೆಡ್ಸ್ಕೋ ಬೇಡ.. ಹಾಳಾಗ್ ಹೋಗ್ತಿಯಾ ಅಂಥ! ಅದ್ ಯಾಕೋ ನಿಜ ಆಗೋಂಗ್ ಕಾಣ್ತಾಯಿದೆ!!ನೋಡು ಬರ್ತಾ..ಬರ್ತಾ Semಇಂದ Semಗೆ Percentegu ಕಡಿಮೆ ಆಗ್ತಾ ಇದೆ... 1st Semstrನಲ್ಲಿ 80% ಇದ್ದಿದ್ದು ಈಗ 68% ಗೆ ಇಳ್ದಿದೆ.. ಇದಕ್ಕೆಲ್ಲಾ ನೀನೆ ಕಾರಣ ಅಂಥ ಅನ್ಸುತ್ತೆ! ಆದ್ರೆ ನೀನೇನ್ ಮಾಡಿದಿಯಾ ಬಿಡು..! ನಿನ್ ಮೇಲೆ ಯಾಕ್ ಗೂಬೆ ಕೂರಿಸಲಿ..!?ಆದ್ರೆ ಸ್ಕೂಲಲ್ಲಿ ನನ್ ಕಣ್ಣಿಗೆ ಯಾಕೇ ಕಾಣಿಸಿದೆ ನೀನು.. ನನ್ ಕ್ಲಾಸಲ್ಲೇ ಯಾಕೇ ಓದಿದೆ ನೀನು.. ಅವತ್ತು ಬರಿ ನಿನ್ನ Lookಗೆ ಸೋತಿದ್ದೆ.. ಮೊನ್ನೆ ನೀನ್ ಪ್ರೀತಿಸ್ದೆ ಇರೋ ಪ್ರೀತಿಗೆ ಸೋತೆ..ಇವತ್ತು ನನ್ನ Carrier ನಲ್ಲಿ ಸೋಲ್ತಾ ಇದಿನಿ..ಇಬ್ರೂ ಒಟ್ಟಿಗೆ puc ಮುಗಿಸಿದ್ವಿ.. ಆದ್ರೆ ನೀನ್ ಮುಂದಕ್ಕೆ Engring.ಗೆ ಹೋದೆ.. ನಾನ್ ಪಲ್ಟಿ ಹೊಡ್ದು Diplom ಸೇರ್ಕೊಂಡೆ! ಇಲ್ಲಾದ್ರೂ ಚೆನ್ನಾಗಿ ಓದಿ ದಬ್ಬಾಕಿ Engnring ಮಾಡವ ಅಂಥ.. Adre ನನ್ Result ನೋಡ್ತಾ ಇದ್ರೆ ಯಾಕೋ "ಹೊಗೆ" ಹಾಕಸ್ಕಳಂಗಿದಿನಿ! ನನ್ನಂಥ ಅತಿ ಮಹಾಶಯ..(,,!!???) ಬುದ್ದಿವಂತನಿಗೆ ಈ ತರ ಆದ್ರೆ ಬೇರೆ ಹುಡುಗರದು ಏನ್ ಗತಿನೋ ಕಾಣೆ.. ನೀವ್ ಹುಡ್ಗೀರ್ ಅದೇನ್ ಮಾಯೆ ಮಾಡ್ತಿರೋ ಅದೂ ಕಾಣೆ..Am Sorry ಕಣೇ.. ಯಾಕೋ Over ಆಯ್ತು ಅನ್ಸುತ್ತೆ ಅಲ್ವಾ.. ಅನ್ಸೋದೇನ್ ಆಗಿದೆ.. ಮತ್ತೊಂದ್ ಸಲ Sorry ಕಣೇ..!!ನಮ್ದೇ ಲೊಕದಲ್ಲಿ ತೇಲಾಡ್ತ.. ಒಳ್ಳೆ ಹುಡುಗಿಯರನ್ನ ಕಂಡ್ರೆ ಸಾಕು ಅವಳನ್ನೇ ಪ್ರೀತ್ಸೋದ್.. ಸಾಯೋ ತನಕ ಅವರ ನೆನಪಲ್ಲೇ ತೇಲೋದ್..! ಹಾಗೆ...ಹೀಗೆ ಏನೇನೋ ನಮ್ಮಷ್ಟಕ್ಕೆ ನಾವೇ ಅನ್ಕೊಂಡು.. ತೇಲ್ತಾ.. ತೇಲ್ತಾನೇ.. ಒಂದು ಸಂಕಷ್ಟದ ’ಬೆಟ್ಟಕ್ಕೆ’ ಗುದ್ದಿಕೊಂಡು .. ಮುಳ್ಳೇ ತುಂಬಿರೋ ನೆಲದ ಮೇಲೆ ಆಯ್ಕೊಂಡ್ ಬೀಳ್ತೀವಿ..! ನಿಜವಾಗ್ಲೂ ನಮ್ದೇ ಎಲ್ಲಾ ತಪ್ಪು!! ನಿಮ್ಮದು..ಅಂದ್ರೇ ನೀವ್ ಹುಡಿಗಿರು ಮಾಡೋ ತಪ್ಪು ಅಂದ್ರೆ ನಮ್ಮಂತ Descent.. Innocent...(...!!??) ಹುಡುಗರ ಕಣ್ಣಿಗೆ ಕಾಣಿಸಿಕೊಳ್ಳೋದ್.. ಅವರ ನೆನಪಾಗಿ ಕಾಡೋದ್.. ಹೂಂ.. ಹೀಗೆ ಇನ್ನು ಬೇರೆ ಬೇರೆ ಥರ ಸಾಯಿಸ್ತಿರಾ..!! ಅದೂ ನೀವೇನ್ ಬೇಕ್‍ಬೇಕಂತ ಮಾಡಲ್ಲ..(! ಅಂಗ್ ಅನ್ಕೊಂಡಿದಿನಿ)..

ಪ್ರಿಯಾ.. ನಾನು ನಿನ್ ಥರಾನೇ.. ಚೆನ್ನಾಗಿ ಓದಿ ಒಬ್ಬ ಒಳ್ಳೇ Engr.. ಅನ್ಸ್ಕೋಬೇಕ್ ಕಣೇ!! So ಇನ್ ಮೇಲೆ..ನೀನು ನೆನಪಾಗಬೇಡ.. ಕನಸಲ್ಲಿ ಕಾಡ್ಬೇಡ..!! ತಲೆ ಕೆಡ್ಸ್ಕೋಂಡ್ ಓದ್ಬೇಕಾದ್ರೆ.. ಪುಸ್ತಕದ ಪುಟಗಳಲ್ಲಿ ಇಣುಕಬೇಡ..!reliefಗೆ ಅಂಥ ಯಾವದಾದ್ರೂ ಒಳ್ಳೆ Song.. ಕೇಳ್ತಿರಬೇಕಾದ್ರೆ.. ಅದರಲ್ಲಿನ ನೋವಾಗಿ ಜೀವ ತಿನ್ನಬೇಡ!!ದಯವಿಟ್ಟು.. ಒಕೇ..ನಾ?ನಂಗೂ ನಿನ್ನ ನೆನಪಿರದೆ.. ಬಾಳಕ್ಕಾಗಲ್ಲ... ನಿನ್ನ ಹೆಸರಿರದೆ ಉಸಿರಾಡಕ್ಕೆ ನಿಜವಾಗ್ಲೂ ಆಗಲ್ಲ!!ಆದ್ರೂ ನಾನ್ ಬದುಕ್ಬೇಕು.. ಓದ್ಬೇಕು. ಅದು ಹೇಗೂ ಬದುಕ್ತಿನಿ ಬಿಡು.. ಆದ್ರೆ ನೀನ್ ಪದೇ ಪದೇ ನೆನಪಾಗಿ ಕಾಡ್ಬೇಡ ಕಣೆ.. ನಿನ್ ದಮ್ಮಯ್ಯ!!ನಿನ್ನ ಪ್ರಿತ್ಸೋಕ್ಕೇ ಒಂದ್ ಯೋಗ್ಯತೆ ಅನ್ನೋದ್ ಬೇಕಲ್ಲಾ.. ಅದನ್ನ್ ಪಡ್ಕೊಂಡ್ ಬರ್ತಿನಿ.. ನನ್ಗೋಸ್ಕರ ಕಾಯೋಕ್ ಆಗುತ್ತಾ ಕಾಯಿ.. ಇಲ್ಲಾ ನಿನ್ನಿಷ್ಟ..!! ಆದ್ರೆ ನಾನು ನಿನ್ ಬಿಟ್ ಯಾರನ್ನೂ ಪ್ರೀತ್ಸೋಲ್ಲ.. ಆದ್ರೆ ಚೆನ್ನಾಗಿರೋ ಹುಡ್ಗೀರ ನ ಕಂಡ್ರೆ ನೋಡ್ದೆ ಇರಲ್ಲ...Diet ಮಾಡ್ತಾ ಇದಿವಿ ಅಂದ ಮಾತ್ರಕ್ಕೆ ಹೋಟೆಲ್ ನ Menu Card ನೋಡಿದ್ರೆ ಏನೇ ತಪ್ಪು!! ಹಾಗೇನೆ ಇದು..!!ನಿನ್ನ ನೆನಪ ’ಮುಂಗಾರುಮಳೆ’ದಿಲ್‍ನ ’ದುನಿಯಾ’ದಲ್ಲಿ ಸುರಿಯದಿರಲಿ ಎಂದು... ಕೇಳುತ್ತಾOnce Again ನಿನ್ನ ’ನಗು’ಗಾಗಿ ಕಾದವ .

ನಿನ್ನನ್ನು ನಾನು ಏನಂತ ಕರೆಯಲಿ

ಗೆಳೆಯ, ನಿನ್ನನ್ನು ನಾನು ಏನಂತ ಕರೆಯಲಿ ? ಹಿತೈಷಿ ಎನ್ನಲಾ, ಅಸಹಾಯಕ ಎನ್ನಲಾ ಅಥವಾ ದ್ರೋಹಿ ಎನ್ನಲಾ .ನನಗೆ ಗೊಂದಲವಾಗುತ್ತಿದೆ. ಅಂದು ನಾನಾಗಿಯೇ ನಿನ್ನ ಮಾತಾಡಿಸಿ , ನಿನ್ನ ಗೆಳೆತನ ಬಯಸಿ ಬಂದೆ. ಆದರೆ ನೀನು ಈಗ ಬೇಕಂತಲೆ ದೂರ ಹೋಗ್ತಾ ಇದ್ದೀಯ. ನಿನ್ನ ಪಾಲಿಗೆ ನಾನು ಬಯಸದೇ ಬಂದ ಭಾಗ್ಯಾನಾ, ಅಥವಾ ನನ್ನ ಪಾಲಿಗೆ ನೀನು ನಿಲುಕದ ನಕ್ಷತ್ರನಾ. ಹೇಳು ಗೆಳೆಯ ಎಲ್ಲಿರುವೆ ನೀನು ಮೋಡದ ಮರೆಯಲ್ಲಿ. ಆಗೆಲ್ಲಾ ನಿನ್ನ ಒಂದು ನಗುವಿಗೆ, ಮಧುರ ಮಾತಿಗೆ ನಾನು ಎಸ್ಟು ಕಾಯ್ತಾ ಇದ್ದೆ. ಎಲ್ಲಿ ಸುತ್ತ ಬೇಕಿದ್ದರೂ ನೀನಿರುತ್ತಿದ್ದೆ ಜೊತೆ ಜೊತೆಯಲಿ. ನಾ ಒಪ್ಪಲು ನೀ ಅಪ್ಪುತ್ತಿದ್ದೆ, ತುಂಬಾ ಖುಷ್ ಆದಾಗ ಒಮ್ಮೊಮ್ಮೆ ಅದೇ ಜೋಶ್ ನಲ್ಲಿ ತುಂಬಾ ಮುದ್ಡಿಸುತ್ತಿದ್ದೆ. ಹಾಗೆ ನನ್ನ ಭಾವನೆಗಳಿಗೆ ಅಷ್ಟು ಚೆನ್ನಾಗಿ ಸ್ಪಂದಿಸುತಿದ್ದ ನೀನು ಇದ್ದಕ್ಕಿದ್ದಂತೆ ಯಾಕೆ ದೂರ ಹೋಗ್ತಿದಿಯ. ನಿನ್ನ ಸಮಸ್ಯೆ ಏನಂತ ನನಗೆ ಗೊತ್ತು, ನಿನ್ನ ದುಡಿಮೆ ಕಡಿಮೆ ಅಂತ ತಾನೇ ನೀನು ದೂರ ಹೋಗ್ತಿರೋದು. ನಾನ್ಯಾವತ್ತಾದರೂ ನಿನ್ನ ಸಂಪಾದನೆ ಎಷ್ಟು ಅಂತ ಕೇಳಿದ್ದೇನಾ ? ನನ್ನ ದೃಷ್ಟಿಯಲ್ಲಿ ಪ್ರೀತಿಗೆ ಹಣ ಮುಖ್ಯ ಅಲ್ಲ. ಪ್ರೀತಿಸುವಂಥ ಗುಣ, ಪ್ರೀತಿಸುವ ಹೃದಯ ಮುಖ್ಯ ಅಷ್ಟೇ . ಬೇಕಿದ್ದರೆ ನಾನೇ ಉಳಿಸಿಟ್ಟ ಹಣ ಇದೆ, ಸಾಲದಿದ್ದರೆ ನನ್ನಲಿಷ್ಟು ಒಡವೆ ಇದೆ, ಬೇಕಾ ಹೇಳು ! ನನಗೆ ಐಶ್ವರ್ಯ ಬೇಡ, ನಿನ್ನ ಒಲವಿನ ಆಸರೆ ಇದ್ದರಷ್ಟೇ ಸಾಕು. ನಮ್ಮದು ಬೇರೆ ಬೇರೆ ಜಾತಿ ನಿಜ, ಅದಲ್ಲದೇ ನಿಮ್ಮನೇಲಿ ತುಂಬಾ ಸಂಪ್ರದಾಯ, ಸಿಕ್ಕಾಪಟ್ಟೆ ಕಟ್ಟುಪಾದು ಅಂತಲೂ ಗೊತ್ತು. ಆದರೆ ನಿನಗೋಸ್ಕರ ನಾನು ಬದಲಾಗುತ್ತೇನೆ. ನಿಮ್ಮ ಅಪ್ಪ ,ಅಮ್ಮ, ಮನೆಯವರಿಗೆಲ್ಲಾ ಹೊಂದಿಕೊಂಡು ಬಾಳೋ ತಾಳ್ಮೆ ರೂಡಿಸಿಕೊಳ್ಳುತ್ತೇನೆ. ನಮ್ಮ ಮನೆಯ ಬಗ್ಗೆ ತಲೆ ಕೆಡಿಸ್‌ಕೋಬೇಡ, ಅವರನ್ನೆಲ್ಲಾ ಸಂಭಾಳಿಸೋದು ನನಗೆ ಗೊತ್ತು. ಯೋಚಿಸಬೇಡ, ಮನಸು ಮಾಡು ನಾನು ನಿನ್ನವಳು ಆಗುತ್ತೇನೆ . ಯಾರೂ ಒಪ್ಪದಿದ್ದರೆ ಎಲ್ಲಾದರೂ ಮದುವೆ ಆಗಿ ಸ್ವಲ್ಪ ದಿನ ದೂರ ಇರೋಣ ಇಬ್ರು ಜೊತೆಲಿ, ಆಮೇಲೆ ಎಲ್ಲಾ ತನ್ನಿಂದ ತಾನೇ ಸರಿ ಹೋಗ್ತದೆ. ಹುಡುಗಿಯಾಗಿ ನಾನೇ ಇಷ್ಟು ಹೇಳಿದರೂ ಹಿಂಜರಿದೆಯಲ್ಲ ಗೆಳೆಯ ಯಾಕೆ ? ಪ್ರೀತಿಸಿದ ಹುಡುಗಿ ಯಾರ್ ಜೊತೆಲೋ ಹೋದ್ಲು ಎಂಬ ಕಳಂಕ ಬರುತ್ತದೆ ಎಂಬ ಆತಂಕವಿತ್ತಾ ?

ನೀವು ಹುಡುಗರು ಏನೇ ಆದ್ರೂ ಹೊರಗಡೆ ಸುತ್ತ ಬಹುದು, ಫ್ರೆಂಡ್ಸ್ ಜೊತೆ ಬೆರೆಯಬಹುದು, ಹಾಗೆ ನನ್ನ ಮರೆಯಲೂ ಬಹುದು. ಆದರೆ ನಾನು ಹುಡುಗಿ ಕಣೋ, ಮರೆಯೋದು ಕಷ್ಟ. ನಮ್ಮಿಬ್ಬರನ್ನು ಒಟ್ಟೊಟ್ಟಿಗೆ ನೋಡಿದ ಜನ ಮರೆಯಲು ಬಿಡೋದು ಇಲ್ಲಾ. ಈ ಪ್ರೀತಿಯ ಮರೆತು ಬಾಳೋದು ಹೇಗೆ ನೀನೇ ಹೇಳು. ನಮ್ಮನೇಲಿ ನನಗೆ ಬೇರೆ ಹುಡುಗನನ್ನು ನೋಡ್ತಿದಾರೆ, ದೊಡ್ಡ ಕಂಪನಿಯಲ್ಲಿ ದೊಡ್ಡ ಸಂಬಳದವ. ಆದರೆ ಅದ್ಯಾವುದೂ ನಿನ್ನ ಪ್ರೀತಿಗೆ ಸಾಟಿಯಾಗದು. ಇನ್ನಾದರೂ ನೀ ಬರದೇ ಹೋದರೆ ನಾನು ಬೇರೆ ಮನೆಯ ಹೊಸ್ತಿಲು ತುಳಿಯಬೇಕಾಗುತ್ತದೆ. ಆದರೆ ನೆನಪಿರಲಿ, ಆ ಮನೆಯ ಅಂಗಳದಲ್ಲಿ ದಿನಾ ನಾನಿಡುವ ರಂಗೋಲಿ ಯಲ್ಲಿ ನನಗೆ ಕಾಣಿಸೋದು ನಿನ್ನ ಒಲವ ಚೆಲುವಿನ ಚಿತ್ತಾರವೇ. ಇಷ್ಟು ಹೇಳಿದ ಮೇಲೂ ನೀನು ದೂರ ಉಳಿದರೆ ನಿನ್ನಿಷ್ಟ.ಕೊನೆಗೂ ದೂರ ಆಗುವುದೇ ನಿನಗೆ ಅನಿವಾರ್ಯವಾದರೆ, atleast ಒಮ್ಮೆ ಬಳಿ ಬಂದು ಹೇಳಿ ಹೋಗು ಕಾರಣ ಇಂತೀ ಎಂದಿಗೂ ನಿನ್ನವಳೇ ಊರ್ಮಿಳಾ....

ತಪ್ಪೇ ಮಾಡದೇ ಹೋದರೇ

ತಪ್ಪೇ ಮಾಡದೇ ಹೋದರೇ...ರೆಪ್ಪೆ ತೋಯದೇ ಹೋದರೆ..ಪ್ರೀತಿ ಎಂಬುದು ಎಲ್ಲಿದೆ...?......... ಪ್ರಿಯಾ... ಹೇಗಿವೇ ಈ ಸಾಲುಗಳು..? ನಿಜಕ್ಕೂ ನಾ ಬರೆದದ್ದಲ್ಲ.. ಕವಿ..ಕಲ್ಯಾಣ್ ಬರೆದದ್ದು!!ಹೇಗಿವೇ..? ನಿಂಗೇನಾದ್ರೂ ಅರ್ಥ ಆಯ್ತಾ? ಅರ್ಥ ಆದ್ರೆ ಸಂತೋಷ.. ಆಗಲಿಲ್ಲ ಅಂದ್ರೂ.. ಸಂತೋಷಾನೇ..! ಯಾಕ್‍ಹೀಗೆ ಅಂತೀಯಾ... ನಾ ಅರ್ಥ ಮಾಡಿಸಬಹುದಲ್ಲ ಅಂಥ!! ಇರಲಿ ಬಿಡು.. ಮತ್ತೆ ಯಾಕ್ ಪತ್ರ ಬರೀತಾ ಇದೀನಿ ಗೊತ್ತಾ...?ಮೇಲೆ ಇದಾವಲ್ಲ ಸಾಲುಗಳು .. ಅವು ತುಂಬಾ ಕಾಡ್ಬಿಟ್ವು ಕಣೇ.. ಅದಕ್ಕೆ!!ನಾನ್ ಆ ತಪ್ಪು ಮಾಡಿದಿನಿ.. ರೆಪ್ಪೆಗಳನ್ನು ಕೂಡ ತೋಯಿಸಿದಿನಿ.. ಆದ್ರೆ ನೀನ್ ಇನ್ನಾ .. ತಪ್ಪು ಮಾಡಿಲ್ಲ... i mean ಪ್ರೀತಿ ಮಾಡಿಲ್ಲ..(ಅಥವಾ ಅದು ಹುಟ್ಟಲೇ ಇಲ್ಲ...!!) ರೆಪ್ಪೆಗಳನ್ನ ಮಾತ್ರ ತೋಯಿಸಿದ್ದೀಯಾ.. ಆದ್ರೆ ನಿನ್ನದಲ್ಲ... ನನ್ನದು.. thanks for that ಕಣೇ!!ಜಗತ್ತಲ್ಲಿ ತಪ್ಪು ಮಾಡಿ ಕೂಡ.. ಸಂತೋಷವಾಗಿ ಇರೋವರು ಅಂದ್ರೆ ಪ್ರೇಮಿಗಳು ಮಾತ್ರ ಅನ್ಸುತ್ತೆ!! ಹ್ಹ...ಹ್ಹ... Again ಅವರಲ್ಲಿ..ನಾನೂ ಒಬ್ಬ!!ಪ್ರಿಯಾ.. ಒಂದ್ ಸತ್ಯ ಹೇಳಲಾ...? ನೀನ್ ಬ್ಯಾಡಾ ಅಂದ್ರೂ ಹೇಳ್ತೀನಿ ಕೇಳು..ನಿನಗಿಂತ ನಿನ್ ಹೆಸರನ್ನ ಜಾಸ್ತಿ .. ತುಂಬಾನೇ ಜಾಸ್ತಿ ಪ್ರೀತಿಸ್ತೀನಿ ಕಣೆ!, ನೀನು ನಾ ಕರೆದೊಡನೆ..ಬರೋದಿಲ್ಲ..ಆದ್ರೆ ನಿನ್ ಹೆಸರು.. ಹೂಂ.. ನಿಜವಾಗ್ಲೂ ಕರೆದ ತಕ್ಷಣ ಬರುತ್ತೆ.. ನನ್ನೊಳಗಿಂದ..ನನ್ನ ಮನದೊಳಗಿಂದ..!! ನನ್ನ ನಿನ್ನ ತುಟಿಗಳೆರೆಡು "ಭೇಟಿ" ಆಗೋದೇ ಇಲ್ಲ.. ಆದ್ರೆ ನಿನ್ನ ಹೆಸರ ಆರಂಭದ ಅಕ್ಷರ ಕರೆದೊಡನೆಯೇ.. ನನ್ನವೇ ಎರಡು ತುಟಿಗಳು ಎಷ್ಟು ಜಲ್ದಿ ಒಂದಾಗ್ತವೇ ಗೊತ್ತಾ..? ಬೇಕಿದ್ರೆ ನಿನ್ನ ಹೆಸರನ್ನ ನೀನೆ ಕರೆದುಕೊಂಡು ನೋಡು.. thatz y, i luv ur Name more than u...!! Sorry ನಿನ್ನ ಹೆಸರನ್ನೇ ನಿನ್ನ ಸವತಿಯನ್ನಾಗಿ ಮಾಡಿದ್ದಕ್ಕೆ!ಇನ್ನು ಒಬ್ರು ಸವತಿ ಇದಾರೆ..!! ಅವರು ಯಾರು ಗೊತ್ತಾ... ??? ಅದು ಕೂಡಾ ನಿನ್ನದೇ ಕಣೇ... ಗೊತ್ತಾಗಲಿಲ್ವಾ...? ಅವೇ ನಿನ್ನ "ನೆನಪುಗಳು..."ನಿಜವಾಗ್ಲೂ ಅವುಗಳು ಕೂಡ.. ನಿನಗಿಂತ ಎಷ್ಟೋ ವಾಸಿ.. ನೋಡು.. ನಿನ್ನನ್ನ ನಾ ಎಷ್ಟು ಗೋಗರೆದು ಕರೆದರೂ ನೀ ಬರೋಲ್ಲ.. ಆದ್ರೆ ನಿನ್ನ ನೆನಪುಗಳನ್ನ ನಾ ಕರೆಯೋದೇ ಬೇಡ.. ತಾವಾಗಿಯೇ.. ಮನದ ನೆಲದಲಿ ಮುತ್ತಿಡಲು ಬರುತ್ತವೆ.. ಮಳೆ ಹನಿಗಳು ಈ ಇಳೆಯ ಚುಂಬಿಸೋ ಹಾಗೆ! ನಿನ್ನಾಣೆಗೂ ಬರ್ತವೇ.. ಅದಕ್ಕೆ ನಾ ಹೇಳಿದ್ದು ನಿನಗಿಂತ ಅವೇ ಎಷ್ಟೋ ವಾಸಿ ಅಂಥ!! ನಮ್ ಕಾಲೇಜ್ ರೋಡಲ್ಲಿರೋ "ಪ್ರಿಯಾ ಬೇಕರಿ" ನೋಡಿದಾಗ.. ಅಲ್ಲಲ್ಲಿ ಕಾಣೋ..."ಪ್ರಿಯಾ ಸೀಮೆಂಟ್" Advertise ನೋಡಿದಾಗ.. ಟಿ.ವಿ..ಲೀ ಬರೋ.."Priya Gold" biscuits Ad ನೋಡಿದಾಗ ತಕ್ಷಣ ನಿನ್ ನೆನಪಾಗುತ್ತೆ ಕಣೆ..!! (ನನ್ನನ್ನ ಎಂಥಾ ಹುಚ್ಚನನ್ನಾಗಿ ಮಾಡ್ ಬಿಡ್ತೇ ನಿನ್ ಹೆಸರು..ನಿನ್ ನೆನಪು...!!?) ಅದಕ್ಕೆ ಹೇಳೋದು "ನೆನಪುಗಳ ಮಾತು ಮಧುರ.." ಅಂಥ! ಹಾಗೆ.. ನಿನಗೆ ಗೊತ್ತಿಲ್ಲದೇ ನೀನು ಕೊಡೋ ನೋವಿಗಿಂತ ನಿನ್ನ ನೆನಪುಗಳು ನೀಡೋ ನೋವು..mmm!!.. ನಿಜಕ್ಕೂ ಅತೀ ಮಧುರ..!! ಅವು ಏನಾದ್ರೂ ಕಣ್ಣಿಗೇ ಕಾಣೋ ಹಾಗಿದ್ರೆ.. ಕೈಗೆ ಸಿಗೋ ಹಾಗಿದಿದ್ರೆ ಅವುಗಳನ್ನೇ ಕಟ್ಕೋಂಡ್‍ಬಿಡ್ತಿದ್ದೆ!! .. ನಗು ಬಂತಾ..!!?ಅದೇ ನನಗೂ ಬೇಕಾಗಿರೋದು.. ಅದೇ ನಿನ್ ನಗು..just.. be haPy.. keeP smiliNg..! I wanna leave..!! ನಿನ್ನ ನಗುವಿಲ್ಲದೆ ಹೂ..ಹೂಂ i cant!!... ನಾನ್ ಬದುಕಕ್ಕೆ ಆಗಲ್ಲ!ಆ "ತೀರ" ಕಾಣದ ಕಡಲಲಿ..ಕ್ಷಣದಲಿ ಮರೆಯಾಗೋ ಅಲೆಗಳಲ ಮೇಲೆ..ಮನದ ಸಾಲುಗಳ ತುಂಬಿ ಪ್ರೀತಿಯ ದೋಣಿಯ ಕಳುಹಿಸಿದವ...

ಹೆಸರು ಮಾತ್ರ ಬಂಗಾರ ಅಲ್ಲ

ನಿಮ್ಮ ಅವ್ವ ಅಪ್ಪ ಯೇಟೋಂದ್ ಸಂದಾಕಿರೋ ಹೆಸರು ಮಡುಗ್ ಬಿಟ್ರು ಕಣೇ....ಹೆಸರು ಮಾತ್ರ ಬಂಗಾರ ಅಲ್ಲ ಬುಡು ನಿನ್ನ ಪ್ರತಿ ಮಾತು ಕೂಡ ಬಂಗಾರನೇ....ನೋಡು ನನಗೆ ಬೆಳಗ್ಗೆ ಎದ್ದ್ ಒಬ್ನೆ ಕುರಿ ಕಾಯೋಕ್ ಹೊಂಟೆ ಅಂದ್ರೆ ಸಾಕು ಮನಸು ವಿಲವಿಲ ಅಂತ ಒದ್ದಾಡಿದ್ ಹಾಗೆ ಆಯ್ತದೆ...ದನಗಳ್ ಕಾಯೋಕ್ ಹೊರಟೆ ಅಂದ್ರೆ ಸಾಕು ಮನ್ಸ್ ಮತ್ತೆ ವಿಲವಿಲ ಅಂತ ಅಳೋ ತರ ಆಗುತ್ತೆ..ಜೊತೆಗ್ ನೀನಿರಬ್ರಾರ್ದಿತ್ತ ಅನ್ಸುತ್ತೆ..ಇಬ್ರು ದನ ಕುರಿ ಕಾಯ್ತಾ ನಮ್ಮೂರ ಕೆರೆ ಏರಿ ಮ್ಯಾಲ ರತ್ನನ್ ಪದಗಳ್ ಹಾಡಿಕೊಂಡು ನಿನ್ ಹೆಗಲ್ ಮ್ಯಾಗೆ ನಾನ್ ಕೈ ಹಾಕೊಂಡು...ಟುರ್ ರ್ ರ್ ರ್ ಬ್ಯಾ ಬ್ಯಾ ಬ್ಯ ಟುರ್ ರ್ ರ್ ರ್ ಬ್ಯಾ ಬ್ಯಾ ಬ್ಯ ಅಂತ ಕುರಿಗಳ್ ಮೇಯ್ಸ್ಕೋತ ಹೊರಟ್ವಿ ಅಂದ್ರೆ ನಮ್ಮುರ ಕೆರೆ ಪಕ್ಕದಲ್ಲಿರೊ ನಮ್ಮೂರ ದೇವತೆ ಚೌಡಮ್ಮನ ಹೊಟ್ಟೆನಲ್ಲಿ ಕೂಡ ಅವಲಕ್ಕಿ ಕುಟ್ಟಿದ ಹಾಗೆ ಆಗಬೇಕು ಬಂಗಾರಿ.........ಬೋ ದಿನದಿಂದ ಒಂದು ಆಸೆ ಐತೆ ಕಣೆ ಅವ್ವ ಮಾಡಿದ್ ರೊಟ್ಟಿ ಚಟ್ನಿ ನ ದನಕುರಿ ಕಾಯ್ತಾ ನಾನು ನಿನಗೆ ತಿನ್ನಿಸಬೇಕು.ನೀನ್ ಖಾರ ಕಣೊ ಅಂತಾ ಕಣ್ಣೀರ್ ಇಟ್ರೆ , ಹಂಗೆ ನಮ್ಮ್ ಹಸು ಗೌರಿ ಕೊಡೊ ನೊರೆ ಹಾಲನ್ನ ನಾನು ನಿನಗೆ ನನ್ ಮಡಿಲಲ್ಲಿ ಮಲಗಿಸ್ಕೊಂಡು ಕುಡಿಸ್ ಬೇಕು..ಹಾಲೆಷ್ಟು ಶುದ್ಧ ಅಂತ ಗೊತ್ತು ಅಲ್ವ? ನಮ್ ಪಿರೂತಿನು ಹಂಗೆ ಅಂತ ತಿಳ್ಕಂಡಿವ್ನಿ...

ಬಂಗಾರಿ, ಬಯಾ ಆಯ್ತ ಐತೆ ಕಣೆ ನಂಗೆ.ಹೀಗೆ ದನಕುರಿ ಕಾಯ್ತ ಇರೋನ ನಿನ್ ಹೇಗಾದ್ರು ಪಿರೂತಿ ಮಾಡೀಯ? ನಿಮ್ಮ್ ಅವ್ವ ಅಪ್ಪಾ ಆದ್ರು ಹೆಂಗಾರ ನನಗೆ ಮದ್ವಿ ಮಾಡಿ ಕೊಟ್ಟಾರು ಹೇಳು ನೋಡುವಾ.ಕಂಡು ಕಂಡು ಮಗಳನ್ನ ಹಳ್ ಬಾವಿಗ್ ಯಾಕಡ್ರು ನೂಕ್ತಾರೆ ಏಳ್ ನೋಡುವ ಮತ್ತೆ? ನನಗು ಎಲ್ಲ ಯೋಚ್ನೆ ಇತೆ ಕಣೆ ಅದ್ರೆ ಎನ್ ಮಾಡ್ಲಿ ಈ ಪೆದ್ದು ಮನ್ಸು ಕೇಳಾಕಿಲ್ಲ ಅನ್ನುತ್ತೆ..ನೀನೆ ಬೇಕು ಅನ್ನುತ್ತೆ ನೀನಿಲ್ದೆ ಇರಾಕಾಗಕಿಲ್ಲ ಅನ್ನುತ್ತೆ.ಈ ಮನ್ಸಿಗೆ ಇವೆಲ್ಲ ವಿಸ್ಯ ಹೆಂಗಾರ ಅರ್ಥ ಆಯ್ತದೆ ಹೇಳೂ.. ಅದಕ್ಕೆ ಬಂಗರದಂತಿರೋ ನೀನು ಬೇಕು ಅಷ್ಟೆ...ನಾನಾದ್ರು ಒಂದ್ ಕಿತಾ ನು ನಿನ್ ತಾವ ಏನು ಯೇಳೆ ಇಲ್ವಲ್ಲ,.. ಯೇಳೊಕೆ ಏಗಾದ್ರು ಮನ್ಸ್ ಬರ್ಥೈತೆ ಯೇಳು ನೋಡುವ ? ನನ್ ಹತ್ರ ಎನ್ ಇತೆ ಅಂತ ನಿನ್ ಮದ್ವೆ ಅಯ್ತೀನಿ ಬಂಗರಿ ಅಂತ ಹೇಳ್ಲಿ? ಅಪ್ಪ ಹಾಕಿದ್ ಆಲದ್ ಮರಾ ಅಂತರಲ್ಲ ಹಂಗೆ 1 ಎಕರೆ ಜಮೀನ್ ಇತೆ ಅದು ಬಿಟ್ರೆ ನನ್ನವ್ವೆ ಅಂತ ಸ್ವಲ್ಪ ದನಕುರಿಗಳ್ ಅದಾವೆ ಅದ್ರಲ್ಲ್ ರಾಜಕುಮಾರಿ ತರ ಬೆಳೆದ ನಿನ್ನ ಹೇಗ್ ರಾಜಕುಮಾರಿತ್ರ ನೋಡ್ಲಿ ಬಂಗಾರಿ? ನನಗೆ ಅಮ್ಮ ಇಲ್ಲ ಅಪ್ಪ ಇಲ್ಲ ನಿಜ.ಆದ್ರೆ ನನಗೆ ಒಂಟಿಯಾಗಿ ಬೆಳೆದ್ ಅಬ್ಯಾಸ ಆಗೋಗಿದೆ.ಅತ್ರೆ ಮುದ್ದಿಸೋರಿಲ್ಲ ಸತ್ರೆ ಹೊದ್ದಿಸೋರಿಲ್ಲ ಅಂತಾರಲ್ಲ ಚಿನ್ನ ಹಾಗೆ. ಆದ್ರೆ ಈ ಬದ್ಕು ಅನ್ನೋದು ಎಷ್ಟ್ ಬಣ್ಣ್ ಬಣ್ಣ್ದದ್ ಅಸೆ ಹೊಮ್ಮುಸ್ತೈತಿ ಅಂದ್ರೆ ನನಗೆ ಹೇಳಾಕಾಗಕಿಲ್ಲ. ನಿನ್ನೆವರ್ಗು ನನಗೆ ಯರು ಇಲ್ಲ ಅನ್ನೊ ಸತ್ಯ ನ ಇವತ್ತು ಬಂದ ನಿನ್ನ ನೆನಪು ಹ್ಯಾಗೆ ಮರೆ ಮಾಡಿ ಬುಡ್ತು ನೋಡು? ಹಾಗೆ ನೀನು ನಾ ಬದ್ಕಿರಗಂಟ ನನ್ ಕೂಡಿ ಇದ್ರೆ ಎಷ್ಟ್ ಸಂದಾಕಿರ್ತದೆ ಅಂತ ಏಚನೆ ಮಾಡಿದ್ರೆ ನಂಗೆ ಯೆಂಗೆ ಕುಸಿ ಆಯ್ತದೆ ಗೊತ್ತ ಬಂಗಾರಿ?.....ನನಗೆ ಗೊತ್ತು ನಿಮ್ಮ್ ಚಿನ್ನದಂತ ಅವ್ವಾ ಕೂಡ ನಿನ್ನ ನನಗೆ ಮದ್ವಿ ಮಡಿ ಕೊಟ್ಟು ನಿನ್ ಜೀವ್ನ ಹಳ್ ಮಾಡ್ಖೋಳ್ಳೋಕೆ ಒಪ್ಕೊಳ್ಳೋದಿಲ್ಲ ಅಂತ ನಿಮ್ಮ್ ಅಪ್ಪಾ ಕೂಡ..ಆದ್ರೆ ಒಂದು ಸಲ ನನ್ ನೋಡು ಯಾವತ್ತು ನಿಂಗೆ ಬ್ಯಾಸರ ಆಗ್ದೆ ಇರೊ ಹಂಗೆ ನೋಡ್ಕೊತೀನಿ..ಇರೋ1 ಎಕರೆ ಜಮೀನ್ ನಲ್ಲೆ ಬಂಗಾರ ಬೇಳಿಯೋಣ..ಕಷ್ತ ಪಟ್ಟು ದುಡಿತೀನಿ ರಾಜಕುಮರಿ ಹಂಗೆ ಅಲ್ಲ್ದೆ ಇದ್ರು ನಿನ್ನ ನನ್ನ ರಾಜಕುಮಾರಿ ತರ ನೋಡ್ಕೋತೀನಿ...ಲೋಕ ನೂರೆಂಟ್ ಹೇಳ್ಲಿ ನನಗು ನಿನ್ಗು ಜೋಡಿ ಸರಿಯಾಗಕಿಲ್ಲ ಅಂತ ..ಮನ್ಸು ಇಲ್ದ ಲೋಕ ಇದು ಪಿರೂತಿ ಬೆಲೆ ಗೊತ್ತಿಲ್ಲ ಇದಕ್ಕೆ. ಬರಿ ಸ್ವಾರ್ಥ ಇರೊ ಈ ಲೋಕದಗ ನನ್ನ ನೀನ್ ಬಿಟ್ ಹೋಗ್ ಬ್ಯಾಡ....ನನಿಗೆ ನಿನ್ನ ಬಂಗಾರ ಚಿನ್ನ ಮುದ್ದು ಅಂತ ಹೊಗಳಾಕೆ ಬರಾಕಿಲ್ಲ ನೋಡು ನಿನ್ನ ಜೀವದಾಗ ಜೀವ ಇಟ್ಟು ಪಿರೂತಿ ಮಡಾಕ ಮಾತ್ರ ಗೊತ್ತೈತೆ ನನಿಗೆ.ನಿನಗೆ ನಾನು ಇಷ್ಟ ಇಲ್ಲವ? ಇಷ್ಟ ಆಗಾಕಿಲ್ವ? ಬ್ಯಾದ ಬಿಡು ನಾನ್ ಇಷ್ಟ ಪಡ್ತೀನಿ..ನೀನ್ ನನ್ ಕೂಡಿ ಜೀವನ ಮಾಡಾಕಿಲ್ಲ ಅಂದ್ರೆ ಬ್ಯಾರೆಯವರ್ ತರ ನಿನ್ ಓಡಿಸ್ಕೊಂಡು ಹೋಗೋದು .ನಿಂಗೆ ತೊಂದ್ರಿ ಕೊಡೋದು ನಿಮ್ ಮನಿ ಮುಂದೆ ಬಂದ್ ಜೋರಾಗ್ ಕೂಗೋದು ಎನ್ ಅಂದ್ರೆ ಎನ್ ಮಾಡಾಕಿಲ್ಲ ..ನಾನು ಬಂಗರದಂತ ಹುಡುಗಿನ ಇಷ್ಟ ಪಟ್ಟೇನಿ ಅಂದ್ರ ನನ್ ಮನ್ಸಾಗ ವಿಷ ಇರಾಕ ಹೇಗಾದ್ರು ಸಾದ್ಯ ಹೇಳು ಚಿನ್ನ?ಜೀವನದಗ ಕಷ್ಟ ಸುಖಾ ಇರ್ತಾವಂತ ನನಿಗೆ ಅವೆಲ್ಲಾ ತಿಳಿಯಾಕಿಲ್ಲ ನನಿಗೆ ಇವೆರೆಡರ ಯತ್ವಾಸ ಕೂಡ ಗೊತ್ತಿಲ್ಲ.ಆದ್ರೆ ನೀನ್ ನನ್ ಜೊತಿ ಇಲ್ಲದ ವ್ಯಾಳೆ ಮಾತ್ರ ನಾನ್ ಕಳಿಯಾದು ಕಷ್ತ ಆಗುತ್ ನೋಡು..ಜೀವನ್ ಪರ್ಯಾಂತ ನೀನ್ ಇಲ್ದೆ ಇರೋದ್ನ ನೆನಪ್ ಮಡಿಕೊಂಡ್ರೆ ಯಾಕೊ ಮನ್ಸು ಹಿಂಡಿದ ಹಾಗ್ ಆಗುತ್ತೆ. ಆದ್ರೆ ಜೀವನ್ ಪರ್ಯಂತ ನಿನ್ ನೆನಪೊಳಗೆ ಇರ್ತಿನಲ್ಲ ಅಂತ ತಿಳ್ಕೋಂಡು ಮತ್ತೆ ಕುಸಿ ಆಗುತ್ತೆ. ಅದು ನೋವು ದುಃಖ ಹತಾಷೆ ಬರಿ ಕನ್ಸು ತುಂಬಿದ ಸಂತೋಷ ಅಷ್ಟೆ ಕಣೆ.ಅದ್ರಲ್ಲಿ ನನಿಗೆ ಹೇಗೆ ಬದುಕ್ ಬೇಕು ಅಂತ ತಿಳೀತಿಲ್ಲ...ಒಂದೋಂದು ಕಡೆ ಭೂಮಿ ಆಕಾಶ ಒಂದಾದ ಹಂಗೆ ಕಾಣುತ್ತಲ್ಲ? ಎಷ್ತ್ ಸಂದಾಕಿರುತ್ತೆ ಅದ್ನ ನೋಡೋಕೆ? ಅದು ನಿಜಕ್ಕು ಒಂದಾದ ಹಗೆ ಕಾಣುತ್ತೆ ಆದ್ರೆ ಸತ್ಯವಾಗಲು ತುಂಬಾ ದೂರಾನೆ ಇರುತ್ತೆ ಅಂತ ತಿಳಿದು ಒಂತರ ಬ್ಯಾಸರ ಆಗುತ್ತೆ ...ಒಂದಾದ್ರೆ ತುಂಬಾ ಕುಸಿ ಅಲ್ವ?.................ಗೊತ್ತು ಬಿಡು ಕನಸು ಕಾಣೊದು ತಪ್ಪಲ್ಲ ಆದ್ರೆ ಎಂತಾ ಕನಸು ಕಾಣಬೇಕು ಬಂಗಾರಿ? ಅಷ್ಟು ಗೊತ್ತಾಗೊಲ್ಲ ಈ ಹಳ್ಳಿ ಹೈದನಿಗೆ....ಕೇವಲ ನಿನ್ನ ನೆನಪೊಳಗೆ ಜೀವನದ ಅರ್ತ ಹುಡುಕ ಹೊರಟ ಒರಟನಿವನು. ಕ್ಷಮಿಸಿ ಬಿಡು ತುಂಬಾ ದೊಡ್ಡ ದೊಡ್ಡ?? ಆಸೆಗಳಿಟ್ಟು ಕೊಂಡ ನಿನ್ನ ಪ್ರೀತಿಯ ಅತೀ ಚಿಕ್ಕ ಹುಡುಗಹಳ್ಳಿ ಹೈದ ಮನ್ಸು ಶುದ್ಧ ಸುಳ್ಳು ಹೇಳೋ ಕುಲವಲ್ಲ

ನಾ ಬಚ್ಚಿ. ಮುಚ್ಚಿಡೋ ಪತ್ರ

ನಾ ಬಚ್ಚಿ. ಮುಚ್ಚಿಡೋ ಪತ್ರ(...ಪ್ರೇಮಪತ್ರ!!)ಗಳ ಸಾಲಿಗೆ ಮತ್ತೊಂದು, sorry ಕಣೇ ಇದುವರೆಗೂ ನಾ ಬರೆದ ಪತ್ರಗಳನ್ನ ನಿನಗೆ ಕೊಡದಿದ್ದಕ್ಕೆ, ನೀ ಅದನ್ನ ಓದದ್ದಕ್ಕೆ!! ಅಷ್ಟಕ್ಕೂ ನಾನು ನೀ ಓದಲಿ ಅಂಥ ಬರೆದಿಲ್ಲ, ಬರೀತಾ ಇಲ್ಲ.. ನಾ ಬರೆಯೋ ಪತ್ರಗಳು, ಅದರೊಳಗಿನ ಸಾಲುಗಳು ನಿನಗೋಸ್ಕರ ಮಾತ್ರ ಬರೆದಿದ್ದಲ್ಲ...ಅವು ನನಗೋಸ್ಕರ, ನನ್ನೊಳಗಿನ ನಿನಗೋಸ್ಕರ ಮತ್ತೊಮ್ಮೆ ಹೇಳ್ತಾ ಇದಿನಿ ಕೇಳು...ನನ್ನೊಳಗಿನ ನಿನಗೋಸ್ಕರ..!!, ನಾ ನಿನ್ನ ನೆನಪಲಿ ಕಳೆದ sorry "ಬದುಕಿದ" ಕ್ಷಣಗಳಿಗೋಸ್ಕರ.. ನಿನ್ನ ನೆನಪಲಿ ತೇಲೋದಕ್ಕೆ ಸಾಥ್ ಕೊಟ್ಟ ಆ ಗಾಳಿಗೋಸ್ಕರ, ನಾ ಏಕಾಂತದಲಿ ಗುನುಗಿದ ಹಾಡುಗಳಿಗೋಸ್ಕರ..ನೋವಿದ್ದ ಸಾಲುಗಳಿಗೋಸ್ಕರ.. ಇರಲಿ ಬಿಡು...ಮತ್ತೆ ಉತ್ತರ ಬಾರದ ನಿನ್ನೆಡೆಗೆ ಮತ್ತೊಂದು ಪ್ರಶ್ನೆ..! ಈ ಜಗತ್ತಲ್ಲಿ.. ನಾವು ಅಂದ್ರೆ ಮನುಷ್ಯರು ಪ್ರೀತಿ ಯಾಕ್ ಮಾಡ್ತೀವಿ, ಅಥವಾ ಪ್ರೀತಿಯ ಬಲೆಗೆ ಯಾಕ್ ಬೀಳ್ತೀವಿ ಗೊತ್ತಾ..? sorry ನಿನಗದು ಗೊತ್ತಿರಲಿಕ್ಕಿಲ್ಲ ಬಿಡು.. ನನ್ನ ಪ್ರಕಾರ..ಕೆಲವರು ತಾವು ಬದುಕಿಷ್ಟು ದಿಸ ಸಿಕ್ಕದ ಸಂತೋಷಕ್ಕೋಸ್ಕರ, ತಾವು ಪಡೋ ಸಂತೋಷಕ್ಕೆ ಒಂದು ಹೆಸರಿಡೋಗೋಸ್ಕರ...ಇನ್ನು ಕೆಲವರು ತಮ್ಮಲ್ಲಿರೋ ಸಂತೋಷವನ್ನ ಅಂಚಿಕೊಂಡು ಬದುಕಕ್ಕೆ.. ಕೆಲವರು ನಮ್ UPPI ಹೇಳೋ ಹಾಗೆ ಕ್ಷಣಿಕ ಸುಖಕ್ಕಾಗಿ.. ಪಾಪ ಇನ್ನು ಕೆಲವರು ಗೊತ್ತಿಲ್ಲದೇ ತಪ್ಪು ಮಾಡ್‍ಬಿಡ್ತಾರೆ...!!ಆದ್ರೆ ನಾನ್ ಇವುಗಳಲ್ಲಾವುದರ ಗುಂಪಿಗೂ ಸೇರದವನು... ನಾನು ನೋವಿಗಾಗಿ ಪ್ರೀತಿಸಿದವನು.. ಪ್ರೀತಿಸುತ್ತಿರುವವನು!! ಅಂಥವರೊದೊಂದು ಗುಂಪು ಅನ್ನೋದ್ ಇದ್ರೆ..ಅವ್ರಲ್ಲಿ ನಾನೂ ಒಬ್ಬ!! ಅವರು ಕೈಗೆ ಸಿಗದ ಚಂದಮಾಮನ ನೋಡಿ ತಾಯಿ ನೀಡೋ ತುತ್ತು ತಿನ್ನೋ ಮುಗುದ ಮಕ್ಕಳ ಹಾಗೆ.. ಗಾವುದ ದೂರದಲ್ಲಿ ಮೂಡಿದ ಬಣ್ಣದಬಿಲ್ಲಿನ ಮೋಡಿಗೆ ಗರಿಗೆದರಿದ ನವಿಲಿನ ಹಾಗೆ!!ಅವರಿಗೆ ಗೊತ್ತಿದ್ದೋ, ಗೊತ್ತಿಲ್ದೇನೋ ತಮಗೆ ಒಲಿಯದ, ನಲಿಯದ ಪ್ರಿತಿಗಾಗಿ ಅರೆಕ್ಷಣವಾದ್ರು ತುಡಿಯುತ್ತಿರುತ್ತಾರೆ, ಮಿಗಿಲಾಗಿ "ಪ್ರೀತಿಸದ" ಹೃದಯವನ್ನ ಪ್ರೀತಿಸುತ್ತಿರುತ್ತಾರೆ!! ಇವರನ್ನ "ಹುಚ್ಚರು" ಅನ್ನೋ ಮುದ್ದಾದ label ಹಾಕಿ ನಗುತ್ತದೆ ಈ ಲೋಕ!!ಪ್ರಿಯಾ...ನಾ ಅಂಥವರಲ್ಲಿ ಒಬ್ಬ.!!ನನಗೊತ್ತು ನೀ ಪ್ರೀತಿಸೋಲ್ಲ.. ಪ್ರೀತಿಸಿದರು ನನ್ನ.. ಉಹೂಂ ಪ್ರೀತಿಸೋದೇ ಇಲ್ಲ, ಆದ್ರೂ ಪ್ರಿಯಾ ನಾ ನಿನ್ನ ಪ್ರೀತಿಸ್ತಿನಿ.. ಯಾಕಂದ್ರೆ ನಾನು ಬದುಕಬೇಕು! ಪ್ರೀತಿ ಇಲ್ಲ ಅಂದ್ರೆ ಬದುಕಲಾಗುತ್ತ...? ಬದುಕಿದರೂ ಅದು ಒಂದು ಬಾಳಾ... ಬದುಕಾ...? ಪ್ರಿಯಾ ಹೇಳ್ತಿನಿ ಕೇಳು.. ಕೆಲವೊಂದು ಸಲ ಅನ್ಸುತ್ತೆ ಈ ಜಗತ್ತಲಿ...ನನ್ನೊಷ್ಟು ಖುಷಿಯಿಂದ ಯಾರೂ ಬದುಕ್ತಾ ಇಲ್ಲ ಅಂಥ... ಆದ್ರೂ ನಾನು ಪ್ರೀತಿಸ್ತಾ ಇದಿನಿ.. ನೋವಿಗಾಗಿ..ನೋವೊಳಗಣ ’ನಲಿವಿಗಾಗಿ’ ; Being haPPy always is a kiNd of BoriNg.... thatz why am iN luv..with u!!

ಪ್ರೀತಿಯಿಂದ ಸಂತೋಷ ಬಯಸೋರು ಬೇಜಾನ್ ಜನ... ಆದ್ರೆ ಅದು ಸಿಗೋದ್ ಕಡಿಮೆ ಮಂದಿಗೆ...ಪ್ರೀತಿಯಿಂದ ನೋವು ಬಯಸೋರು.. ತುಂಬಾನೇ ಕಮ್ಮಿ... ಆದ್ರೆ ಅದು ಬೇಜಾನ್ ಜನಕ್ಕೆ ಸಿಗುತ್ತೇ..." ವಿಪರ್ಯಾಸ ಅಂತಾರಲ್ಲ.. ಇದೇ ಇರಬೇಕು...!! ಪ್ರಿಯಾ.. ನಿನ್ನನ್ನ ತುಂಬಾ ಪ್ರೀತ್ಸೋರು ನಿನ್ನ..ತಂದೆ..ತಾಯಿ ಅಕ್ಕ..ಅಣ್ಣಾ.ತಾಂಗಿ..ಇನ್ನು ಎಷ್ಟೋ ಮಂದಿ ಇದಾರಲ್ಲ... ಅವರಿಗಿಂತ ಜಾಸ್ತಿ ನಿನ್ನ ಪ್ರೀತಿ ಮಾಡ್ತೀನಿ ಅಂಥ ನಾ ಹೇಳಲ್ಲ.. ನಿನ್ನ ಪ್ರೀತ್ಸೋರ ಸಾಲಲ್ಲಿ.. Atleast ಲಾಸ್ಟ್ ನಲ್ಲಿ ನಿಂತಿರಿತ್ತೀನಿ ಪ್ರಿಯಾ.. ಕಂಬನಿ ತುಂಬಿದ ಕಣ್ಣುಗಳ ಕಾಣಿಕೆಯೊಂದಿಗೆ... ಮರೆತಾದ್ರೂ, ಗೊತ್ತಿಲ್ಲದೆ ನನ್ನೆ ಕಡೆ ಒಮ್ಮೆ ನೋಟವಲ್ಲದ ನೋಟ...ಎಸೆ.. ನನ್ನ ಕಂಗಳು ಅದಕ್ಕೋಸ್ಕರ ಕಾಯ್ತಾ ಇರ್ತವೆ..ನಾನೂ ಕೂಡ!!ಪ್ರಿಯಾ ಪ್ರೀತ್ಸೇ..ನನ್ನಲ್ಲದಿದ್ದ್ರೂ.. ಇನ್ಯಾರನ್ನೋ... ಅದು ಬೇಡ atlest ನಿನ್ನನ್ನ...ಪ್ರೀತ್ಸು!! ನಿನ್ನ ಬಾಳೊಂದು ಬರಿಯ ಬಿಳಿ ಮೋಡ ತುಂಬಿದ ಮುಗಿಲಾಗದಿರಲಿ... ಮಳೆ ಸುರಿಸೋ ಕಾರ್ಮೋಡಗಳನ್ನ ಹೊತ್ತ ಮುಗಿಲಾಗಲಿ... (ಪ್ರೀತಿಯ)ಮಳೆಗೆ ಕಾದು ಬೆಂದ ಎಷ್ಟೊ ನೆಲಗಳಿವೆ...ಬರಿದಾದ ಎದೆಗಳಿವೆ.. Ofcorse ಅವರಲ್ಲಿ..ನಾನೂ ಒಬ್ಬ ಇರುತ್ತೀನಿ ಕಣೇ!!! ಕರುಣೆ ಇರಲಿ...ಈ ಪತ್ರ ಎಲ್ಲೋ, ಹೇಗೋ... ಓದಿ..ನೀ ನಾಲ್ಕು ಹನಿ ಕಣ್ಣ್ರೀರು ಸುರಿಸಿದರೆ(ಮೊಸಳೆ ಕಣ್ಣೀರಾದರೂ...!!) ನಿಜಕ್ಕೂ..ಸಂತೋಷ..ತಪ್ಪು ತಿಳಿಯಬೇಡ , ತಾವು ಪ್ರೀತ್ಸೋರ ಕಣ್ಣಲ್ಲಿ ನೀರು ಬಯಸೋರು ಇರಲ್ಲ..ಆದ್ರೆ ನಾ ಬಯಸ್ತಾ ಇದಿನಿ..ನನ್ನ ಬರಡಾದ ಮನ ಬಯಸ್ತಾ ಇದೆ.. plz.." ನನ್ನ ಪ್ರೀತಿಗೆ..ಅದರ ರೀತಿಗೆ.. ನೀ ಕೊಡಬಹುದಾದ ಕಾಣಿಕೆ...ನಿನ್ನ ಕಣ್ಣ ಹನಿಗಳೇ...!!"ನಿನ್ನ ನೋಯಿಸಿದ್ದಕ್ಕೆ ಕ್ಷಮೆ ಇರಲಿ...ನಿನ್ನ ನೆನಪುಗಳು ಮನದ ಕದ ತಟ್ಟಿ ಕಾದು ಕುಳಿತವೆ.. ಅವುಗಳೊಡಾನೆ ಮನದಂಗಳದಲಿ ಕಣ್ಣಾಮುಚ್ಚಾಲೆ..ಆಟ ಆಡ್ಬೇಕು... ರೇಡಿಯೋದಲ್ಲಿ ಬರ್ತಾ ಇರೋ..ಕೆ.ಎಸ್.ನ..ರ..." ನಿನ್ನ ಪ್ರೀತಿಗೆ ಅದರ ರೀತಿಗೆ... ಕಣ್ಣಹನಿಗಳೇ..ಕಾಣಿಕೆ..." ಹಾಡು ಕೇಳ್ಬೇಕು... ಜೊತೆಗೆ ಹಾಡ್ಬೇಕು..ಇನ್ನು ಏನೇನೋ... ಬರಲಾ..ಅಗೋ ಇನ್ನೊಂದ್ ಹಾಡ್ ಕೇಳ್ತಾ ಇದಿಯಾ... "...ಒಂದು ಪ್ರೀಮಿಗಾಗಿ ಪ್ರೀಮಿಯೊಬ್ಬ ಇರದ ಕ್ಷಣ, ಈ ತಿರುಗೋ ಭೂಮಿ ತಿರುಗದೆಂದೂ ಒಂದೂ ಕ್ಷಣಾ...!!...... ಅಟ್ಟದ ಮೇಲೆ ಎತ್ತಿಡೋದಕ್ಕೆ ’ಪ್ರೇಮಪತ್ರ’ ಬರೆದ.. ಕೆಟ್ಟ ಪ್ರೇಮಿ...!!ಮರೆತೆ.. be haPPy keeP smiliNg...!!

ಹಾಯ್ ಸುಸ್ಮಿ....

ಹಾಯ್ ಸುಸ್ಮಿ.... ಕೆಲವು ದಿನಗಳಿಂದ ಒಬ್ಳು ಬಹಳ ಕಾಡ್ತಾ ಇದಾಲೇ .... ಹೆಸ್ರೇನು ಅಂದ್ರೆ ಹೇಳೋದೇ ಇಲ್ಲ. ಅವಳು ಸಿಕ್ಕು 2 ವಾರ ಆಯ್ತು, ಈ ಎರಡು ವಾರದಲ್ಲೇ ಅದೆಷ್ಟು ಪ್ರಶ್ನೆಗಳನ್ನ ಹುಟ್ಟು ಹಾಕಿದ್ದಾಳೆ ಅಂದ್ರೆ... ನಂಗಂತೂ ತಲೇನೇ ಕೆಟ್ತಿದೆ. ಇದ್ದಕಿದ್ದಂತೆ ಕಾಲೇಜ್ ಗೆ ಬಂದು ದೊಡ್ಡ ಶಾಕ್ ಕೊಟ್ಲು, ಅಲ್ಲಿ ಎಲ್ಲರಿಗೂ ಇವಳು ನನ್ನ ಗೆಳತಿ ಅಷ್ಟೇ ಅಂತ ಹೇಳಿ ಹೇಳಿ ಸಾಕಾಗಿ ಹೋಯ್ತು, ನೋಡಿದ್ರೆ ಮೊನ್ನೆ ಮನೆಗೆ ಕರ್ಕೊಂಡ್ ಹೋಗಿ,ಎಲ್ಲರಿಗೂ ಪರಿಚಯ ಮಾಡ್ಸಿ eವನೇ ನನ್ನ ಬಾಯ್ ಫ್ರೆಂಡ್ ಅಂತ ಹೇಳ್ತಾಲೆ, ನಂಗಂತೂ ಪ್ರಾಣ ಕೈಗೇ ಬಂದಿತ್ತು ಕಾಲಿಗೆ ಬುದ್ಡಿ ಹೇಳಿ ಹೇಗೋ ಮಾನೆಗ್ ಬಂದೆ. ಈ ನಡುವೆ ಕ್ಲಾಸ್ ತುಂಬಾ ಅದೇ ಮಾತು, ನಮ್ಮ ಸಾರ್ ಕೂಡ ಎನ್ ಶಿವು ಸಮಚಾರ ಅಂತ ಹೆಗಳಮೇಲೆ ಕೈ ಹಾಕೋಕ್ ಬರ್ತಾನೆ....ಎಂತ ಪರಿಸ್ಥಿತಿಗೆ ತಂದಿದ್ಲು ಅಂದ್ರೆ.... ಅಮ್ಮ ಮಹಾ ತಾಯಿ ಅಪ್ಪಿ ತಪ್ಪಿ ಮನೆಗೇನಾದ್ರೂ ಬಾಂದ್ಗಿಂದ್ ಬಿಟ್ಟಿಯ ನಂಗಾಗ್ಲೇ ಸುಸ್ಮಿತಾ ಅನ್ನೋ ಗೆಳತಿ ಇದಾಲೇ ನೀನೇನಾದ್ರೂ ನಮ್ಮ ಮನೆಗೆ ಬಂದ್ರೆ ನಾನು ಅವಳು ಇಬ್ಬರು ವಿಷ ಕುಡಿಬೇಕಾಗುತ್ತೆ, ನಮ್ಮಿಬ್ಬರ ಜೀವನ ನಿನ್ನ ಕೈಯಲ್ಲಿದೆ, ನಮ್ಮಣ್ಣ ಕಾಪಾಡು ಅಂತ ಕಾಲೀಗ್ ಬೀಳೋದಕ್ಕೋದ್ರೆ ಕಾಲೇ ಇಲ್ಲ ಆ ಮುಂಡೇದಕ್ಕೆ ಭಯ ಆಯ್ತು. ಆ ಹೊತ್ತಿಗೆ ಅಪ್ಪ ಗಂಟೆ 8 ಆಯ್ತು ಇನ್ನೂ ಹಾಸಿಗೆಯಲ್ಲೇ ಇದಿಯ ಅಂದ್ರೂ.....ಸದ್ಯ ಕನಸು ಅಂತ confirm ಆದ್ಮೇಲೆ ಹೋದ ಜೀವ ವಾಪಸ್ ಬಂದಂಗ್ ಆಯ್ತು..... ದೆವ್ವಗಳು ಸಹ ಕಾಡೋದಕ್ಕೆ ಹುಡುಗಿರ ವೇಷ ಹಾಕುತ್ತಾಲ್ಲ ಅದು ಕನಸಲ್ಲಿ. ಅದಕ್ಕೆ ಸುಸ್ಮಿ ಹೇಳಿದ್ದು ನಮ್ಮನ್ಣ ಕಂಡ್ರೆ ಕನಸುಗಳಿಗೂ ಹೊಟ್ಟೆ ಕಿಚ್ಚು ಅಂತ..... ಸರಿ ರಾತ್ರಿ ಮಾಲ್ಗೋವಾಗ ಆಂಜನೇಯನ ಮಂತ್ರ ಹೇಳಿ ಮಲಗು.... ಸರಿನಾ.....( ತಪ್ತಪ್ಪಾಗಿ ಬರ್ದಿದೀನಿ ಅಂತ ಬೈ ಬೇಡ)

ಮೈಮನಗಳ ಸುಳಿಯಲ್ಲಿ...

ಮೈಮನಗಳ ಸುಳಿಯಲ್ಲಿ...ಒಂದೊಂದು ಸಾರಿ ಬದುಕು ಅಂದ್ರೆ ಹೀಗೆನಾ? ಅನ್ನಿಸಿಬಿಡುತ್ತೆ. ಆದ್ರು ಬದುಕಿನ ಪ್ರತಿ ಕ್ಷಣಗಳನ್ನ ಅನುಭವಿಸುವ ನನ್ನ ಪರಿಗೆ ನಿನ್ನ ಮಿಲನ ಹಾಲು-ಜೇನಿನ ಹಾಗಾಯ್ತು, ಮನಸ್ಸು ಮುದಗೊಂಡು ಮೈಮನ ಜುಮ್ ಎಂದು ಜೇಂಕರಿಸುತ್ತಿದೆ. ಆ ಒಂದೊದು ಘಳಿಗೆಗಳು ನನ್ನ ಮುಂದೆ ಹಾದು ಹೊಗುತ್ತಿವೆ.... ಬಿಸಿಲಿನ ಬಡಿತಕೆ ಸೋತು ಕಾದ ಧರೆಗೆ, ಮುಗಿಲು ಉಣಿಸಿದ ಅಮೃತ ಸಿಂಚನದಂತೆ. ಇಂದೆ ಇಲ್ಲೆ ಈ ಘಳಿಗೆನೆ ಬದುಕು ಅನ್ನೊದು ನಿಂತು "ದಿ ಎಂಡ್" ಅಂತ ಅಂದ್ರು ಖುಷಿಯಾಗಿ ಸ್ವಿಕರಿಸ್ತೆವೆನೊ?....ಎಲ್ಲೊ ದೂರದಲ್ಲಿ ಕೇಳೊ ಇಂಪಾದ ಸಂಗೀತ ಅದನ್ನ ಹೊತ್ತು ತಂದು ಕಿವಿಗೆ ತಟ್ಟುವ ತಣ್ಣನೆಯ ಗಾಳಿ. ಆಗಾಗ ಮೇಲಿಂದಿಳಿದು ಬಂದು ಮುತ್ತಿಕ್ಕುವ ನಿನ್ನ ಮುಂಗುರುಳು, ಮಾತು ಮಾತಿಗೂ ಮೈಯೆಲ್ಲ ಜೂಮ್ ಎಂದು ಒಂದು ಸಾರಿ ಕಣ್ಣು ಮುಚ್ಚಿ ಸೆಟೆದು ನಿಲ್ಲಿವ ಅ ನಿನ್ನ ಪರಿ, ಹಾಗೆ ನನ್ನನ್ನ ತಪ್ಪಿಸಿ ವಾರೆಗಣ್ಣಿನಲ್ಲಿ ಕಣ್ಣಲ್ಲಿ ಕಣ್ಣಿಟ್ಟು ನೋಡುವ ನಿನ್ನ ಧೈರ್ಯ, ಇದೆಲ್ಲದರ ನಡುವೆ ಎಲ್ಲಿ ದೃಷ್ಟಿ ಬೀಳುತ್ತೊ ಅಂತ ಅವನಿತ್ತ ತುಟಿಯ ಕೆಳಗಿನ ಚುಕ್ಕಿ .... ಕಾಡಿದೆ ನನ್ನನ್ನು.ಅಯ್ಯೊ ಅವಾಗ್ಲೆ ಅರ್ಧ ಗಂಟೆ ಆಗೊಯ್ತಲ್ಲ.... ಇನ್ನಿರೊದೆ ಅರ್ಧ ಗಂಟೆ ಅಂತ ಒಳಗೊಳಗೆ ಕಾಲಕ್ಕೂ ಶಾಪ ಹಾಕ್ಕೊತ್ತಿಯಾ... ಬಸ್ ಹಿಡಿಬೇಕು .... ಯಾವ್ದು ಸಿಗುತ್ತೊ.... ಅಮ್ಮ ಅನುಮಾನ ಪಡೊ ಮುಂಚೆ ಮನೆ ಸೆರ್ ಬೇಕು. ಮದ್ಯೆ ಮದ್ಯೆ ಬರೋ ಫೊನ್ ಕಾಲ್ಗಳೊ .... ಕೆಲವನ್ನ ಹಾಗೆ ಬಿಡೋದು...ಮತ್ತೆ ಕೆಲವಕ್ಕೆ ಸಿಕ್ಕಾಪಟ್ಟೆ ಬಿಜಿ ಇದ್ದಿನಿ .... ಆಮೇಲ್ ಮಾಡ್ಲಾ ಪ್ಲೀಜ್ ಪ್ಲೀಜ್ ಅಂತ ನೈಸಾಗಿ ನುಣಿಚಿಕೊಳ್ಳೊದು.... ಎಷ್ಟು ಸರ್ಕಸ್ ಮಾಡ್ತಿಯೊ ... ಈ ಸಣ್ಣ ಸಣ್ಣ ಖುಷಿಗಳಿಗಾಗಿ........ಅದಕ್ಕೆ ತಾನೆ ನಾನು ನನ್ನೆಲ್ಲ ಪ್ರೀತಿಯ ಸುಧೆ ಉಣಿಸೊದು . ನೀನು ಮಾಡೊ ಸರ್ಕಸ್ಸುಗಳಿಗೆ ಇಷ್ಟಾದರು ಮಾಡದಿದ್ದರೆ ಆ ಪ್ರೀತಿಗೆ ... ವಿಶ್ವಾಸಕ್ಕೆ ಎಲ್ಲಿ ಇರುತ್ತೆ ಹೇಳು ಬೆಲೆ.....

ಈ ಪ್ರಪಂಚದಲ್ಲಿ ನನ್ನಷ್ಟು ಸುಖೀ ಯಾರು ಇರಲಿಲ್ಲ.

ತುಂಬಾನೆ ತಪ್ಪುಗಳಿವೆ ಅದನ್ನು ಸರಿಪಡಿಸಿಕೊಂಡು ಓದಬೇಕಾಗಿ ಕೋರಿಕೊಳ್ಳುತ್ತಾ...... ಹೃದಯ ಸೂರೆಗೊಂಡ ಅವನೆ ನನ್ನ ಪಾಡಿಗೆ ನಾನಿದ್ದ ಅವಳ ಮುಂದೆ ಯಾಕೋ ಬಂದೆ. ಈ ಪ್ರಪಂಚದಲ್ಲಿ ನನ್ನಷ್ಟು ಸುಖೀ ಯಾರು ಇರಲಿಲ್ಲ. ಮಕ್ಕಳಿಗೆ ಮಕ್ಕಳಾಗಿ ನಲಿಯುತ್ತಿದ್ದೆ. ಜಾವ್ವನೆಯರಿಗೆ ಜಾವ್ವನೆಯಾಗಿ ಸಲಹೆಕೊಡುತ್ತಿದ್ದೆ. ತುಂತುರು ಮಳೆ-ಯಲ್ಲಿ ಯಾರ ಪರಿವೆ ಇಲ್ಲದೇ ನವಿಲಂತೆ ನರ್ತಿಸುತ್ತಿದ್ದೆ. ಗುಡುಗು-ಸಿಡಿಲಿನ ಪ್ರತಾಪಕ್ಕೆ ಗುಬ್ಬಚ್ಚಿಯಂತೆ ಬಾಗಿಲ ಸಂದಿ-ಯಲ್ಲಿ ಮುದುರುತ್ತಿದ್ದೆ. ಇಂತಹ ಮುಗ್ಧ ಮನದ ಕಿಶೋರಿಯನ್ನು ಪ್ರೀತಿಯೆಂಬ ಬಾವಿಗೆ ನೂಕಿ ಏನು ನಡೆದೇ ಇಲ್ಲದಂತೆ ನಿನ್ನದೇ ಒಂದು ಪ್ರಪಂಚದಲ್ಲಿ ಜೀವಿಸುತ್ತಿರುವೆಯಲ್ಲ ಇದು ಎಸ್ಟು ನ್ಯಾಯ? ಕಳೆದುಹೋದ ನನ್ನೆಲ್ಲಾ ಸುಖವನ್ನು ನಿನ್ನಿಂದ ಮರಳಿ ಕೊಡಲು ಸಾಧ್ಯವೇ? ಸಾಧ್ಯವೆಂದಾದಲ್ಲಿ ಅದನ್ನು ಮರಳಿಸು. ನಿನ್ನ ಪ್ರೀತಿಸುವುದನ್ನು ನಿಲ್ಲಿಸಲಾಗಾದಿದ್ದರು, ಅಂಗ- ಲಾಚುವುದನ್ನು ನಿಲ್ಲಿಸುತ್ತೇನೆ. ನಾನೀಗ ಮೌನದ ಚಿಪ್ಪಿನಲ್ಲಿ ಅಡಗಿ ಕುಳಿತ ಮುತ್ತಾಗಿದ್ದೇನೆ ಕಣೋ. ಮೂಕ ಹಕ್ಕಿಯಾಗಿ ವೇದನೆಯ ಗೀತೆ ಹಾಡುತ್ತಿದ್ದೇನೆ. ಅದ್ಯಾವುದು ನಿನಗೆ ತಿಳಿಯದು ಯಾಕೆಂದರೆ ನೀನು ಜಾಣ ಕೀವು-ಡ ಆದರೂ ನಿನ್ನದೇನು ತಪ್ಪಿಲ್ಲ ಬಿಡು. ಹುಡುಗರು ಸ್ನೇಹವನ್ನು ಪ್ರೀತಿಯೆಂದು ಭಾವಿಸುತ್ತಾರಂತೆ, ಹುಡುಗಿಯರು ಪ್ರೀತಿಯನ್ನು ಸ್ನೇಹವೆಂದು ಭಾವಿಸುತ್ತಾರಂತೆ ಆದರೆ ಅದು ನನ್ನ ವಿಷಯದಲ್ಲಿ ತಿರುಗಾ-ಮೂರುಗಾಯಿತು ಅಲ್ಲವೇ? ನೀನು ನನ್ನ ಜೊತೆ ಸ್ನೇಹಿತನಂತೆ ವರ್ತಿಸಿದೆ. ಆದರೆ ನಾನೇ ಅದನ್ನು ಅರ್ಥೈಸಿಕೊಂಡ ಪರಿ ಇದೆಯಲ್ಲ ಅದು ತಪ್ಪು. ಆಶಾಗೋಪುರ ಕಟ್ಟುತ್ತಾ ಹೋದವಲಿಗೆ ಅದು ಕುಸಿದಾಗಲೇ ಜೀವನವೆಂಬ ಶೀಖರ ಕುಸಿಯುತ್ತಿದೆ ಎಣಿಸಿದ್ದು. ನೀನು ಏನೋ ಸಮಾಜವನ್ನು ಉದ್ಧಾರ ಮಾಡುವ ಧ್ಯೇಯಕ್ಕಾಗಿ ಬ್ರಹ್ಮಚರ್ಯವನ್ನು ಸ್ವೀಕರಿಸಲು ಸಿದ್ಧವಾಗಿ ಹೊರಟೇಬಿಟ್ಟೆ. ಆದರೆ ನಾನು ಆ ರೀತಿ ಮಾಡಿದರೆ ನನಗೂ ನಿನಗೂ ಏನು ವ್ಯತ್ಯಾಸ? ನಾನು ಜೀವನದಲ್ಲಿ ಹೇದಿಯಾಗಿ ಜೀವನಕ್ಕೆ ಬೆನ್ನು ಹಾಕಿ ಒಡಲಾರೆ. ಹುಚ್ಚುಕಾನನದಲ್ಲಿ ಪೆಚ್ಚು ಮೊರೆಹಾಕಿಕೊಂಡು ಜೀವನನಡೆಸುತ್ತಿರುವೆ. ಪ್ರೀತಿ ಪ್ರೀತಿ ನಿನ್ನ ಆಟ ಸಾಕು ನಿಲ್ಲಿಸು ಒಂದೇ ಒಂದು ಮಾತಿನಲ್ಲಿ ನನ್ನ ಆಸೆ ನೆರವೇರಿಸು ಎಂದು ಎಸ್ಟು ಬೇಕಾದರೂ ಗೋಗರೆಯಲು ಸಿದ್ಧವಾಗಿದ್ದೆ. ಆದರೆ ಅದಕ್ಕೆಲ್ಲಾ ಗುಡ್‌ಬೈ ಎಂದು ಮಾತು ಮುರಿದು ಮರೆಯಾಗಿ ಹೋದೆ. ಮೂಕಮನಸ್ಸು ಮಂಕಾಗಿ ರೋಧಿಸುತ್ತಿದೆ. ಎಲ್ಲೇ ಇರು ಹೇಗೆ ಇರು ಓ ನನ್ನ ಒಲವೆ ನೀ ಸುಖವಾಗಿರು.

ಹೃದಯವಿದ್ದರೂ ಪ್ರೀತಿಸಲು ಬರದ ಹುಡುಗಿ

ಹಾಯ್.. ಹೃದಯವಿದ್ದರೂ ಪ್ರೀತಿಸಲು ಬರದ ಹುಡುಗಿ.. ಪ್ರಿಯಾ..!!ಹೇಗಿದ್ದೀಯಾ...?ಬಿಡು ನೀನ್ ಚೆನ್ನಾಗೇ ಇರ್ತೀಯಾ.. ನಿಂಗೇನು ದಾಡಿ.ಓಹ್ ನೋಡು ನಿಂಗೆ Exam ಇರೋದ್ ಮರ್ತೇ ಹೋಯ್ತು ನಂಗೆ, Sorry ಕಣೇ Disturb ಮಾಡ್ತೀರೋದಕ್ಕೆ: ನೀನು ನನ್ನ Disturb ಮಾಡಿರೋದ್ರ ಮುಂದೇ ಇದು ಯಾವ ಲೆಕ್ಕ ಬಿಡು.ಸದ್ಯಕ್ಕೆ ನಿನಗೆ Disturb ಮಾಡ್ತೀರೋದಕ್ಕೆ ಕಾರಣ... ಕಾರಣ... ಹೇಳಲಾ ಬೇಡವಾ..? ಅಂಥ ಭಯ ಆಗ್ತಿದೇ ಕಣೇ...! ಆದ್ರೂ ಹೇಳ್ತಿನಿ ಕೇಳು.. ನಾನು ಇವಾಗಿವಾಗ ತುಂಬ ತುಂಬಾನೇ.. Disturb ಆಗಿದಿನಿ.. ನಿನ್ನಿಂದ ಅಲ್ಲ.. ನಿನ್ನ ನೆನಪುಗಳಿಂದಾನೂ ಅಲ್ಲ... Iam sorry to say tizZ!! ಆದ್ರೂ ನಾನು ಹೇಳಲೇಬೇಕು... ನೀನ್ ಕೇಳಲೇಬೇಕು..ಹೌದು.. ನಿಜ... ಈಗೀಗ ನಿನ್ನ ನೆನಪಾಗ್ತ ಇಲ್ಲ... ಕನಸಂತೂ.. ಕಾಣ್ಟಾನೇ ಇಲ್ಲ... ನಿನ್ನ ಕಣ್ಣಾಣೆಗೂ...ಎದುರಿನ ಮನೆಗೆ ಹೊಸತಾಗಿ ಬಾಡಿಗೆ ಬಂದಿರುವ Police ಅಂಕಲ್ ಮಗಳು ಆ ಪಾಟಿ ಮೋಡಿ ಮಾಡಿದಾಳೆ... ಅಥವಾ.. ನಾನ್ ಅವಳ ನಗುವಿನ ಬಲೆಗೆ ಬಿದ್ದೀದಿನಿ ಅಂತಿಟ್ಕೋ..ಅವಳ ಹಸನ್ಮುಖ, ಆ ಹುಬ್ಬು ಸಾಲುಗಳು...ಅವಳು ಇಡೋ ಪ್ರತಿ ಹೆಜ್ಜೆಯ ಶೈಲಿ.. ಅವಳು ನಗೋದ್ ನೋಡ್ತಾ ಇದ್ರೆ... ಎಂಥಾ ಹನುಮಂತನಿಗೂ ಪ್ರೀತಿ ಹುಟ್ಟದೇ ಇರದು... ಅವಳನ್ನ ಜಾಸ್ತಿ ಹೋಗಳ್ತಾ ಇದಿನಿ ಅಂಥ ಬೇಜಾರ್ ಮಾಡ್ಕೋಬೇಡ... ಏನ್ ಮಾಡ್ಲಿ... ನಾನ್ ಅವಳ ಬಗ್ಗೆ ಬರೀಯೋದ್ ಬೇಡ, ಹೇಳೋದಂತೂ ಬೇಡ್ವೇ ಬೇಡಾ..ಅಂಥ ಅನ್ಕೋಂಡೆ..Control ಮಾಡ್ಕೊಂಡೇ.. ಉಹೂಂ... ಆಗ್ಲಿಲ್ಲ... Am Sorry ಕಣೇ...!! ನೀನು ನನ್ನ ಸೋಲಿಸಿದ್ದಕ್ಕಿಂತ ಜಲ್ದಿ.. ಇವಳು ನನ್ನ ಸೋಲ್ಸಿಬಿಟ್ಟಳು.. ಮತ್ತೊಮ್ಮೆ... ಮಗದೊಮ್ಮೆ... Sorry ಕಣೇ... ಇನ್‍ಮುಂದೇ... ನಿನ್ನ ನೆನಪು ಅನ್ನೋದ್ ಆಗದೇ ಇಲ್ವೇನೋ...? ನನ್ ಮೇಲೆ ಕ್ಷಮೆ ಇರಲಿ...ನನ್ನ ಮನದ ಬಂಜರು ನೆಲದಲ್ಲಿ.. ಒಲವ ಹೂವಿನ ಗಿಡ ಬೆಳೆಸಿದೋಳು ನೀನು... ಆದ್ರೆ ಇವತ್ತು ಅದೇ ಗಿಡದಲ್ಲಿ... ಬೇರೆ ಯಾವುದೋ ಮೊಗ್ಗಿದೆ... ಜೊತೆಗೆ ಸಿಗ್ಗಿದೆ...!!ಅವಳು ಆ ಗೌಡರ ಮನೆಗೆ ಬಂದ ಮೂರನೇ... ದಿನಕ್ಕೆ ಹುಟ್ಟಿದಬ್ಬ ಇತ್ತು.. ಏನ್ ಜೋರಾಗ್ Celebrate ಮಾಡಿದ್ರೂ... ಅಬ್ಬಬ್ಬ...! ನಮ್ಮಂತ MiddleClass ಹುಡುಗರಿಗೆ.. ಅದೇ Super Rocking Party..!!ಅವಳ ಹೆಸರು... ಸುಮ.. ನಿನ್ನ ಹೆಸರಷ್ಟು ಚೆಂದ ಇಲ್ಲ.. ಆದ್ರೂ.. ಚೆಂದ ಇದೆ..!!

ಸುಮ...happy birthday to you... ಅಂದೆ... ನಿನ್ನ ಹುಟ್ಟಿದಬ್ಬಕ್ಕೆ ನಿನಗೆ ಕನ್ನಡದಲ್ಲಿ... "ಜನುಮ ದಿನದ ಶುಭಾಶಯಗಳು" ಅಂಥ ಚಿನ್ನಕನ್ನಡದಲ್ಲಿ ಹೇಳ್ದಾಗ ನೀನೆಷ್ಟು ಮುದ್ದಾಗಿ Thank u ಕಣೋ.. ಅಂದೇ ನೋಡು.. ಥೇಟ್ ಅದೇ Style ಅಲ್ಲಿ... ಇಳಿಬಿದ್ದ ಮುಂಗುರುಳು ನೇವರಿಸ್ಕೊಂಡು.. ಹೇಳ್‍ದ್ಲು ನೋಡು.. ನಾನ್ ಅಲ್ಲೇ ಬೋಲ್ಡು...!! ಎಲ್ಲರ ಎದುರು... ನನ್ನ ನಿನ್ನ ತೋಳಲ್ಲಿ ಎತ್ಕೋ... ಅಂದ್ಲು... ನಿನ್ನ ಕೆನ್ನೆಗೆ ಒಂದೇ.. ಒಂದು "ಪಪ್ಪಿ" ಕೊಡ್ಬೇಕು... ಅಂದ್ಲು.. ಆ ಐದನೇ ವರ್ಷದ ಹುಟ್ಟು ಹಬ್ಬ Celebrate ಮಾಡ್ಕೊಳ್ಳುತ್ತಿದ್ದ... ಹುಡುಗೆ.. ನಿಜವಾಗ್ಲು.. ಅಂದಿದ್ದೇ ತಡಾ.. ಮುಗಿಲನ್ನೆ ಮುಟ್ಟಿಸೋ ಹಾಗೆ.. ಎತ್ಕೋಂಡ್ ಒಂದೇ.. ಒಂದು.. ಹೂ ಮುತ್ತಿಟ್ಟೇ... ಅವಳು ... ಅಣ್ಣಾ... ನಿನ್ನ ಕೆನ್ನೆಗೆ ಒಂದು ಪಪ್ಪಿ ಕೊಡ್ಬೇಕು ಅನಿಸ್ತಾ ಇದೆ.. ಆದ್ರೆ ನಿನ್ನ ಗಡ್ಡ.. ಅಡ್ಡ ಬಂದು ಚುಚ್ಚುತ್ತೆ... ಅಂದ್ಲು.. ನೋಡು...ಅಲ್ಲಿದ್ದ ಎಲ್ಲರೂ... ನಾನು ಸೇರಿ.. ನಕ್ಕು..ನಕ್ಕು... ಸುಸ್ತಾಗಿಬಿಟ್ವಿ... ಕಣೇ...ನಿಜವಾಗ್ಲೂ.. ಅವಳು ಜೊತೇಲಿ ಯಾವಗ್ಲೂ ಇರ್ತಾಳೆ.. ನಿನ್ನಷ್ಟು ಹಠ ಮಾಡಲ್ಲ.. ಆದ್ರೆ ನಿನ್ನಷ್ಟೇ ಚೆಂದವಾಗಿ ಮುನಿಸಿಕೊಳ್ತಾಳೆ.. ನಗ್ತಾಳೆ... ಇಂತದ್ರಲ್ಲಿ ನಿನ್ನ ನೆನಪಾಗೋದು ದೂರದ ಮಾತು...ನೋಡು... ವಿಧಿ ಅಂದ್ರೆ .. ಇದೇ ಇರ್ಬೇಕು.. ಅವಳಿಗೆ ಅವರಪ್ಪ ನಾಳೆ.. ನಾನು...ನೀನು ಓದಿರೋ ಅದೇ.. ಸ್ಕೂಲಲ್ಲಿ L.K.Gಗೆ Admission ಮಾಡಿಸ್ತಾ ಇದಾರೆ.. ಅವಳು ಇನ್ಮೇಲೆ.. A.B.C.d..,one two thre.. ಓದ್ಬೇಕು.. ಹೇಳ್ಕೊಡು..ಅಂತಾಳೆ.. ಅವಳಿಗೆ ಹೇಳ್ಕೋಡೋಷ್ಟರಲ್ಲಿ ಸಾಕು ಸಾಕಾಗುತ್ತೆ... ಅವೆಲ್ಲರ ಮದ್ಯೆ.. ನಿನ್ನ ನೆನಪು.. ತಿಂಗಳಿಗೊಮ್ಮೆ ಬರೋ "ಹುಣ್ಣಿಮೇ"ನೇ..ಸರಿ..ಒಕೆ.. ಕಣೇ.. ಬೇಜಾರ್ ಮಾಡ್ಕೋಂಡಿದ್ರೆ.. ನನ್ ಮೇಲೆ ಕ್ಷಮೆ ಇರಲಿ... ಅಚ್ಚರಿಯಾಗಿದ್ರೆ.. ಮೊಗದ ಮೇಲೆ ಹೂ ನಗುವಿರಲಿ...ನೀನ್ ಅದೆಲ್ಲೋ ನಕ್ಕರೆ, ನನಗಿಲ್ಲಿ ಖುಷಿ ಆಗುತ್ತೆ.. ನಾನು ನಗ್ತೀನಿ.. ಸುಮ್..ಸುಮ್ನೇ...!ಮತ್ತೆ ಯಾವಾಗ್ ಬರಿತಿನೋ.. ಗೊತ್ತಿಲ್ಲ...(ನಿಮ್ಮಪ್ಪ..ನಿನ್ಗೆ ಅದ್ಯಾವಾಗ mobile ಕೊಡಿಸ್ತಾಣೋ... ನಿನ್ನ ಅಮ್ಮನಿಗೇ ಗೊತ್ತು,,,!!..ನಾನ್ ನಿನಗೆ Sms, misscall, call ಮಾಡೋದ್ ಯಾವಾಗೋ..ಗೊತ್ತಿಲ್ಲ)ಒಕೆ.. ಟಾಟಾ.. ಕಣೇ... ಅವಳು ಅವರ ಮನೆ ಕಾಂಪೌಂಡಲ್ಲಿ ನನಗೋಸ್ಕರ ಕಾಯ್ತಾ ಇದ್ದಾಳೆ.. ಅವಳ ಜೊತೆ.. ಅವಲಕ್ಕಿ...ಬುವಲಕ್ಕಿ... ಆಡ್ಬೇಕು... ಬರ್ತೀನಿ...Bye..!! take care.be haPPy... keeP smiliNg..!

ಆಸೆಯ ಕೊನೆಯ ದಿನ!!!!!

ಮನದೊಡನೆ ಬಿಟ್ಟರೆ ಬೇರೆ ಯಾರೊ೦ದಿಗೂ ಹೇಳಲಾಗದೆ ಹೊತ್ತಿ ಉರಿದು ಹೋಗುತ್ತಿರುವ ಆಸೆಯ ಕೊನೆಯ ದಿನ!!!!!ನೆನಪಿದೆಯಾ ಮದುಮಗಳೇ,ಆಟಿ ತಿ೦ಗಳ ಜಡಿ ಮಳೆಯಲ್ಲಿ ಬಿಟ್ಟ ಜುಟ್ಟನ್ನೂ ಕಟ್ಟಲಾಗದೆ, ಒ೦ದು ಕೈಲಿ ಕಚ್ಚೆ, ಮತ್ತೊ೦ದು ಕೈಲಿ ಕೊಡೆ ಹಿಡಿದು ಅಮಾವಸ್ಯೆ ದಿನ ಸತ್ತ ನಿನ್ನಜ್ಜನಿಗೆ ಮೋಕ್ಷ ಕಾಣಿಸಲೆ೦ದು, ದೊಡ್ಡ ಭಟ್ಟರ(ಅಪ್ಪ) ಹಿ೦ದೆ ಬಾಲದ೦ತೆ ಪರಿಕರ್ಮಿಯಾಗಿ ನಿನ್ನ ಮನೆಗೆ ಕಾಲಿಟ್ಟದ್ದು? ಭಟ್ರು ಬ೦ದವು ಎ೦ದು ಲಗುಬಗೆಯಿ೦ದ ಉಪಚಾರಕ್ಕೆ ಬ೦ದ ನೀನು, 'ಕಾಲು ತೊಳೆಯಲು ನೀರು ಓ........ಅಲ್ಲಿ' ಎ೦ದು ತೋರುತ್ತಿದ್ದ ದಿಕ್ಕ ನೋಡದೆ, ನಿನ್ನ ಅತ್ತೂ ಅತ್ತೂ ಕೆ೦ಪಾದ ಕೆ೦ಡದ೦ಥಿದ್ದ ಮುಖ ನೋಡಿ ಮನಸು ಬೆಚ್ಚಗಾಗಿಸಿಕೊ೦ಡಿದ್ದೆ.ಬ೦ದ ಕೆಲಸ ಸ೦ಪೂರ್ಣ ಮರೆತು ಹೋಗಿತ್ತು. ಅಪ್ಪ ಹೇಳಿದ್ದೊ೦ದೂ ಕಿವಿಗೆ ಬೀಳುತ್ತಲೇ ಇರಲಿಲ್ಲ. ಎದುರಿಗಿದ್ದ ಕ್ರಿಯಾ ವಸ್ತುವನ್ನೇ ಕೇಳಿದರೂ, ತಡಕಾಡುವ೦ತಗಿತ್ತು. ಬುದ್ಧ್ಹಿ ಕೆಲಸ ಮಾಡಿದರೆ 'ನಿನ್ನ' ಬಗ್ಗೆ ಮಾತ್ರ ಎ೦ದು ಘೋಷಿಸಿ ಬಿಟ್ಟಿತ್ತು. ತಲೆ ತಗ್ಗಿಸಿಯೇ ಇದ್ದರೂ, ಕಣ್ಣುಗಳು ತಮ್ಮ ಪರಿಧಿಯಲ್ಲೇ ನೀನು ತಿರುಗುತ್ತಿದ್ದ ಅಷ್ಟೂ ದಿಕ್ಕುಗಳ ಕಡೆಗೂ ಹೊರಳಿ ವರದಿ ಮಾಡುತ್ತಿದ್ದವು. ಕಾರ್ಯಕ್ಕೆ ಬೇಕಾದ ಅಟ್ಟದಲ್ಲಿದ್ದ ಕೆಲವು ವಸ್ತುಗಳನ್ನು ತೆಗೆಯಲು ನಿನ್ನೊಡನೆ ಅಟ್ಟ ಹತ್ತಬೇಕಾಗಿ ಬ೦ದಾಗಲ೦ತೂ ಮನಸು ಬೆವರಲಾರ೦ಭಿಸಿತ್ತು. ದೇಹ ಕಳ್ಳು ಕುಡಿದ ಹಾಗೆ ತೂರಾಡುವ೦ತಾಗಿತ್ತು. ಪರಿಕರ್ಮ ಕೆಲಸವೆ೦ದರೆ ಉರಿದು ಬೀಳುತ್ತಿದ್ದ ನನಗೆ ಅ೦ದು ಅದು ಅತ್ಯ೦ತ ಶ್ರೇಷ್ಟ ಕೆಲಸವಾಗಿ ಕ೦ಡಿತ್ತು. ಅಟ್ಟದಿ೦ದ ಇಳಿಯುವಾಗ ತಗ್ಗಿನಮನೆ ಶ೦ಕರ ಮಾವ 'ಕೂಸು ಥೇಟ್ ದರ್ಭೆಯ ಹಾ೦ಗಿದ್ದು' ಎ೦ದದ್ದು ನನಗೆಷ್ಟು ಕೋಪ ತರಿಸಿತ್ತು ಗೊತ್ತಾ? ತಕ್ಷಣವೇ ಅವರನ್ನು ನೋಡಿ ಮೇಲಿ೦ದ ಹಲ್ಲು ಬಿಡುತ್ತಾ, ಮನಸಲ್ಲೆ ತಿರುಗೇಟು ಕೊಟ್ಟಿದ್ದೆ.......ಯಾವ ಕಾರ್ಯವೂ ದರ್ಭೆ ಇಲ್ಲದೆ ಕಳೀತಿಲ್ಲೆ ಅ೦ತ! ಆ ಕ್ಷಣವೇ ಅ೦ದುಕೊ೦ಡಿದ್ದೆ... ನಮ್ಮ ಮದುವೆ ಆದ ಮತ್ತೆ ನಾನು ಹೋಗುವ ಪ್ರತೀ ಸಮಾರ೦ಭಕ್ಕೂ ಅದರಲ್ಲೂ ವೈದಿಕಕ್ಕೆ ಕರಕೊ೦ಡು ಹೋಗಿ ವರ್ಷ..... ವರ್ಷಲ್ಲಿ(ಚಿಟಿಕೆ ಹೊಡೆಯುತ್ತಾ) ತೋರ ಮಾಡ್ಸಿ ಮಾವ೦ಗೆ ತೋರಿಸಬೇಕು ಎ೦ದು. ತಕ್ಷಣವೇ ನಮ್ಮ ಮದುವೆ ಎ೦ಬ ಕಲ್ಪನೆ ನಾಚಿಗೆ ತರಿಸಿದ್ದಲ್ಲದೆ ಆಯ ತಪ್ಪಿಸಿ ಒಮ್ಮೆಲೆ ಏಣಿಯಲ್ಲಿದ್ದ ನನ್ನ ಭೂ ಸ್ಪರ್ಷ ಮಾಡಿಸಿತ್ತು. ಹ್ಹೆ...... ಹ್ಹೆ......... ಏನಾಗಿಲ್ಲ ಎ೦ಬ ಪೋಸು ಕೊಡುತ್ತಾ ಹೊರ ಬ೦ದಿದ್ದೆ, ತು೦ಬಿದ ಕಣ್ಣುಗಳೊ೦ದಿಗೆ!

ಆ ದಿನ ಮ೦ತ್ರ ತಲೆಯಲ್ಲೇ ಇರಲಿಲ್ಲ. ಅಲ್ಲಿದ್ದುದು ಬರೀ ಶಾ೦ತಿ ಮ೦ತ್ರ. ಅಪ್ಪನಿಗೋ ಪ್ರತೀ ಮ೦ತ್ರದ ಸಾಲನ್ನೂ ಸ್ಪಷ್ಟವಾಗಿ ಉಚ್ಚರಿಸಿ, ಶ್ರಾದ್ದ ನಡೆಸುವವನ ಮನದಲ್ಲಿ ಪ್ರೇತಕ್ಕೆ ಸ೦ಪೂರ್ಣ ತೃಪ್ತಿಯಾಗಿದೆ ಎ೦ದು ತೊರ್ಪಡಿಸಿ ಸ್ವಲ್ಪ ಹೆಚ್ಚಿಗೆ ದಕ್ಷಿಣೆ ಕೀಳುವ ಪ್ರಯತ್ನ. ಆಗಾಗ ಅವರ ಕೆ೦ಗಣ್ಣು ಕ೦ಡು ಬೆಚ್ಚಿ ಮ೦ತ್ರ ಅಭ್ಯಾಸ ಬಲದಿ೦ದ ಹೊರಡಿಸುತ್ತಿದ್ದೆನಾದರೂ ಮಧ್ಯದಲ್ಲಿ ಅದು ಅಲ್ಲಿ೦ದ ಇನ್ನೆಲ್ಲಿಗೋ ಹೋಗಿ ಇನ್ನಷ್ಟು ಕೋಪಕ್ಕೆ ಗುರಿಯಾಗಿದ್ದೆ! ನಿನ್ನ ಮುಖ ನೋಡುತ್ತ ತರ್ಪಣ ಬಿಡಲೂ ಕೈ ನಡುಗಿತ್ತು, ಪ್ರೇತದ ಹೆಸರೇನೆ೦ಬುದೂ ಮರೆತು ಹೋಗಿತ್ತಲ್ಲ? ಆ ತಕ್ಷಣಕ್ಕೆ ನೀನು ನಿನ್ನ ತಮ್ಮನ ಹೆಸರು ಕರೆದು ಪ್ರೇತದ ಹೆಸರು ನೆನಪು ಮಾಡಿದ್ದೆ. ಆಗ ಅ೦ಥ ಗ೦ಭೀರ ಸನ್ನಿವೇಶದಲ್ಲೂ ನಿನಗೆ ನನ್ನ ಬಗ್ಗೆ ಕಾಳಜಿ ಇದೆಯೆ೦ಬ ಕಲ್ಪನೆ ಮಾಡಿಕೊ೦ಡೇ ಮೈ ಜುಮ್ ಎ೦ದಿತ್ತು. ಷಪು೦ಡಿ ದಿನವೇ ನನಗರ್ಥವಾಗಿತ್ತು, ನಿನಗೂ ನನ್ನ ಮೇಲೆ ಮನಸ್ಸಿದೆಯೆ೦ದು. ನೀನು ಮುಳುಗುಡ್ಡೆ ಮನೆಯ ಹುಡುಗಿಯೊ೦ದಿಗೆ ಮಾತಡುತ್ತ ನನ್ನ ಒಮ್ಮೆ ನೊಡಿದೆಯಲ್ಲ! ವಡೆ ಬಡಿಸುವಾಗ ನನಗೆ ಮಾತ್ರ ಎರಡು ಬಡಿಸಿದೆಯಲ್ಲಾ, ನಿನಗೆ ಹೇಗೆ ಗೊತ್ತಯಿತು, ನನಗೆ ವಡೆ ಇಷ್ಟವೆ೦ದು?ವೈದಿಕ ಕಾರ್ಯ ಮುಗಿಸಿ, ಮ೦ತ್ರಾಕ್ಷತೆ ಕೊಡುವ ಸಮಯದಲ್ಲಿ ನನ್ನ ಕಾಲಿಗೂ ನಮಸ್ಕರಿಸಿದೆಯಲ್ಲ, ಆಗ ನನ್ನ ಮನಸು ಹೇಳಿತ್ತು, ನೀನೆ ನನ್ನ ಮನೆಗೆ ಸರಿಯಾದ ಸೊಸೆ ಎ೦ದು! ನಿನ್ನಲ್ಲಿ೦ದ ಹೊರಡುವಾಗ ಹೊಟ್ಟೆಯೊ೦ದಿಗೆ ಮನಸೂ ಭಾರವಾಗಿತ್ತು. ಅಪ್ಪ ಅಮ್ಮನೊಡನೆ ಯಾವಾಗಲೋ ಹೇಳಿದ್ದು ಕದ್ದು ಕೇಳಿಸಿಕೊ೦ಡಿದ್ದೆ, ನನಗೆ ಮು೦ದಿನ ವರ್ಷ ಮದುವೆ ಯೋಗ ಇದೆ ಎ೦ದು. ಅಷ್ಟರಲ್ಲಿ ಅಪ್ಪನಿಗೆ ಹೇಗಾದರೂ ಮಾಡಿ ಹೇಳಿಬಿಡಬೇಕು ಎ೦ದು ಕೊ೦ಡಿದ್ದೆ. ನಿನ್ನಪ್ಪನಿಗೋ ನನ್ನಪ್ಪನೆ೦ದರೆ ಭಾರೀ ಮರ್ಯಾದೆ. ಹಾಗಾಗಿ ಮದುವೆಗೆ ಯಾರ ಅಡ್ಡಿಯೂ ಇರಲಿಕ್ಕಿಲ್ಲ ಎ೦ದು ಲೆಕ್ಕ ಹಾಕಿದ್ದೆ. ಅ೦ದು ನಿನ್ನಪ್ಪ ನಿನ್ನ ಜಾತಕ ತೆಗೆದುಕೊ೦ಡು ಅಪ್ಪನನ್ನು ಹುಡುಕಿಕೊ೦ಡು ಬ೦ದಾಗ ನನ್ನ ಸ೦ಭ್ರಮ ನೀನು ನೋಡಬೇಕಿತ್ತು! ಮಲಗಿದ್ದ ಅಪ್ಪನನ್ನು ಪ೦ಚೆ ಕೂಡಾ ಸುತ್ತಿಕೊಳ್ಳಲು ಬಿಡದೆ ಎಳೆದು ತ೦ದಿದ್ದೆ. ಅಪ್ಪನ ಸಿಡಿಮಿಡಿ ಕಿವಿಗೇ ಬಿದ್ದಿರಲಿಲ್ಲ. ನಿನ್ನಪ್ಪ ಜಾತಕ ಕೊಟ್ಟು 'ಭಟ್ಟರೆ ಎಲ್ಲಿಯಾದರೂ ಗ೦ಡಿದ್ದರೆ ತಿಳಿಸಿ' ಎ೦ದಾಗ ನನಗೊ ನಡುಕ, ಪುಳಕ. ನನ್ನಿರವು ಗಮನಕ್ಕೆ ತರಲೆ೦ದು ಧೋ ಎ೦ದು ಮಳೆ ಸುರಿಯುತ್ತಿದ್ದ ದಿನ ಎ೦ಬುದೂ ಮರೆತು ಶರಬತ್ತು ತರಲೇ ಅಪ್ಪ ಎ೦ದು ಮಧ್ಯ ಬಾಯಿ ಹಾಕಿ ಬೈಗಳಿಗೆ ಆಹಾರವಾಗಿದ್ದೆ. ನಿನ್ನಪ್ಪನ ಕನಿಕರದ ದೃಷ್ಟಿ ನೋಡಿ ಪೆಚ್ಚಾದರೂ ಹ್ಹೆ.. ಹ್ಹೆ.... ಎ೦ದು ನಗೆ ಮುಖವಾಡ ಹಾಕಿದ್ದೆ.

ಜಾತಕ ಸಿಕ್ಕಿದ ಕೂಡಲೇ ಅಪ್ಪ ತಿ೦ಗಳೊಳಗೆ ಗ೦ಡು ಹುಡುಕುತ್ತಾರೆ೦ದು ನನಗೇನು ಗೊತ್ತಿತ್ತು? ಯಾರೋ ಯ೦ತ್ರದ ಮು೦ದೆ ದಿನ ಇಡೀ ಕುಳಿತುಕೊಳ್ಳುವವನ೦ತೆ, ಮತ್ತೊ೦ದು ಯ೦ತ್ರವೆ ಇರಬೇಕು. ಅಲ್ಲವಾ ಅದೇನು ಕ೦ಡು ಮೆಚ್ಚಿದೆ ಅವನನ್ನು? ನಿನ್ನ ಸರಿಯಾಗಿ ನೋಡಲೂ ಸಮಯವಿಲ್ಲದ ಆ ಯ೦ತ್ರವನ್ನು? ನಾನು ಎಷ್ಟು ಸರಿಯಾದ ಜೊತೆ ನಿನಗೆ! ಅಬ್ಬಬ್ಬಾ ಎ೦ದರೆ, ವಾರಕ್ಕೆ ಎರಡು ದಿನ ಹೊರಗೆ ಹೋಗುತ್ತಿದ್ದೆ, ಅದೂ ನಿನ್ನನ್ನು ಕರೆದುಕೊ೦ಡೇ ಹೋಗುವ ನಿರ್ಧಾರ ಮಾಡಿದ್ದೆ. ಅಯ್ಯೋ ಪಾಪ ನಿನ್ನದೇನೂ ತಪ್ಪಿರಲಿಕ್ಕಿಲ್ಲ. ಎಲ್ಲ ನಿನ್ನಪ್ಪ ಹೇಳಿದ ಹಾಗೆ ಕೇಳಿರುತ್ತೀಯ. ನಿನ್ನ ಅಪ್ಪ ಮನಸು ಮಾಡಬೇಕಿತ್ತು. ಅಯ್ಯೋ ನಿನ್ನಪ್ಪನದೇನೂ ತಪ್ಪಿಲ್ಲ ಬಿಡು. ಎಲ್ಲಾ ನನ್ನಪ್ಪನಿ೦ದಾಗಿ. ಜಾತಕ ಸಿಕ್ಕಿದ ತಕ್ಷಣ ನಮ್ಮ ಮಾಣಿಯದ್ದು ಹೊ೦ದುತ್ತದೆ ಎ೦ದಿದ್ದರೆ ಸಾಕಗುತ್ತಿತ್ತಲ್ಲ? ಅ೦ತೂ ಇ೦ತೂ ನಿನ್ನ ಮದುವೆಯ ದಿನ ಬ೦ದೆ ಬಿಟ್ಟಿದೆ. ನಾನೆ ಪರಿಕರ್ಮಿಯಾಗಿ ಬ೦ದಿದ್ದೇನೆ. ಬರುವುದಿಲ್ಲ ಎ೦ದರೆ ಅಪ್ಪ ಬಿಡಬೇಕಲ್ಲ. (ಸಿಕ್ಕುವ ದಕ್ಷಿಣೆ ಹೋಗುತ್ತದಲ್ಲಾ?) ಅಬ್ಬಾ ನೀನು ಅಗ್ನಿ ಸಾಕ್ಷಿಯಾಗಿ ಮದುವೆ ಆಗುತ್ತಿದ್ದರೆ, ಮತ್ತೊ೦ದು ಬಾರಿ ನನಗೆ ಮ೦ತ್ರ ಮರೆತು ಹೋಗಿತ್ತು. ಇ೦ದು ಮನಸು ಬೆಚ್ಚಗಾಗಿರಲಿಲ್ಲ, ಮನಸು ಹೊತ್ತಿ ಉರಿಯುತ್ತಿತ್ತು. ಕಣ್ಣೀರು ಧಾರೆಯಾಗಿ ಹರಿಯುತ್ತಲಿತ್ತು. ಅದನ್ನು ಮರೆಮಾಚುವ ಅಗತ್ಯವೂ ಇರಲಿಲ್ಲ. ಹೋಮ ಕು೦ಡದ ಮು೦ದೆ ಎಲ್ಲರ ಕಣ್ಣುಗಳೂ ಅದೇ ಸ್ಥಿತಿಯಲ್ಲಿತ್ತು!! ಮದುವೆ ಮುಗಿದ ಮೇಲೆ ಕಾಲಿಗೆ ನಮಸ್ಕರಿಸಿದೆಯಲ್ಲಾ, ಬಾಯಿ೦ದ ಯಾ೦ತ್ರಿಕವಾಗಿ ಹೊರಟಿತ್ತು 'ಧೀರ್ಘ ಸುಮ೦ಗಲೀ ಭವ'

ಅಯ್ಯೋ ನಾನು ಒಬ್ಬ ಹುಚ್ಚ ಕಣೆ

ಹಾಯ್ ಹೇಗಿದ್ದಿ? ನಿನಗೇನೂ ಚನ್ನಾಗೆ ಇದ್ದೀಯ ನಂಗೊತಿಲ್ವ. ಪ್ರಪಂಚದಲ್ಲಿ problem ಇಲ್ಲದವಳು ಅಂದ್ರೆ ನೀನೆ ಏನೊಪ್ಪ. ಅದು ಯಾವುದೋ ಸುಡುಗಾಡು ಹಾಡು ನೆನಪಿಗೆ ಬರ್ತ ಇದೆ ಅದೇ ಪ್ರೀತಿನಲ್ಲಿ ಇರೋ ಸುಖ ಗೊತ್ತೇ ಇರಲಿಲ್ಲ ಹಾಡು ಬರೆದ ಪುಣ್ಯಾತ್ಮ ಜನ್ಮದಲ್ಲಿ ಪ್ರೀತಿಸಲೇ ಇಲ್ಲ ಅಂತ ಕಾಣುತ್ತೆ ಆ ಹಾಡು ಹೀಗೆ ಇರಬೇಕಾಗಿತ್ತು ಪ್ರೀತಿನಲ್ಲಿ ಇರೋ ಸಂಕಟ ಗೊತ್ತೇ ಇರಲಿಲ್ಲ ಅಂತ. ಅಯ್ಯೋ ನಾನು ಒಬ್ಬ ಹುಚ್ಚ ಕಣೆ ಅಲ್ಲ ಹೋಗಿ ಹೋಗಿ ನಿನ್ನ love ಮಾಡಿದ್ನಲ್ವ. ಅಲ್ಲ ನಿದ್ರೆ ಇಲ್ಲದೇ ಊಟ ಇಲ್ದೇ ನಿನ್ನ ನೆನಪಿನಲಿ ಹೊಟ್ಟೆ ತುಂಬಿಸಿ ನಿದ್ರೆ ಇಲ್ಲದೇ ನಿನ್ನ ಗುಂಗಿ ನಲ್ಲೇ ಕಳೆದ ರಾತ್ರಿ ಅದೆಷ್ಟೋ? ನಿನ್ನ ಬಗ್ಗೆ ಆಲೋಚಿಸುವ ಬದಲು ಏನಾದ್ರೂ ಒಳ್ಳೇ ಪುಸ್ತಕನಾದ್ರೂ ಓದಿದ್ದಿದ್ರೆ ಸ್ವಲ್ಪ ಜ್ಞಾನನದರೂ ಸಿಗ್ತಿತ್ತು ಇದರಲ್ಲಿ ನನಗೆ ಸಿಕ್ಕಿದ್ದೆನು ಬಾರಿ ನೋವು ,ಸಂಕಟ ,ಕಣ್ಣೀರು , ಕೋಪ , ಅವೇಶ ಅಷ್ಟೇ. ಕೆಲವೊಮ್ಮೆ ಅನ್ನಿಸುತ್ತೆ ಈ ಹುಡುಗಿಯರಿಗೆ ಬುದ್ಧಿ ಕಡಿಮೆ ಅಂತ. ಅಲ್ಲಾ ನಿನಗೆ ಎಷ್ಟು clue ಕೊಟ್ಟೆ ನಾ ನಿನ್ನ ಪ್ರೀತಿಸ್ಥಿದ್ದೀನಿ ಅಂತ ನಿನಗೆ ಅರ್ಥನೇ ಆಗ್ಲಿಲ್ಲ. ಎಷ್ಟು ಅಂತ ಸಹಿಸೋದು ಹೇಳು? ನಾನೊಬ್ಬ ಮೂರ್ಖ ನೀನು ನನಗೆ ಸಿಗೋಲ್ಲ ಅಂತ ನನಗೆ ಮೊದಲೇ ಗೋತಿತ್ತು ಆದರೂ ನಿನ್ನನ್ನೇ ಪ್ರೀತಿಸಿದೆ . ಅದೇನೋ ಹೇಳ್ತಾರಲ್ಲ ರಾತ್ರಿ ಕಂಡ ಬಾವಿಗೆ ಬೆಳಗ್ಗೆ ಬೀಳೋದು ಅಂತ ಅದು ಇದೆ ಏನೋ. ಬಾವಿಗೆ ಬಿದ್ದಿದ್ರೂ ಚಿಂತೆ ಇಲ್ಲ ಆದರೆ ಈ ಬಾವಿಯಲ್ಲಿ ಇಷ್ಟೊಂದು ವಿಷ ಸರ್ಪಗಳೆ? ಇನ್ನೂ ಬಾವಿ ಯಿಂದ ಮೇಲೆ ಬರದಿದ್ರೆ ನಾನು ಸತ್ತೆ ಹೋಗ್ತೀನಿ ಅಷ್ಟೇ . ಯಾವಾಗ ನೋಡಿದ್ರೂ ನಿನ್ನದೇ ಕನಸು ನಿನ್ನದೇ ಗುಂಗು ಅದರಿಂದ ನನ್ನ boss ಕೈಲಿ ಎಷ್ಟು ಸಲ ಛಿ ಥೂ ಅನ್ನಿಸಿಕೊಂಡೆ ಹೇಳು. ಯಾವ ಪ್ರೀತಿಯನ್ನು ಹೂವು, ದೇವರು ಹಾಗೆ ಹೀಗೆ ಅಂತ ಹೇಳ್ತಿದ್ನೋ ಅದೇ ಪ್ರೀತಿಯನ್ನು ವಿಷ ,ಮುಳ್ಳು , ಕಷ್ಟಗಳ ಸಂಕೋಲೆ ಅಂತ ಹೇಳಿಸುವ ಹಾಗೆ ಮಾಡಿದ್ಯಾಲ್ಲೇ ನೀನು. ಪ್ರೀತಿಯ ಬಗೆಗಿನ ನನ್ನ ಆಲೋಚನ ಧಾ ಟಿಯನ್ನೇ ಬದಲಾಯಿಸಿ ಬಿಟ್ಟಿಯಲ್ಲೇ ನೀನು. ಏನು ನಿನಗೆ ಹೃದಯ ಅನ್ನೋದೇ ಇಲ್ವಾ? ನಿನ್ನ ಸಂತೋಷದಲ್ಲಿ ನಗುತ್ತಾ , ನೀನು ಕಣ್ಣೀರು ಸುರಿಸಿದಾಗ ಅಳುತ್ತಾ ಕಳೆದ ದಿನ ಇನ್ನೂ ನೆನಪಿದೆ. ನಿನ್ನ ನೇರಳಾ ಗಿ ನಿನ್ನ ಎಲ್ಲ ಕೆಲಸಗಳಿಗೆ ನನ್ನ ಸಲಹೆ ಕ್ಕೊಡುತ್ತಾ ಇದ್ದೇ. ಆವಾಗ ಏನೋ ದೊಡ್ಡ ಮಾತಾಡ್ತಾ ಇದ್ದೇ ನೀನು ನನಗೆ ತುಂಬಾ ಅರ್ಥ ಆಗ್ತೀಯ, ನೀನಂದ ಒಂದೊಂದು ಮಾತಿಗೂ ಭಾವ ಇದೆ ಹಾಗೆ ಹೀಗೆ..ಎಲ್ಲ ಸುಳ್ಳು. ನಿನಗೇನೂ ಅರ್ಥ ಆಗಿಲ್ಲ ಅರ್ಥವಾಗೋತರ ನಾಟಕ ವಡುತ್ತಾ ಇದ್ದೇ ಅಷ್ಟೇ ಅಲ್ಲಾ ಅವ ಯಾರೋ propose ಮಾಡಿದ ಅಂತ ಒಪ್ಕೊಂದ್‌ಯಲ್ಲೇ ನೀನು .ಒಂದು ನಿಮಿಷಾನಾದ್ರೂ ನನ್ನ ಬಗ್ಗೆ ಆಲೋಚನೆ ಮಾಡಲರದಷ್ಟು ಕಟುಕಳಾಗಿ ಹೊದಿಯ ನೀನು? ನಿನಗೇನೂ ನಿನಗೆ ಹಣಬೇಕು , ಆಸ್ತಿ ಬೇಕು , ಅಂತಸ್ತು ಬೇಕು ಇದೆ ತಾನೆ ನಿನಗೆ ಬೇಕಾಗಿರೋದು? ನಿನಗೆ ನಿನಗಾಗಿ ಮೀಡಿಯುವ ಈ ಹೃದಯ ಅಷ್ಟು ಕೀಳಾಗಿ ಕಾಣೀತೆ? ನಾನು ಅಷ್ಟು ಬೇಡವದೇನ ನಿನಗೆ? ಏನು ಹಾಗೆ ಗುರಾಯಿಸೋದು ಒಹೋ ನಿನ್ನ ಪ್ರೇಮಿಗೆ ಹೇಳ್ತಿ ಅಂತನ?

ಹೇಳು ಹೋಗು ಅವನು ಏನು ಕೀಸೀತಾನೋ ನಾನು ನೋಡ್ತೀನಿ . ನನ್ನ touch ಮಾಡೋದು ಅಷ್ಟು ಸುಲಭ ಇಲ್ಲ. ಅವ ನನ್ನ ಏನು ಮಾಡೊಕ್ಕು ಆಗಲ್ಲ. ಗೋತೈತ? ಎಷ್ಟು ಅಂತ ಹೇಳೋದು ನಿನಗೆ ನಿನಗೆ ಈ ಜನ್ಮ ದಲ್ಲಿ ನನ್ನ ಮಾತು ಅರ್ಥ ಆಗಲ್ಲ. ನಾನು ನಿನ್ನ ಹಾದಿಯ ಕಾಯುತ್ತಾ ಕುಳಿತರೆ ಇಲ್ಲೇ ಮುದುಕನಾಗಿ ಬಿಡ್ತೀನಿ. ನೀನು ಬೇಡ ನನಗೆ . ನನಗೆ ಈಗ ಬೇಕಾದದ್ದು ಮನಾಶಾಂತಿ ಅದು ಎಲ್ಲಿ ಸಿಕ್ಕುತ್ತೋ ಅಂತ ಕೂಡ ಗೊತಿಲ್ಲ. ಆದರೆ ನಿನ್ನ ಆಲೋಚನೆಗಳು ನನ್ನ ಬಿಟ್ಟು ಯಾವಾಗ ಹೋಗುತ್ತವೋ ಆಗ ಅದು ನನಗೆ ಸಿಗುತ್ತೆ. ನಾನು ಕೂಡ ನಾಲ್ಕು ಜನರ ಹಾಗೆ ಬದುಕೋದು ಸಾಧ್ಯ ಆಗುತ್ತೆ. ಅದಕ್ಕೆ ನಾ ನಿನ್ನ ಮರೆಯಬೇಕು. ನಿನ್ನ ನೆರಳು ಕೂಡ ನನ್ನ ಜೀವನದಲ್ಲಿ ಕಾಣ ಸಿಗಬಾರದು. ಇನ್ನೂ ಮುಂದೆ ಬರಬೇಡ ನನ್ನ ಬಳಿ. ಹೋಗು ದೂರ ಹೋಗು . ಮಾತಲ್ಲೇ ಕನಸ ಕೊಟ್ಟು ನಗುವಲ್ಲೇ ನನ್ನ ಮನಕೆ ಲಗ್ಗೆ ಇಟ್ಟು ಕೊಡಬಾರದ ನೋವು ಎಲ್ಲವ ನನಗೆ ಕೊಟ್ಟು ಏನು ನಡೆದಿರದಂತೆ ತಿಳಿದು ಇನ್ನೂ ನಗುತ್ತಿರುವ ಕಲ್ಲು ಹೃದಯ ನಿನ್ನದು ನನ್ನ ಕನಾಸನೆಲ್ಲ ಸುಟ್ಟು ಹಾಕಿ ಅದರ ಶಾಕದಿಂದ ಮೈ ಬೆಚ್ಚಗೆ ಮಾಡುತ್ತಿರುವ ಕಲ್ಲು ಹೃದಯ ನಿನ್ನದು ಬರಬೇಡ ಎಂದು ನನ್ನ ಬಳಿ ಇನ್ನೂ ಮೇಲೆ ನಿನಗೆ ಇಲ್ಲ ಈಗ ನನ್ನ ಹೃದಯದಲ್ಲಿ ನೆಲೆ ಇತಿ ನೋಂದವ

ಪ್ರೀತಿಯ ಚಿನ್ನು

ಹೇ ಡುಮ್ಮಿ ಯಾಕೆ ನಂಗೆ ಇಷ್ಟೋಂದು ಗೋಳು ಹೋಯ್ಕೋಳ್ತೀಯಾ? ಏನೇ ಪಾಪ ಮಾಡಿದ್ದಿನಿ ನಿನ್ನ ಕಣ್ಣಲ್ಲೇ ನಗುವಿನಲ್ಲೆ ನಂಗೆ ಸಾಯಿಸ್ತಿಯಲ್ಲ ಇದು ನ್ಯಾಯಾನಾ ಬಂಗಾರಿ. ಇವತ್ತು ನಿನ್ನ ನೋಡಿ ನಿನ್ನ ಮಾತು ಕೇಳಿ ನನ್ನಲ್ಲಿ ನಾನು ಇಲ್ಲಾ ಕಣೇ. please ಬಿಟ್ಟು ಬಿಡೆ ನನ್ನ ಪಾಡಿಗೆ ನನ್ನ. ಇವತ್ತು ನಿಂಗೆ ಸಿಗಬೇಕು ಅಂಥಾ ಮೊನ್ನೆ ಶುಕ್ರವಾರನೇ ನಿರ್ಧಾರ ಏನೋ ಆಗಿತ್ತು. ಆದ್ರೆ ಇವತ್ತು ನಿಂಗೆ ಸಿಗೋಕೆ ಬರೋಕೆ ಯಾಕೋ ಕಾಲಲ್ಲಿ ಶಕ್ತಿನೇ ಇಲ್ಲಾ ಅನ್ನಿಸ್ತಿತ್ತು. ಯಾಕೆ ಚಿನ್ನು. ನನ್ನ ನಿನ್ನ ಸಂಭಂದ ಈಗ ಬರಿ friendship ನಲ್ಲಿ ಇಲ್ಲಾ ಅದಕ್ಕು ಮುಂದೆ ಹೋಗಿದೆ ಅಂತಾನಾ ನನ್ನ ಒಳಗೆ ಈ ತಳಮಳ. ಹಿಂಗೆ ನನ್ನ ಮನಸ್ಸಲ್ಲಿ ಒಂದೆ ಬಂದಿದೆ ನಿನ್ನಲ್ಲಿ ಆ ಭಾವನೆ ಇಲ್ಲದಿದ್ದರೆ ಅನ್ನೋ ಭಯ ನನ್ನ ಕಾಡಿದ್ದಕ್ಕೆ ಈ ತಳಮಳ ನಾ? ಈ ಮೊದಲು ಎಷ್ಟೆ ಸಾರಿ ಸಿಕ್ಕಿದ್ರು ನಂಗೆ ಎನು ಆಗಿರಲಿಲ್ಲ. ಅದ್ರೆ ಇಗೀಗ ನನ್ನ ಭಾವನೆಗಳು ಬದಲಾಗಿವೆ. ಈ ಚಾಟ್ msg ಗಳು ನನ್ನ ಭಾವನೆಗಳನ್ನ ಬದಲಾಯಿಸಿವೆ. ನಂಗೆ ಏನೋ ಆಗಿದೆ ಪುಟ್ಟಿ. ಗೊತ್ತಿಲ್ಲೆ ವಿಪರೀತ tension, heart beats one to double ಆಗಿ, ಮೈಯಾಲ್ಲಾ ಹುಕಂಪನ. ಇವತ್ತು ನಿಂಗೆ ಸಿಗಬೇಕಲ್ಲಾ ಅಂತಾ ನಿನ್ನೆನೆ ಯಾವ pant,shirt ಹಾಕಬೇಕು ಅಂತಾ ತೆಗೆದು ಇಟ್ಟು ಬಿಟ್ಟಿದ್ದೆ. ನಿನ್ನೆನೆ shave ಮಾಡಿ clean boy ಆಗಿದ್ದೆ. ಬೆಳಗಿನ ಪಾಡು ಕೇಳಲೇ ಬೇಡ ಕಣೇ. ಥೂ ದಿನಾ 9 ಗಂಟೆ ಆದ್ರು ಈ ನನ್ನ ಕಣ್ಣರೆಪ್ಪೆಗಳು ಗಂಡ ಹೆಂಡತಿ ತರ ತಬ್ಬಿ ಮಲಗಿರುತ್ತಿತ್ತು. ಈವತ್ತು ಅಚಾನಕ್ ಡೈವರ್ಸ್ ಆಗಿವೆಯೇನೋ ಅನ್ನೋ ತರ 7 ಗಂಟೆಗೆ ಬೆರೆ ಬೆರೆ ಅಗಿ ಹೋಗಿದ್ದವು. ಥೂ ಆಮೇಲೆ ಏಷ್ಟೆ ಪ್ರಯತ್ನ ಮಾಡಿದ್ರು ನಿದ್ದೆ ಮಾಡೋಕೆ ಆಗಿಲ್ಲ ಮಾರಾಯ್ತಿ. Appointment ಇದ್ದಿದ್ದು ೧೧ ಗಂಟೆಗೆ ಇನ್ನು ೪ ತಾಸು ಬಾಕಿ ಇತ್ತು. time pass ಹೆಂಗೆ ಮಾಡದು ಅಂತಾ ಗೊತ್ತಾಗದೆ ಹೈರಾಣ ಆಗಿ ಹೋದೆ. ೧೦ ಗಂಟೆಗೆಲ್ಲಾ ರೆಡಿ ಆಗಿ ಕೂತಿದ್ದೆ. ಕನ್ನಡಿಗೂ ನನ್ನ ನೋಡಿ ಬೇಜಾರು ಬಂತೋ ಏನೋ ಅಷ್ಟು ಸಾರಿ ಕನ್ನಡಿ ನೋಡಿ ಕೂದಲು ಸರಿ ಮಾಡ್ಕೊಂಡೆ. ಇವತ್ತು ಈ ವಾಚ್ ಯಾಕೋ ತುಂಬಾ ನಿಧಾನ ನೆಡಿತಾ ಇದೆ ಅನ್ನಿಸ್ತಿತ್ತು. ೧೦.೩೦ ಇಂದ heart beats ಕೈಮೀರಿ ಬಡ್ಕೊತಾ ಇತ್ತು.ಹೃದಯದಲಿ ಇದೇನಿದು ನದಿಯೊಂದು ಓಡಿದೆ.ಅಲ್ಲಾ ಕಣೇ ಈ love ಅಂದ್ರೆ ಎನೇ ಇದು ಸಂಕಟ. ಬೆಕ್ಕು ಮರಿ ಹಾಕಿದಂಗೆ ಥೂ ನಿಲ್ಲಕ್ಕು ಆಗಲ್ಲ ಕೂರಕ್ಕು ಆಗಲ್ಲಾ.ಅಂಥೂ ನೀನು ಬಂದೆ ಆಹಾ! ಎಷ್ಟು ಚನ್ನಾಗಿ ಇದಿಯಾ ಮರಾಯ್ತಿ. ಮೊದಲೆಲ್ಲಾ ನೀನು ಸಿಕ್ಕಿದಾಗ ಹಿಂಗೆ ಅನ್ನಿಸೆ ಇರಲಿಲ್ಲಾ. ತುಂಬಾ ಪುರುಸೋತ್ತು ಇದ್ದಾಗ ಬೃಹ್ಮ ನಂಗೆ ಅಂತಾನೇ ನಿನ್ನ ಸೃಷ್ಟಿ ಮಾಡಿದ್ದಾನೆ ಅನ್ನಿಸುತ್ತೆ.ನೀ ಬಂದು ನಿಂತಾಗನಿಂತು ನೀ ನಕ್ಕಾಗ ಸೋತೆ ನಾನಗ.

ನಿನ್ನ ಮಾತು ಆ ನಗು ಆ friendly nature ಯಾವನ್ನಾದರು ಹುಚ್ಚನನ್ನಾಗಿ ಮಾಡಿ ಬಿಡುತ್ತೆ. ನಿನ್ನ ಬಗ್ಗೆ ಇದ್ದ ನನ್ನ ಆರಾಧನಾ ನೋಟ ನಿಂಗೆ ಗೊತ್ತಾಯ್ತಾ?. ಬೇಡ ಗೊತ್ತಾಗದು ಅಂತ ನಾನು ತುಂಬಾ control ಮಾಡದೆ.ಆದ್ರೆ ಇನ್ನು ನಾನು ಈ ಭಾವನೆ ಗಳನ್ನ ನಿನ್ನಿಂದ ಬಚ್ಚಿಡಕೆ ಆಗಲ್ಲಾ ಕಣೇ. ಪ್ರೇಮವನ್ನ, ಕೆಮ್ಮನ್ನಾ ಹೆಚ್ಚಿಗೆ ದಿನ ಅಡಗಿಸಿ ಇಡಕೆ ಆಗಲ್ಲಂತೆಜತಾನಾ ಭಿ ನಹಿ ಆತಾಚುಪಾನಾ ಭಿ ನಹಿ ಆತಾಹಮೇ ತುಮ್ಸೆ ಮೊಹೊಬ್ಬತ್ ಹೆ ಬತಾನಾ ಭಿ ನಹಿ ಆತಾಹಿಂಗೆ ಎಲಾರ ಜೀವನದಲ್ಲು ಆಗುತ್ತಂತೆ. ಇದು ನಂಗು ಆಕ್ತಾ ಇದಿಯಾ?ಇವತ್ತು ನಿಂಗೆ ಎಲ್ಲಾನು ಈ ಪತ್ರದ ಮೂಲಕ ಹೇಳೇ ಬಿಡ್ತಿನಿ. ಹಾಲಲ್ಲಾದರು ಹಾಕು ನೀರಲ್ಲಾದರು ಹಾಕು. ನೀನು ಯಾವ ನಿರ್ಧಾರ ತೊಗೊಂಡ್ರು ನಂಗೆ ಖುಷಿನೇ.ಯಾಕೆ ಅಂದ್ರೆ ನಿನ್ನ ಬಿಟ್ಟು ನಾನು ಬದಕಕೆ ಅಗಲ್ಲಾ ಅನ್ನೋ ಪರಿಸ್ಥಿತಿ ಎನು ಇಲ್ಲಾ. ಒಂದು ಎರೆಡು ದಿನ ನಿನ್ನ miss ಮಾಡ್ತಿನೋ ಏನೋ ಆದ್ರೆ ಮೂರನೇ ದಿನ ನನ್ನ ಹಳೇ life ಗೆ ಹೋಗ್ ಬಿಡ್ತಿನಿ ಎನು problem ಇಲ್ಲಾ. ಆದ್ರೆ ಒಂದು ಸಾರಿ ಒಪ್ಪಿಕೊಂಡ ಮೇಲೆ ನಿನ್ನಿಂದ ನಾನು ಯಾವತ್ತು ಬೇರೆ ಮಾತು ಕೆಳಬಾರದು. ನೀನು ನಾನು ಒಂದೆ ನಿನ್ನ ನನ್ನ life ಒಂದೆ. ನಿನಗೆ forum ನಲ್ಲಿ shopping ಮಾಡಿಸ್ತೀನೋ ಇಲ್ವೋ, ಆದ್ರೆ ನಿನ್ನ ಮತ್ತು ನಿನ್ನ ಮಕ್ಕಳಿಗೆ ಯಾವತ್ತು ಎನೋ ಕಡಿಮೆ ಮಾಡದೆ ಸಾಕೋ ತಾಕತ್ತಿದೆ. ನಿಂಗೆ car ನಲ್ಲೆ ಸುತ್ತಿಸ್ತೀನೋ ಇಲ್ವೋ ಗೊತ್ತಿಲ್ಲಾ, ಆದ್ರೆ ನೀ ನೆಡೆವ ಹಾದಿಲಿ ಹೂವು ಅರಳಿಸ್ತೀನಿ. ನೀನು ಬೇಡಾ ಅಂದ್ರು ಕೊನೆ ತನಕ friends ಆಗೆ ಇರೋಣಾ. ನೀನು ನಂಗೆ ಪ್ರೀತಿಸದು ಹೆಂಗೆ ಅಂತಾ ಕಲ್ಸಿದ್ದಿಯಾ. ಪ್ರೀತಿಲಿ ಈ ಜಗತ್ತು ಎಷ್ಟು ಸುಂದರ ಅಂಥಾ ತೋರ್ಸಿದ್ದಿಯಾ. ಅದನ್ನಾ ಯಾವತ್ತು ಮರಿಯಕೆ ಅಗಲ್ಲಾ. thanks for everythingಇಂತಿ ನಿನ್ನವನಾಗಲು ಕಾಯುತ್ತಿರುವ.ಪ್ರೀತಿಯ ಪ್ರೀತಮ್

ಅಂಚೆ ಕಛೆರೀಗೆ ತಲುಪಲಾರದ ಪತ್ರ

ಏನೇ ನನ್ನ ಪ್ರೀತಿಯ ಹುಡುಗಿ, ಹೀಗೆ ಅಲ್ವೇ ನಾನು ನಿನ್ನ ಕರಿಯವಾದು. ನಿನಗೆ ಬರೆದ ಈ ಪತ್ರವನ್ನು ಎಸ್ಟೋ ಸರಿ ಪೋಸ್ಟ್ ಮಾಡಲು ಹೋಗಿ ಹಿಂತಿರುಗಿ ಬಂದಿದ್ದೆ. ಇವಾಗ ಅನಿಸುತ್ತೆ ನಿನಗೆ ತಲುಪಲಾರದ ಕಾರಣಗಳಿಗೆ ಕಾಣುತ್ತೆ ಈ ಪತ್ರಕ್ಕೆ ಈಸ್ಟೋಂದು ಮಹತ್ವ ಸಿಕ್ಕಿದ್ದು. ನನಗಿನ್ನೂ ಆ ದಿನ ಚೆನ್ನಾಗಿ ನೆನಪಿದೆ.ಆ ಮದುವೆ ಸಮಾರಂಬದಲ್ಲಿ ನೀನು ತಿಳಿ ನೀಲಿ ಜೀನ್ಸ್ ಮತ್ತು ಅದರ್ ಮೇಲೆ ಆ ಪಿಂಕ್ ಟಾಪ್ ಹಾಕಿಕೊಂಡು ಎಂಟ್ರಿ ಹೊಡೆದ ಮರುಕ್ಷಣವೇ ನಾನು ನಿನಗೆ ಫೀದಾ. ನಿನ್ನ ನೋಡಿದ ಸ್ವಲ್ಪ ಹೊತ್ತಿನಲ್ಲಿ ನಿನ್ನ ಹತ್ತಿರ ಬಂದು ಕೇಳಿದ್ದೆ ನನ್ನ ಜೊತೆ ಗೆಳೆತನ್ ಮಾಡ್ತೀರ ಅಂತ್?. ನಿನಗೆ ಸ್ವಲ್ಪ ಆಶ್ಚ್ಯಾರವಾದರೂ "Its My Pleasure" ಅಂತ್ ಹೇಳಿದ್ದೆ. ಅಂದು ಆ ಚಿಕ್ಕ ಮಾತಿನಿಂದ ಆರಂಭವಾದ ನಮ್ಮ ಸ್ನೇಹ ಈಸ್ಟೋಂದು ಎತ್ತರಕ್ಕೆ ಬೆಳೆಯುತ್ತೆ ಅನ್ನುವ ಕಲ್ಪನೆ ಇಬ್ಬರಲ್ಲಿ ಯಾರಿಗೂ ಇರ್ಲಿಲ್ಲ. ನಿನ್ನ ಆ ಸುಳ್ಳು ಹೆಸರಿಂದ ಆರಂಭವಾಗಿ ಪ್ರೀತಿ ಅನ್ನುವ ಎರಡು ಅಕ್ಷರ್ ಜೊತೆಗೂಡಿ ಭಾವನೆಗಳಿಗೆ ಮೀರಿ ಬೆಳೆದಿತ್ತು ಅಲ್ವೇ ನಮ್ಮ ಈ ಸ್ನೇಹ..ನಾವು ಜೀವನದ ಎಲ್ಲಾ ವಿಷಯಗಳನ್ನು ಮುಚ್ಚು ಮರೆ ಇಲ್ಲದೇ ಮಾತಡಿದ್ದೇವೆ. ನನಗೆ ತಿಳಿದ ಮಟ್ಟಿಗೆ ನಾವು ಎಂದು ನಮ್ಮ ಭಾವನೆಗಳನ್ನಾಗಲಿ , ಅನಿಸಿಸಿಕೆಗಳನ್ನಾಗಲಿ ಒಬ್ಬರ್ ಮೇಲೆ ಒಬ್ಬರು ಹೇರಲಿಲ್ಲ ಆದ್ರೆ ಜೀವನದ ಒಂದೋದು ಹೆಜ್ಜೆಗೂ ನಮ್ಮ ಸರಿ-ತಪ್ಪುಗಳನ್ನು ಹೇಳಿದ್ದೇವೆ ಅನ್ನುವ ಸಮಾಧಾನ ವಿತ್ತು. ಹಾಗೆ ನೋಡಿದರೆ ನನ್ನ ಜೀವನದಲ್ಲಿ ನಿನಗಿಂತ ಸುಂದರ ಹುಡುಗಿಯರು ಬಂದು ಹೋಗಿದ್ದರು ಆದರೆ ನಿನಗೆ ಹಚ್ ಕೊಂಡಸ್ಟ್ ನಾನು ಯಾರಿಗೂ ಹಚ್ ಕೊಂಡಿರ್ಲಿಲ್ಲ. ಏನೋ ಒಂದು ಆಕರ್ಷಣೆ ನಿನ್ನಲ್ಲಿ, ನಿನ್ನ ಪ್ರೀತಿ , ಸ್ನೇಹ ಮತ್ತು ಮೊಹದಿಂದ ನಾನು ಎಸ್ಕಪ್ ಆಗುವ ಎಲ್ಲ ಬಾಗಿಲಗಳು ಮುಚ್ಚಿ ಹೋಗಿದ್ದವು. ನನಗೆ ಬೆಳಗಿನ ಜಾವಗಳನ್ನು ಮರೆಯಲು ಬಹುಶಯ್ ಈ ಜನ್ಮದಲ್ಲಂದು ಸಾಧ್ಯವಿಲ್ಲ. ನಾನು ನಿನಗೆ "ಗೂಡ್ ಮಾರ್ನಿಂಗ್" ವಿಶ್ ಮಾಡೋಕ್ಕೆ ಕಾಲ್ ಮಾಡಿದರೆ ನೀನು ನಿನ್ನ ಹಸಕಿ ಹಸಕಿ ಧ್ವನಿಯಿಂದ ಹೇಳೋ "ಗೂಡ್ ಮಾರ್ನಿಂಗ್" ಕೇಳಿದರೆ ಸಾಕು ನನ್ನ್ ಮೈಯೆಲ್ಲ ಏನೋ ಒಂದು ರೋಮಾಂಚನ್. ನಾನು ನನ್ನ ಸೆಮ್ ಓಲ್ಡ್ ಡೈಯಾಲಾಗ್ "ಕುದುಲು ಬಿಟ್ಟಿ ಸ್ನಾನ ಮನೆಯಿಂದ ಹೊರಗೆ ಬರಬೇಡ ಕಣೆ" ಹೊಡೆಯುತ್ತಿದ್ದೆ . ನೀನು ಅದಕ್ಕೆ ನಗುತ್ತಾ ಮುಂಜಾನೆ ಮುಂಜಾನೆ ನಿನ್ನ ಫ್ಲರ್ಟ್ ಸ್ಟಾರ್ಟ್ ಮಾಡ್‌ಬಿಟ್ಟಿಯ ಮಾರಾಯ ಅನ್ನುತ್ತಾ ಸ್ನಾನಕ್ಕೆ ಹೋಗೋತ್ತಿದ್ದೆ .ಆದರೆ ಇತ್ತೀಚಿನ ದಿನಗಳಲ್ಲಿ ನಮ್ಮ ಸ್ನೆಹಕ್ಕೆ ಯಾರ ದ್ರಷ್ಟಿ ಬಿತ್ತೋ ಅಥವ್ ನಾನೇ ಎಲ್ಲಿ ಎಡವಿ ಬಿಟ್ಟೆ ಗೊತ್ತಿಲ್ಲ. ಒಂದು ಮಾತ್ರ ನಿಜ ನಮ್ಮಲ್ಲಿರುವ ಪ್ರೀತಿಯಲ್ಲಿ ಒಂದು ಸಣ್ಣ ಗೆರೆ ಮೂಡಿದೆ. ನನ್ನ ಜೊತೆ ಸಣ್ಣ ವಿಷಯ ಕೂಡ ಹೇಳುವ ನೀನು ಅಂದು ಹತ್ತು ದಿನದ ಉರಿಗೆ ಹೋಗ್‌ಬೇಕಾದ್ರೆ ಮೊದಲನೆಯ ಬಾರಿ ನನ್ನ ಹೇಳಿ ಹೋಗ್‌ಬೇಕು ಅಂತ್ ಅನ್ನಿಸರ್ಲಿಲ್ಲ ನಿನಗೆ. ನಾನು ನಿನಗೆ ಕಾಲ್ ಮಾಡುತ್ತೇನೆ ಅನ್ನುವ ಪ್ರಜ್ಞೆ ಕೂಡ ಇರ್ಲಿಲ್ಲ ಅಲ್ವೇ ನಿನಗೆ?.

ನಾನು ಪ್ರಾಕ್ಟಿಕಲ್ ಹುಡುಗ ಕಣೆ ನಿಜ..ಆದರೆ ಯಾವ ಯಾವಾದನ್ನು ನಾನು ಪ್ರಾಕ್ಟಿಕಲ್ ಆಗಿ ತೆಗೆದು ಕೊಳ್ಳಲಿ.. ನೀನು ಈಗೀಗ ನನ್ನ ಜೊತೆ ಮಾತು ಕಡಿಮೆ ಮಾಡಿದ್ದಾ ?, ನಾನು ಒಂಟಿ ತನ ಫೀಲ್ ಆಗಿ ನಿನ್ನ ಕಾಲ್ಲ್ ಮಾಡಿದಾಗ ನೀನು ಬಿಜಿ ಅಂತ್ ಎಸ್ಟೋ ಸರಿ ಹೇಳಿದ್ದಾ ಅಥವಾ ನಿನ್ನ ಜೊತೆ ಮಾತಡುವ ಆಸೆಯಿಂದ ನಿನಗೆ ಕಾಲ್ ಮಾಡಿದರೆ ನೀನು ನನ್ನ ಕಾಲನ್ನು ಎಸ್ಟೋ ಸರಿ ರೆಸಿವ್ ಮಾಡದೇ ಇದ್ದಿದ್ದಾ?. ಯಾಕೆ ರೆಸಿವೆ ಮಾಡ್ತಾ ಇಲ್ಲ ಕಣೆ ಅಂತ ಕೇಳಿದರೆ ಅದಕ್ಕೆ ನೀನು ಸೈಲೆಂಟ್ ಮೊಡಲ್ಲಿ ಇತ್ತು ಕಣೋ ಗೊತ್ತಾಗ್ಲಿಲ್ಲ ಅನ್ನುವ ಸುಳ್ಳು ಬೇರೆ.. ಅದೇ ಸ್ವಲ್ಪ ದಿನಗಳ ಹಿಂದೆ ನನ್ನ ಮಿಸ್ ಕಾಲ್ ನೋಡಿ ನೀನು ಮೆಸೇಜ್ ಮಾಡುತ್ತಾ ಇರ್ಲಿಲ್ವಾ?. ಹೀಗೆ ಏನೇನು ಅಂತ್ ಈ ಹಾಳಾದ ಮನಸ್ಸಿಗೆ ಸುಳ್ಳು ಹೇಳಲಿ..ಇದೆಲ್ಲ ನೀನು ನನ್ನಿಂದ ಸ್ವಲ್ಪ ದೂರ ಆಗ್‌ಬೇಕು ಅಂತ್ ಮಾಡ್ತಾ ಇದ್ದೀಯೋ ಅಥವಾ ನಾನು ನಿನಗೆ ಮಿಸ್ ಮಾಡುವದು ಕಂಡು ಆನಂದ ಪಡ್ತಾ ಇದ್ದೀಯೋ ಗೊತ್ತಿಲ್ಲ..ಆದರೆ ಒಂದು ಮಾತ್ರ ಗೊತ್ತು ವಿನಾಕಾರಣ ನಮ್ಮಿಬ್ಬರ ಈ ಪ್ರೀತಿಯ ಸಂಬಧದಲ್ಲಿ ಕೆಂಪು ಗೆರೆ ಕಾಣಿಸಿ ಕೊಂಡಿದೆ. ಜೀವನದ ವಾಸ್ತೀವಿಕತೆಯ ಜೊತೆಗೆ ನನ್ನ ಮನಸ್ಸಿನ ಭಾವನೆಗಳನ್ನು ಹೇಗೆ ಕಡಿವಾಣ ಹಾಕಬೇಕು ಅನ್ನುವಾದು ನನಗೆ ಚೆನ್ನಾಗಿ ಗೊತ್ತು ಕಣೆ..ನಮ್ಮಲ್ಲಿರುವ ಪ್ರೀತಿ ಎಂದು ಕಹಿ ಆಗಬಾರದು. ಇದರಲ್ಲಿ ಇರುವ Sweetness ಮತ್ತು warmness ಕೊನೆಯವರಿಗೂ ಹಾಗೆ ಇರ್ಬೇಕು. ಆದ್ದರಿಂದ ನಾನು ಇನ್ನೂ ಮುಂದೆ ನಿನ್ನ ದಿನ ಕಾಲ್ ಮಾಡಿ ಕಸ್ಟ್ ಕೊಡಲ್ಲ. ಯಾವಾಗಾದರೂ ಒಮ್ಮೆ ಕಾಲ್ ಮಾಡ್ತೀನಿ. ಯಥ ಪ್ರಕಾರ ನಿನಗೆ ಈಸ್ಟ್ ಆಗುವಸ್ಟೆ ಮಾತಾಡೋಣ,ಯಕಂದ್ರೆ ನನ್ನ ಈಸ್ಟ್ ಕೇಳಿದರೆ ದಿನದ 24 ಗಂಟೆ ನಿನ್ನ ಜೊತೆ ಮಾತಾಡ್ತಾ ಇರ್ಬೇಕು ಅನಿಸುತ್ತೆ. ಈಗಾಗಲೆ ನಿನಗೆ ರಾತ್ರಿ 12 ಗಂಟೆ ಆಗಿರಬಹುದು ..ಈ ಹೊತ್ತಿಗಾಗಲೆ ನನ್ನ ಪತ್ರ ನೀನು ನೂರು ಸರಿ ಓದಿರ್ತಿಯಾ ಅಂತ್ ಗೊತ್ತು. ನನ್ನ ಪ್ರೀತಿಯ ಹುಡುಗಿ ನೀನು ಕೊಟ್ಟ ಅದೆಲ್ಲ ಸಂತಸಕ್ಕೆ ನಾನು ಯಾವಾಗಲು ಋಣಿ.. ನಿನ್ನ ಕೆನ್ನೆಗಳಿಗೆ ನನ್ನ ತುಟಿ ಕಳಿಸಿದ ಮುತ್ತಿನಂದಿಗೆ ನಿನಗೆ ಗೂಡ್ ನೈಟ್.ಪ್ರೀತಿಯ ಹುಡುಗ ....

ರಾಕ್ಷಸ..

ನಮ್ ಕೆಲ್ಸದ್ ನಂಜಿ ಬಂದು "ಚಿಕ್ಕವಾರೆ ಸೋಮಣ್ಣ ದೇವಸ್ಥಾನದ್ ಕಂಬದ್ ತಾವಾ ಕಾಗ್ಜ ಇಟ್ಟವ್ನಂತೆ. ನೀವ್ ಒದ್ ಬೈಕಂತೆ" ಅಂದಾಗ ನನ್ ಎದೆ ಧಸಕ್ ಅಂತು. ಅಪ್ಪ ಎಲ್ಲಾದ್ರೂ ನೋಡಿದ್ರೆ ಎನ್ ಗತಿ ? ಅಲ್ಲ್ಯಕಿಟ್ಟಿದ್ಯೋ ಒರಟ..ನಾನು ಕಿರುಗಣ್ಣಿನಲ್ಲಿ ನಿನ್ನ ನೋಡ್ತೀರೋದು ನಿಂಗ್ ಗೊತ್ತಗೋಯ್ತಾ ಅಂತ ಒಳಗೊಲ್ಗೆ ಚಿಂತೆಯಾಗಿತ್ತು. ಎನ್ ಬರ್ದಿದ್ಯೋ ಅಂತ ಕಾತ್ರ ಬೇರೆ. ಅಪ್ಪ ಓದೋ ಕಾಳಿದಾಸ ಕುಮಾರವ್ಯಾಸ ಪದ್ಯದ್ ಥರ ಏನಾದ್ರೂ ಬಾರ್‍ದಿರ್ತಿಯ ಅನ್ಕೊಂಡಿದ್ದೆ.ಅವತ್ತು ಅಪ್ಪನ್ ಕಣ್ನ್ ತಪ್ಸಿ ನಂಜಿ ಜೊತೆ ಟೆoಟ್ ನಲ್ ಬಂದಿದ್ದ ಕರಿಯ ಸಿನ್ಮ ನೋಡಕ್ ಹೋಗಿದ್ದೆ ಆಗ ನಂಜಿ "ನಮ್ ಸೋಮಣ್ಣನೂ ಈ ಈರೋ ಥರಾನೆಯ ಬೆಲೆ ಗಂಡು ಹತ್ತೂರಲ್ ಯಾವ್ ನನ್ ಮಗ್ ನು ಅವ್ನ್ ಮುಂದೆ ಏನು ಕಿಸ್ಯಕ್ ಆಗಕ್ಕಿಲ್ಲ" ಅಂತ ನಿನ್ನ ಹೊಗಳಿದ್ಲೂ. ಸಿನ್ಮ ಮುಗಿದ್ಮೇಲೆ ಲೇಟಾಯ್ತು ಅಪ್ಪ ಬೈತಾರೆ ಅಂತ ಭಯ ಆಗಿತ್ತು ಆವಾಗ ನಂಜಿ "ಹೆದ್ರಕಬೇಡಿ ಚಿಕ್ಕವ್ವಾರೆ ಅತ್ರುದ್ ದಾರಿಲಿ ಬೇಗ ಮಾನೀಗ್ ಕರ್ಕೊಂಡ್ ಹೋಯ್ತಿನಿ" ಅಂತ ಶಂಕ್ರಣ್ಣನ ಸರಾಯಿ ಅಂಗಡಿ ಮುಂದಿನ್ ದಾರೀಲಿ ಕರ್ಕೊಂಡ್ ಹೋಗಿದ್ಲು ಅಲ್ಲಿ ಕುಡ್ದು ಬಿದ್ದಿರೋರ್ನ ನೋಡಿ ಛೀ ಗಬ್ಬು ಅಂತ ಅವ್ಳ ಕಿವೀಲಿ ಹೇಳಿದ್ದೆ. ನೀನು ಅಲ್ಲೇ ಬಿದ್ದಿದ್ದೆ ಅಂತ ಇವತ್ತೇ ಗೊತ್ತಾಗಿದ್ದು.ಅವತ್ತು ಗೌಡ್ರ ಮನೆ ಎದ್ರೂ ನೀನು ಹಸ್ರು ಲೂಂಗಿ ಸುತ್ಕೊಂಡು ಕಟ್ಟಿಗೆ ಓಡೀತಿದ್ದೆ ನಾನು ಗೌಡ್ರ ಮಗ್ಲೂ ಪಗ್ಡೆ ಆಡ್ತಿದ್ವಿ..ನನ್ನ ಕಣ್ಣೆಲ್ಲಾ ನಿನ್ನ ಮೇಲೆ ನಿನ್ನ ಕರೀ ಬಣ್ಣ, ಅಗಲವಾದ ಭುಜ, ಧಾರಾಕಾರವಾಗಿ ಸುರೀ..ತಿದ್ದ ಬೆವ್ರು. ಅಬ್ಚ!! ಗಂಡು ಅಂದ್ರೆ ನೀನು ಅನ್ನುಸ್ಟು. ಆ ನಿನ್ನ ಅಗಲವಾದ ಎದೆಯ ಪುಟ್ಟ ಹೃದಯದಲ್ಲಿ ಗುಬ್ಬಚ್ಚಿ ತರ ಸೇರ್‌ಕೋಬೇಕು ಅನ್ಸಿತ್ತು . ಯಾವತ್ತು ಆಟದಲ್ಲಿ ಸೋಲ್‌ದವ್ಲು ಅವತ್ತು ಸೋತಿದ್ದೆ. ನಿಂಗೆ ಸೋತಮೇಲೆ ಪಗಡೆಲಿ ಗೆದ್ದರೆಷ್ಟು ಬಿಟ್ಟ್ರೆಷ್ಟು?? ಕಟ್ಟಿಗೆ ಓಡದ್ ಬಿಟ್ಟು ಒಂದೆ ಸಮನೆ ತಿಂದು ಹಾಕೊಹಾಗೆ ನೂಡ್ತೀದ್ಯಲ್ಲ ನನ್ನ ನಂಗೆಷ್ಟು ಭಯ ಆಗಿತ್ತು ಗೊತ್ತಾ??ಕರಿಯ ಐ ಲವ್ ಯುಕರು ನಾಡ ಮೆಲಾಣೆ (ರೇಡಿಯೋಲಿ ಬರ್ತಿತ್ತು ಕಣೋ ಅವತ್ತು)ಓರ್ಟ್ ಒರಟಾಗಿ ಇರೋದು ಕೆದರಿದ್ ಕೂದ್ಲೂ ಚೆನ್ನಾಗ್ ಕಾಣುತ್ತೆ ನಿಂಗೆ. ನಿಜ ಹೇಳಲ ನಿನ್ ಕಪ್ಪು ಬಣ್ಣ ತುಂಬಾ ಇಷ್ಟ ನಂಗೆ.ಆದ್ರೆ ನೀನು ಹಿಂಗೆ ಬರೀ ಲಾಂಗು, ಮಚ್ಚು ಅಂತ ಮಾತಾಡ್ಟಿದ್ರೆ ಹೆದ್ರಿಕೆಯಾಗುತ್ತಪ್ಪ ..ಥು ಥು ಥು ಎಷ್ಟ್ ಕುಡೀತೀಯೋ ನೀನು??? ಕುಡಿಯೋದನ್ನ ಬಿಟ್ರೆ ಮಾತ್ರ ನಾ ನಿನ್ನ ಮಾತಾಡ್ಸೋದು. ಇಲ್ಲ ಅಂದ್ರೆ ನಿನ್ ಕಡೆ ತಿರ್ಗೂ ನೋಡಲ್ಲ............ಅಂಧಹಾಗೆ ಈ ಸಿಂಗಾರವ್ವ ಯಾರು???ಹಾ ಅಪ್ಪ ಹುಡ್ಗುನ್ ನೋಡ್ಕೋ ಬಂದಿದಾರೆ ಪಕ್ಕದ್ ಹಳ್ಳಿಳಿ ಪ್ರೈಮರಿ ಸ್ಕೂಲ್ ಮೇಷ್ಟ್ರಂತೆ. ನಂಗೊಂಚೂರು ಇಷ್ಟ ಇಲ್ಲ ಅವ್ನು.. ಆದ್ರೆ ನೀನು ಅಪ್ಪನ್ನ ಜುಟ್ಟು ಗಿಟ್ಟು ಅಂದ್ರೆ ಸರಿ ಇರಲ್ಲ ನೋಡು.

ಮಾರಮ್ಮಾನ್ ಗುಡಿ ಹತ್ರ ಬೇಡ ನಮ್ ತೋಟದ್ ಬಾವಿ ಹತ್ರ ಬಾ. ಅವತ್ತು ನೀನು ನನ್ನ ಮೊದಲ್‌ನೆ ಸತಿ ನೋಡಿದಾಗ ಉಟ್ಟಿದ್ದ ನೀಲಿ ಬಣ್ಣದ ಲಂಗ ದಾವಾಣಿನೇ ಉಟ್ಟುಕೊಂಡ್ ಬರ್ತೀನಿ. ನನ್ನ ಹೆಸರಿರೋ ಮಚ್ಚು ತೊಗೊಂಡು ಬಾ ಅಲ್ಲೇ ಬಾವಿಗೆ ಎಸೆಯೋಣ. ಮಲ್ಲಿಗೆ ಅಂದ್ರೆ ನಂಗೆ ತುಂಬಾ ಇಷ್ಟ ನೀನೇ ಮುಡುಸ್ತಿಯಂತೆ. ............................................................. ನಿನ್ನವ್ಳೆ ಗೌರಿ

ಮಾರಮ್ಮುನ್ ಆಣೆ

ಒಂದು ವಿಭಿನ್ನವಾದ ಪತ್ರ....ಈ ತರಹದ ಭಾಷೆಯನ್ನು ಪ್ರೇಮ ಪತ್ರಕ್ಕೆ ಉಪಯಿಗಿಸಿದ್ದಕ್ಕೆ ನಿಮ್ಮಲ್ಲಿ ಕ್ಷಮೆ ಕೇಳುತ್ತಾ....

ಇವತ್ತು ಮಾರಮ್ಮನ್ ಗುಡಿ ಹತ್ರ ಬಂದ್ರೆ ವಾಕೆ...ಇಲ್ಲ ಅಂದ್ರೆ ಮಾರಮ್ಮುನ್ ಆಣೆ ನಿನ್ನ್ ಅಡ್ಡಡ್ಡ ಸಿಗಿದ್ ಹಾಕದೆ ಇಡ್ರೆ ನನ್ ಹೆಸರ್ ಬದ್ಲಿ ಮಾಡು ಆಟೆಯಾ.....ನಿಮ್ಮಯ್ಯನ್ ಏಷ್ಟು ದಿನ ಅಂತ ಒಳ್ಳೆ ಹಂದಿ ಕಾದ ಹಾಗೆ ಕಾಯೋದು ನಾನು..? ನನಗೇನ್ ಉಡುಗೀರೆ ಸಿಗಾಕಿಲ್ಲ ಅಂದುಕೊಂಡ್ಯ?..ಯಾಕೆ ಆ ಓಡ್ರ ಹುಡುಗಿ ಬಸಮ್ಮ ಇರ್ಲಿಲ್ವ ನಂಗೆ? ಯಾಕೆ ಹೊಲೇರ್ ನಿಂಗಣ್ಣನ ಹೆಂಡ್ರು ಹೆಂಗವ್ಲೆ ಗೊತ್ತು ತಾನೆ? ಮತ್ತೆ ಮತ್ತೆ ನಮ್ಮೂರ ಗೌಡ್ರ ಮನೆ ಬಟ್ಟೆ ಒಗಿಯೋ ಸಿಂಗಾರವ್ವ ಹೆಂಗವ್ಳೆ ಗೊತ್ತಲ್ವ?.. ಒಂದು ಕ್ವಾಟರ್ ಹಾಕಂಡ್ ಹಂಗೆ ಒಂದು ಕಿತಾ ಊರಾಗ್ ಹೋದ್ರೆ ಸಾಕು ಗಂಟು ಮೂಟೆ ಕಟ್ಟಿಕೊಂಡು ನನ್ ಜೊತೆ ಬರಾಕ್ ರೆಡೀ ಆಗಿದ್ದಾರೆ..ಅಂತದ್ರಲ್ಲಿ ನಿಂದೇನೆ ?...

ಆವತ್ತು ನಾನು ಶಂಕ್ರಣ್ಣನ ಸರಾಯಿ ಅಂಗಡಿನಲ್ಲಿ ಪುಲ್ಲ್ ಟೈಟಾಗಿ ಬಿದ್ದಾಗ ಒಂದ್ ದಪಾ ನನ್ ಮುಂದೆ ಹೋದೆ ನೋಡು ಅವತ್ತ್ ನಾನ್ ಕುಡಿದಿದ್ ನಷೆ ಎಲ್ಲ ಅಣ್ಣಮ್ಮನ್ ಪಾದ ಸೇರ್ಕೋಂಡ್ ಬಿಡ್ತು...ಅವತ್ತ್ ಏರಿದ್ ಕಿಕ್ಕು 3 ಕ್ವಾಟರ್ mc ರಮ್ ಹೊಡೆದ್ರು ಸಿಕ್ಕಿಲ್ಲ ನೋಡು....ಅಷ್ಟೆ ಅಲ್ಲ ಕಣೆ ಅವತ್ತು ನಮ್ಮೂರ ಗೌಡ್ರ ನ ಹಲ್ಕಾ ನನ್ ಮಗಾ ಅಂತ ಬೈದಿದ್ನಲ್ಲ ನಮ್ ಪಕ್ಕದೂರಿನ್ ನಿಂಗಣ್ಣ ಅವನ್ ಕೈ ಕತ್ತರಿಸಿದಾಗ ನನ್ ಮಚ್ಚಿಂದ ಸೋರ್ತ ಇರೋ ರಕ್ತ ಕೂಡ ನಿನ್ ಹೆಸರನ ರಾಗವಾಗ್ ಹಾಡ್ಕೋತ ಬರ್ತ ಇತ್ತು ನೋಡು.. ..

ನಿಮ್ಮ ಅಪ್ಪ ಅವನಲ್ಲ ಅದೇ ಜುಟ್ಟು ಅವನಿಗೆ ಹಬ್ಬ ಇದೆ ಕಣೆ. ನನಗೆ ಗೊತ್ತಿಲ್ಲ ಅಂದುಕೊಂಡ್ಯ? ಮೊನ್ನೆ ಕಳ್ಳನ ಹಂಗೆ ಹೋಗಿ ಪಕ್ಕದೂರಿನ್ ಹುಡುಗನ್ ಮನೆಗೆ ಹೋಗಿ ಬಂದವನಂತೆ..ನಂಗೆ ತಲೆ ಕೆಟ್ರೆ ನಾಳೆನೆ ಆ ಹುಡುಗ ತಲೆ ತೆಗೆದ್ ಬರ್ತೀನಿ ತಿಳ್ಕ ನಿನ್ನ ಬೇರೆ ಹುಡುಗನ್ ಜೊತೆ ಇರಾದ್ನ ಕಲ್ಪನೇ ಮಾಡ್ಖಳ್ಳಾದು ಒಂದೆ....3 full ಬಾಟಲ್ ವಿಸ್ಕಿನ ನೀರಿಲ್ಲದೆ ಕುಡಿಯಾದು ಒಂದೆ...ನೋಡು ಇವೆರೆಡರಲ್ಲಿ ಯಾವುದು ಒಂದಾದ್ರು ಪ್ರಾಣ ಶಿವನ್ ಪಾದ ಸೇರ್ಕೊಳ್ಳೋದು ದಿಟಾ...ಮೊನ್ನೆ ತಗಂಡು ಬಂದ ಲಾಂಗ್ ಮೇಲೆ ನಿನ್ ಹೆಸರನ್ನ ಬರ್ದಿಟ್ಟಿವ್ನಿ..ಯವತ್ತು ಅದು ಅಳ್ಸಿ ಹೋಗಾಂಗಿಲ್ಲ ಹಂಗೆ ಬರ್ದಿದ್ದೀನಿ ನನ್ ಎದೆಯಾಗ್ ಕೂಡ ಹಂಗೆ ಕಣೆ ಎಲ್ಲರೂ ಬ್ಲೇಡನಾಗ ಬರ್ಕಂಡ್ರೆ ನಾನ್ ಅದೆ ಹೊಸ ಮಚ್ಚ್ ತಗೊಂಡು ಕುಯ್ದುಕೊಂಡೀನಿ...ಬರೊಬ್ಬರಿ ಅರ್ದ ಇಂಚು ಗಾಯ ಆಗಿದೆ ಗೊತ್ತೇನು? ಅಯ್ ಬಿಡು ಅದ್ನ ಒಂದು ಬಾಟಲ್ ಹಾಕೊಂಡ್ರೆ ಅಂದ್ರೆ ಆ ಗಾಯ ಯಾವ್ ಲೆಕ್ಕ ನನಗೆ...

ನನಗೆ ಇತ್ತೀಚೆಗೆ ಸಕತ್ ನೆನಪಾಗ್ತ ಇದ್ದಿ ನೋಡು ನೀನು...ಮೊನ್ನ್ನೆ ಗೌಡ್ರ ತೋಟಕ್ಕೆ ಸಿಂಗಾರವ್ವ ಬರಾಕ್ ಹೇಳಿದ್ಲು ..ಹೋದೆ ನೋಡು 2 ಕ್ವಾಟರ್ ಹಾಕೊಂಡು. ಆದ್ರೆ ನಿನ್ ನೆನಪ್ ಬಂತು ಹಂಗೆ ಎಲ್ಲ ನಿಶೆ ನು ಹಂಗ್ ಹಂಗೆ ಇಳಿದು ಹೋಯ್ತ್ ನೋಡು..ಮೊನ್ನೆ ಮತ್ತೆ ಒಂದು HALF MALDAR ಮಾಡೊಕೆ ಅಂತ ಮಚ್ಚ್ ತಗೊಂಡೇನೋ ಹೋದೆ..ಅದ್ರಾಗಿದ್ದ್ ನಿನ್ ಹೆಸರೂ ""ಬ್ಯಾಡ ಸೋಮ ಹಂಗ್ ಮಾಡ್ ಬ್ಯಾಡ ನನ್ ಹೆಸರ್ ಮ್ಯಾಗ್ ರಕ್ತದ್ ಕಲಿ ನ ಹಚ್ಚೆ ಹಾಕಿಸ ಬ್ಯಾಡೊ ಗೆಳೆಯ"" ಅಂದ ಹಂಗಾಗಿ "ತಪ್ಪಾಯ್ತು ಕಣಣ್ಣೋ " ಅಂದುಕೊಂಡು ಬಂದು ಬಿಟ್ಟೆ

ಹಂಗೆ ನೋಡು ಹೆಂಗಿದ್ದೋನ್ ಹೆಂಗಾಗ್ ಬಿಟ್ಟೆ..ಆದ್ರೂ ಮಚ್ಚಿನ್ ಸವಾಸ ಬಿಡಾಕ್ ಆಗಾಂಗಿಲ್ಲ ನನಗೆನ್ ಹಿಂದ ಮುಂದಾ..ಆದ್ರೆ ನಾನ್ ಎಷ್ಟ್ ಬದ್ಲಾಗಿದ್ದಿನಿ ಅಂದ್ರ .. ರಕ್ತ ಕಂಡ್ರೆ ಮನ್ಸಾಗ ಯಾಕೊ ನೀನೆ ವಿಲ ವಿಲ ಒದ್ದಾಡಿದ ಹಾಗಾಗ್ತದ ನನಗ...ಬ್ಯಾಡ ಗೆಳೆಯ ಇನ್ ಮ್ಯಾಲ ಮಚ್ಚ್ ಮುಟ್ಟಿದ್ರ ನನ್ ಮ್ಯಾಲೆ ಆಣೆ ನೊಡು ಅಂತ ನನ್ ಮಚ್ಚ್ಹ್ ಹಿಡಿದ್ ಕೊಂಡು ಹೇಳಿದ್ ಹಾಗೆ ಆಗ್ತ ಇದೆ ನನಗೆ....ಎಷ್ಟ್ ಪವರ್ ಐತೆ ನಿನ್ನಯ್ಯನ್ ನಿನ್ ಹತ್ರ..ಅದ್ರಗಿರೋ ಪವರ್ರು ಒಂದು ಬಾಟಲ್ ಸುಕ್ಕಾ ವರ್ಜಿನಲ್ ಚಾಯ್ಸು ಅಥವ ರಾಜ ವಿಸ್ಕಿನಾಗೂ ಇಲ್ಲ ನೋಡು..ಯಾಕೊ ಗೊತ್ತಿಲ್ಲ ಇನ್ ಮ್ಯಾಲೆ ಗೌಡ್ರ ಹತ್ರ ಜೀತ ಮಾಡ್ಕಂದ್ರೂ ಸರಿ .ಇಂತ ಕೆಟ್ ಕೆಲ್ಸ ಮಾಡ್ಬಾರ್ದು ಅಂದುಕೊಡೀವ್ನಿ ನೀನೊಭ್ಲು ಜೊತೆಗಿರ್ತಿಯಲ್ಲ? ಇಲ್ಲ ಅನ್ನಬ್ಯಾಡ ನೀನ್ ಜೊತೆ ಇರ್ಲಿಲ್ಲ ಅಂದ್ರ ಮತ್ತೆ ಮಚ್ಚ್ ನನ್ ಜೊತೆ ಇರ್ತಾದ ಆಷ್ಟ ನಾನ್ ಹೇಳೋದು...

ಇವತ್ತ್ ನೀ ಮಾರಮ್ಮನ್ ಗುಡಿ ಹತ್ರ ಬಾ ನೋಡು ಇಲ್ಲಿವರ್ಗು ನಾನ್ ಎಷ್ತ್ ಕೊಲಿ ಮಾಡೆನಿ ಎಷ್ತ್ ಮನಿಹಾಳ್ ಕೆಲ್ಸ ಮಾಡೇನಿ ಅಂತ ನಿನ್ ಕಾಲ್ ಹಿಡಕಂಡ್ ಕ್ಷಮಾ ಕೇಳಾಕ ಬೇಕ್ ನೋಡು..ನಾನ್ ಮಾಡಿರೋ ಪಾಪ ಎಲ್ಲ ಕ್ಷಮಿಸ್ತಿಯೇನು? ಇನ್ ಮ್ಯಾಲ ನಾನ್ ಪ್ರಮಾಣ ಮಾಡ್ತೀನಿ ಸತ್ತು ಸ್ವರ್ಗದಾಗಿರೊ ನಮ್ಮವ್ವನ್ ಮ್ಯಾಲೆ ಆಣೆ ಮಾಡ್ತೀನಿ ....ಇನ್ ಮುಂದ ಒಳ್ಳಿ ಹುಡುಗ ಅಂತ ಅನ್ಸ್ಕೋತೀನಿ ..ಇನ್ನು ನಾನ್ ಎನ್ ಎನೊ ಮಾತಾಡ್ಬೆಕಾ ನಿನ್ ಕೂಡಿ,..ಒಲ್ಲೆ ಅನ್ನ ಬ್ಯಾಡೆ ನಮ್ಮವ್ವ .....ಮತ್ತ ನಕರ ಮಾಡಿದ್ರೆ ಗೊತ್ತಲ್ಲ...ನನ್ ಮಚ್ಚ್ ನನ್ ಮಾತು ಒಂದೊಂದು ಸಲ ಕೇಳಾಕೆ ಇಲ್ಲ ಅಂತದ.....ಆದ್ರೆ ಒಂದ ಮಾತ್ ಹೇಳತೀನಿ..ಮೊದ್ಲಿಗೆ ನನ್ ಮಚ್ಚ್ ನ ಎಷ್ತ್ ಆಸೆ ಪಡ್ತ ಇದ್ದೆ ಅದ್ಕಿಂತ ಜಾಸ್ತಿ ನಿನ್ ಮ್ಯಾಗ ಜೀವ ಇಟ್ಟೀನಿ..ನನ್ ಹಳಿ ಪಾಪ ಕಾರ್ಯನೆಲ್ಲ ಕ್ಷಮಾ ಮಾಡಾಕ ಅಂತ ಆ ದ್ಯಾವ್ರು ನಿನ್ ಕಳ್ಸಾನ ಅಂದುಕೊಂಡಿದ್ದಿನಿ..ಬರ್ತಿಯಲ್ಲ? ಕ್ಷಮಾ ಮಾಡ್ತಿಯಲ್ಲ? ನನ್ ಜೀವ ಉಳುಸ್ತಿಯಲ್ಲ ?ನೀನ್ ಬರಾದ ಕಾಯ್ತಿರ್ತಿನಿ ಕಣೆನನ್ ಕೈನಾಗ ಮಚ್ಚ್ ಬದಲಿಗೆ ಹತ್ತು ಮೊಳ ಮಲ್ಲಿಗೆ ಹೂವ್ ಇದೆ ಕಣೆ ನಿನ್ ಮುಡಿಗೆ ನಾನ್ ಮುಡುಸ್ಲಿ?ನಿನ್ನ್ ಹುಡುಗಡೆಡ್ಲಿ ಸೋಮ

ನನಸಾಗದ ಕನಸು ಕಣೆ .

ಎಲ್ಲರೂ ಕನಸು ಕಾಣುತ್ತಾರೆ ನಾನು ಕೂಡ ಹಾಗೆನೇ .ಒಂದು ಕನಸು ಕಂಡೆ ಅದು ನನಸಾಗದ ಕನಸು ಕಣೆ . ಕನಸು ಕಂಡಾಗ ಕುಶೀಯೇ ಆಗಿತ್ತು ಆದರೆ ಅದನ್ನು ನನಸು ಮಾಡೋದು ಅಷ್ಟು ಸುಲಭ ಅಲ್ಲ ಅಂತ ನನಗೆ ಅನ್ನಿಸತೊಡಗಿದೆ. ಮನುಷ್ಯನಿಗೆ ಕನಸು ಒಂದು ವರ ಕೆಲವರ ಪಾಲಿಗೆ ಅದು ಶಾಪ. ಕನಸು ಕಾಣೋದು ಬಿಟ್ಟು ಅದರ ಹಿಂದೆ ಓಡಲು ಶುರು ಮಾಡಿದರೆ ಅದಕ್ಕೆ ಅರ್ಥ ಏನು ಹೇಳು ? ಕಂಡ ಕನಸು ನನಸ ಆದರೆ ಸಂತೋಷ ಇಲ್ಲದಿದ್ದಾರೆ ಪರವಾಗಿಲ್ಲ ಅಂತ ಇರಬೇಕು ಅಲ್ಲವೇ. ಆದರೆ ಕನಸು ನಿಜವಾಗುವುದೇ ಇಲ್ಲ ಅಂತ ಗೋತಿದ್ದರೂ ಅದರ ಬೆನ್ನು ಹಿಡಿದು ಹೋಗುವುದು ಮೂರ್ಖತನದ ಪರಮಾವಾದಿ ಅಂದರೆ ತಪ್ಪಾಗಲಾರದು ಅಲ್ಲವೇ ಗೆಳತಿ? ಕಂಡ ಕನಸು ನನಸಾಗಲಿಲ್ಲ ಅಂತ ಸುಮ್ಮನೇ ಕೊರಗೋ ಬದಲು ಹೊಸ ಕನಸ ಕಾಣೋದು ಒಳ್ಳೆಯದಲ್ಲವೇ? ಕ ನಸಿ ಗೆನು ಹೇಳು ಯಾವಾಗ ಬೇಕಿದ್ರೂ ಕಣ್ಮುಂದೆ ಬಂದು ನಿಲ್ಲುತ್ತೆ ಆದರೆ ಅದನ್ನ ಅನುಭವಿಸುವವನಿಗೆ ಗೊತ್ತು ಅದರ ಪಾಡೇನು ಕಷ್ಟವೇನು ಅಂತ. ಇದಕ್ಕೆ ಪರಿಹಾರ ಏನು ಅಂತ ಆಲೋಚಿಸಿದರೆ ಕನಸು ಕಾಣುವುದನ್ನೇ ಬಿಡಬೇಕು ಕನಸು ಕನಸಾಗೇ ಉಳಿಯಲಿ . ಅದು ಮತ್ತೆ ಕಾಣೋದು ಬೇಡ ಮತ್ತೆ ಅದೇ ಕನಸ ಕಂಡು ಚಿತ್ರ ಹಿಂಸೆ ಅನುಭವಿಸಲು ನಾನು ತಯಾರಿಲ್ಲ. ನನಗೂ ಜೀವನ ಇದೆ ಅಲ್ಲವೇ?ನನಗೂ ಆಸೆ ಗಳಿವೆ ತುಂಬಾ ತುಂಬಾ ಆಸೆಗಳು ಅವುಗಳನ್ನ ಬಿಟ್ಟು ಖಾಲಿ ಒಂದು ಕನಸಿನಿಂದಾಗಿ ನನ್ನ ಬಾಳು ಬರಡಗೋದು ನನಗೆ ಅದೇನೋ ಹಿಡಿಸಲಿಲ್ಲ. ನನಗೆ ನನ್ನ ಕನಸಿನ ಮೇಲೆ ಹಿಡಿತವಿದಲು ಸಾಧ್ಯ ವಿಲ್ಲ ಅಂದರೆ ನಾನು ಒಬ್ಬ ಮನುಷ್ಯನೆ ಅಂತ ಅನ್ನಿಸಿತ್ತುತಿದೆ. ಕಂಡ ಕನಸು ಪಟ್ಟ ಆಸೆ ಅಷ್ಟು ಸುಲಭವಾಗಿ ಬಿಟ್ಟು ಹೋಗೋಲ್ಲ ಆ ಬಲೆಯಿಂದ ಹೊರಗಡೆಗೆ ನಾವೇ ಬರಬೇಕು ಅಲ್ಲವೇ? ಕನಸು ನಮ್ಮ ಸುತ್ತಲು ಬಲೆ ಹೆಣೆಯುತ್ತಲೇ ಇರುತ್ತದೆ ಯಾವಾಗಲು ಅದು ಹೇಣೆದಾ ಬಲೆಯಲ್ಲಿ ಕೆಲವರು ಸಿಕ್ಕು ಹೊರಗೆ ಬರಲರದೇ ಚಡ ಪಡಿಸುತ್ತಾರೆ. ಕನಸಿಗೆ ಕೊನೆಯೆ ಇಲ್ಲ ಆಸೆಗೆ ಮೀಥಿಯೇ ಇಲ್ಲ.... ಇಂತಹ ಕನಸು ಅದೇಕೆ ಬೇಕು? ನನಸಾಗದ ಕನಸು ಅದೇಕೆ ಬೇಕು? ಆ ಕನಸು ನನ್ನ ಯಾಕೆ ಆಳಬೇಕು? ಏನು ನನಗೆ ಹುಚ್ಚು ಹಿಡಿದಿದೆ ಅಂತ ನಗುತಿದ್ದೀಯ ಇಲ್ಲ ಕಣೆ ಹಿಡಿದಿಲ್ಲ..ನಾನು ಸರಿಯಾಗೇ ಇದ್ದೀನಿ. ಒಹೋ ಮತ್ತೆ ಏನು ಕನಸುಗಳ ಬಗ್ಗೆ ಪ್ರಭಾಂಧ ಬರೆದಿದ್ದೀನಿ ಅಂತ ಓದುತಿದ್ದೀಯ. ಹೌದು ನಿನಗೆಲ್ಲಿ ಅರ್ಥ ಆಗ್‌ಬೇಕು ಹೇಳು ಇಷ್ಟರವರೆಗೆ ನನ್ನ ಮಾತುಗಳನ್ನು ಅರ್ಥ ಮಾಡಿಕೊಳ್ಳದವಳು ನೀನು ಈಗ ಈ ಪತ್ರ ನೋಡಿದ ತಕ್ಷಣ ನಿನಾಗೆಲ್ಲಿ ಅರ್ಥ ಆಗುತ್ತೆ? ಅಲ್ಲ ಕಣೆ ನಿನಗೆ ನಿಜಕ್ಕೂ ನಾನು ಅಷ್ಟು ಹೊರಗಿಣವನಾಗಿ ಬಿಟ್ಟೆನ? ಅಲ್ಲ ನನಗೇನೂ ಕಮ್ಮಿ ಅಂತೀನಿ? ನೀನು ಅಂದು ಹೇಳಿದ ಮಾತು ನಿಜಕ್ಕೋ ಲಾವರಸದಂತೆ ಇನ್ನೂ ಕುದಿಯುತ್ತಾ ಇದೆ ಕಣೆ. ಇವತ್ತು ಯಾಕೋ ಅದು ಮಿತಿ ಮೀರಿತು ಅಂತ ಕಾಣುತ್ತೆ ಅದಕ್ಕೆ ತಡಿಯೊಕ್ಕೆ ಆಗದೆ ಈ ಪತ್ರ ಬರೀತ ಇದ್ದೀನಿ. ನೀನು ನನ್ನ ಬಾಳಿಗೆ ಬಂದಾಗ ನನ್ನಷ್ಟು ಅದೃಷ್ಟವಂತ ಈ ಜಗತ್ತಿನಲ್ಲೇ ಯಾರು ಇಲ್ಲ ಅಂದುಕೊಂಡೆ ಅಯ್ಯೋ ಈಗ ನಿಜಕ್ಕೋ ಅನ್ನಿಸ್ತಿದೆ ನನ್ನಷ್ಟು ಸೋಲುಹಿದಿಡೋನು ಯಾರು ಇಲ್ಲ ಅಂತ. ನೀ ಯಾಕೆ ಬಂದೆ ?

ಸುಮ್ಮನೇ ಕಣ್ಣಲ್ಲೇ ಆಸೆ ತೋರಿಸಿ ನಾನು ನಿನಗಾಗಿ ಮನದಲ್ಲೇ ತಾಜ್‌ಮಹಲ್ ಕಟ್ಟುವ ಕನಸು ಕಂಡೆ .ನಿನ್ನ ಒಂದು ಮಾತು ಇಡೀ ತಾಜ್‌ಮಹಲನ್ನೇ ಧರೆಗೆ ಉರುಳಿಸಿ ಬಿಡ್ತು. ನೀನು ಮೊದಲು ನನ್ನ ನೋಡಿ ನಗುತಿದ್ದದು, ಆ ನಿನ್ನ ನೋಟ , ಆ ನಿನ್ನ ಮಾತು ಎಲ್ಲವನ್ನು ತಪ್ಪಾಗಿ ಅರ್ಥೈಸಿ ಕೊಂಡೆನೋ ಏನೋ ಅದೇ ನನ್ನ ಜೀವನಕ್ಕೆ ಮುಳ್ಲುವಾಗಿಬಿಡ್ತು. ಒಹೋ ತುಂಬಾ ಭಾವುಕನಾಗಿ ಈ ಪತ್ರ ಬರೆದೆ ಅಂತ ಆಲೋಚಿಸುತಿದ್ದೀಯ? ಅಂಥದೇನಿಲ್ಲ ನಾನೇನು ಭಾವುಕನಾಗಲಿಲ್ಲ. ಈ ಪತ್ರ ಬರೆದು ನಾ ನಿನ್ನ ತುಂಬಾ ಮಿಸ್ ಮಾಡ್ತಾ ಇದ್ದೀನಿ ಅಂತ ತೋರಿಸಿಕೊಳ್ತಾನು ಇಲ್ಲ ಅಥವಾ ಇನ್ನೊಮ್ಮೆ ನನ್ನ ಜೀವನಕ್ಕೆ ಬಂದು ಆರಿದ ದೀಪವ ಪುನಹ ಹಚ್ಚು ಅಂತನು ಹೇಳಲು ಬರೆದಿಲ್ಲ. ನನಗೆ ನಿನ್ನ ಬಿಟ್ಟು ಬದುಕೋ ಶಕ್ತಿ ಇದೆ ಅಂತ ಹೇಳಲು ಬರೆದೆ ಅಷ್ಟೇ ನನ್ನ ಕಣ್ಣೀರಿಗೆ ಬೆಲೆ ಕೊಡದೋಳು ನೀನು, ನನ್ನ ಪ್ರೀತಿಯ ಮೇಲೆ ಕೀಸಕ್ಕನೆ ನಕ್ಕೂ ಅಪಹಾಸ್ಯ ಮಾಡಿದವಳು ನೀನು ಅಲ್ವಾ? ನಿನಗೆ ಪ್ರೀತಿ ಅಂದರೆ ಏನು ಅಂತಾನೆ ಗೊತಿಲ್ಲ ಹೋಗಿ ಹೋಗಿ ನಿನ್ನ ನಾನು ಪ್ರೀತಿಸಿದೆನಲ್ಲ ನನಗೆ ಮೆಟ್ಟಿನಲ್ಲಿ ಹೊಡ್ಕೋಬೇಕು. ನೋಡೇ ಇನ್ನೊಂದು ಸಲ ನನಗೆ ಫೋನ್ ಮಾಡುವುದಾಗಲಿ , ಮೆಸ್ಸೇಜ್ ಮಾಡುವುದಾಗಲಿ ಬೇಡ. ನೀನು ನಾನಿಂದ ದೂರ ಹೋಗು ನನ್ನ ಮನಸಿನಿಂದ ದೂರ ಹೋಗು ನಾನು ನನ್ನಷ್ಟಕ್ಕೆ ಬದುಕೊದಕ್ಕೆ ಬಿಡು......

ಗೆಳತಿ ನಿನ್ನ ಹ್ಯಾಂಗ ಮರೆಯಲಿ ನಾ

ಸಂಜೆ ಕತ್ತಲಿನಾಗ ಕೂತು ಮಂದ ಬೆಳಕಿನಾಗ ಮರೆತು ಹಾಂಗ ಒಮ್ಮೆ ನಗೆಯ ಬೀರಿ ,ಮರಿಯಾದ ಗೆಳತಿ ನಿನ್ನ ಹ್ಯಾಂಗ ಮರೆಯಲಿ ನಾ ಹ್ಯಾಂಗ ಮರೆಯಲಿ.......!!ಸುಕಾ ಸುಮ್ನೆ ಸಿಡುಕಿಕೊಂಡು , ಮುಖ ಗಂಟು ಹಾಕಿಕೋಂಡು ಮಾತು ಬಿಟ್ಟಿ ನೀ ಸೋತು ಹೊದೆ ನ ಆಗ ಸೋತು ಹೊದೆ ನಾ ...!!ಫೆಲು ಅಲ್ಲ ನನ್ನ ಪ್ರೀತಿ ಪಾಸು ಕೂಡ ಆಗಲಿಲ್ಲ , ಸೋತು ಕೂಡ ಗೆದ್ದಂತಿರುವೆ ನಾ ಸೋತು ಕೂಡ ನಾ....!!ನೇನಪು ಕೂಡ ಬರಿದಾಗಿದೆ, ಮರೆವು ಕೂಡ ನವಿರಾಗಿದೆ, ನೆನಪು-ಮರೆವಿನಾಗೆ ಇರುವೆ ನಾ ನೆನಪು-ಮರೆವಿನಾಗೆ ನಾ...!!

ಕೇಳಿಸ್ತಿದೆಯಾ..?

ಇವತ್ತಿಗೆ ಸರಿಯಾಗಿ ಒಂದ್ ವರ್ಷ ಕಣೇ...ನೀ ನನ್ "ಹೃದಯದ ಮನೆ" ತೊರೆದು...ಆದರೆ, ಮನೇನ ಇನ್ನೂ ಖಾಲಿ ಮಾಡಿಲ್ಲ ನೀನು.. ನೋಡು..ನೆನಪುಗಳ ಚಾದರನ ಹಾಗೇ ಬಿಟ್ಟಿದ್ದೀಯ...ಪರ್ವಾಗಿಲ್ಲ ..ಈ ಸಲದ ಚಳಿಗಾಲಕ್ಕೆ ಹೊದಿಕೆಯಾಗಿರುತ್ತೆ...ಮತ್ತೆ, ಆ ಕನಸುಗಳ ಚಿಕ್ಕ ಮೂಟೇನ ಮರೆತಿದ್ದೀಯ..?.ಸರಿ, ಮಲಗೋಕೆ ತಲೆದಿಂಬಾಗಿರುತ್ತೆ ...ನಿಟ್ಟುಸಿರ ಧೂಳು ಕೂಡ ಇದೆ.. ಇರಲಿ ಬಿಡು...ಆದರೆ.... ಅಲ್ನೋಡು... ಆ ಮೂಲೇಲಿ ..ಅನಾಥ ಹೆಣ ..!! ............ಅದು "ಪ್ರೀತೀ"ದು..ನಮ್ಮಿಬ್ಬರ "ಪ್ರೀತಿ"ಯ ಹೆಣ..ನೀನೇ ಸಾಯಿಸಿದ್ದು..ಅವತ್ತಿಂದ ಅಲ್ಲೇ ಒಂಟಿಯಾಗಿ ಬಿದ್ಕೊಂಡಿದೆ ಕಣೇ...ನನ್ನೊಬ್ನಿಂದಾನೇ ಆಗೋಲ್ಲ...ನೀನೂ ಒಂಚೂರು ಹೆಲ್ಪ್ ಮಾಡೇ.. ಹೆಣವಾಗಿರೋ ಆ "ಪ್ರೀತಿ"ನ ದೂರ,ಎಲ್ಲಾದ್ರೂ ದೂರದಲ್ಲಿ ಹಸನಾದ ತಂಪು ಮಣ್ಣಲ್ಲಿ, ಆಳವಾಗಿ ಹೂತು ಬಿಡೋಣ.. ...ಆಮೇಲೆ? .... ನನ್ ಪಾಡು ನಂಗೇ, ನನ್ ಹಾಡೂ ನಂಗೇ .....ಹೃದಯ ಪೂರ್ತಿ ಖಾಲಿ ಮಾಡಿ...ಯಾರಾದ್ರೂ Permanent ಆಗಿ ಇರೋರ್ಗೆ ಮನೆ ಕೊಟ್ಬಿಡ್ತಿನಿ... ಸರಿನಾ..... ...............ಹಾ......... ...ಮತ್ತೆ ಅದೇ ವನ್ ಲೈನ್ ರಾಗ ನೆನೆಸ್ತಿದ್ದೆ ... ಕಿಶೋರ್ ದಾ ಹಾಡಿರೋ "ಪ್ಯಾರ್ ಮಾಂಗಾ ಹೈ ತುಮ್ಹಿ ಸೆ..ನ ಇನಕಾರ್ ಕರೊ...." ರಾಗದಲ್ಲಿ... "ಪ್ರೀತಿ ಸತ್ತಿದೆ ನಿನ್ನಿಂದ,...ಪ್ರೀತಿನ ಹೂತು ಬಿಡು...ಪ್ರೀತಿ ಸೋತಿದೆ ನಿನ್ನಿಂದ.. ನೀನೂ ಸೋತು ಬಿಡು..."ರಾಗ ಅದೇ ಭಾವ ಬೇರೆ ...ಕೇಳಿಸ್ತಿದೆಯಾ..?

ಇಂತೀ,ನಿನ್ನವನಲ್ಲ

ಕಾಡದಿರು ಹೀಗೆ...

ಕಾಡದಿರು ಹೀಗೆ...ಮಾರಾಯಾ,ಇಲ್ಲಿ ಹುಚ್ಚು ಮಳೆ! ಊಹುಂ, ಹುಚ್ಚು ಮಳೆಗಲ್ಲ; ಮೋಡಗಳಿಗೆ. ಅದೇನು ಸಡಗರ ಮಾರಾಯ ಅವಕ್ಕೆ... ಭುವಿ ಮಳೆಗಾಗಿ ಕಾಯುತ್ತಿರುವುದನ್ನು ನೋಡಿ ಅವಕ್ಕೆ ಅಳುವೇ ಬಂದುಬಿಡುತ್ತದೆ. ಬಿಟ್ಟು ಬಿಟ್ಟು ಬಿಕ್ಕುತ್ತವೆ.. ಖಾಲಿಯಾಯ್ತು, ಇನ್ನೇನು ಹೊಳವಾಯ್ತು ಎನ್ನುವಷ್ಟರಲ್ಲಿ ಮತ್ತೆ ಮೋಡದ ಕಣ್ಣಕೊಳದಲ್ಲಿ ಮಡುವು ಕಟ್ಟಿ ಭೂಮಿ ಮೇಲೆ ಭಾಷ್ಪಧಾರೆ. ಬಿರುಬಿಸಿಲಿನಿಂದ ಕಾದು ಕಾದು ಬಳಲಿ, ಹನಿ ನೀರಿಗಾಗಿ ಕಾದು ಕಾದು ಬೇಸತ್ತಿದ್ದ ಭುವಿಗೆ ಧೋಧೋ ಮಳೆಯ ಸಾಂಥ್ವನ.ಆ ಭುವಿಯಂತೆಯೇ ಕಾದಿದೆ ನನ್ನ ಮೈ. ಎರಡು ದಿನಗಳಿಂದ ಜೋರು ಜ್ವರ ನನಗೆ. ಚಿಟ್ಟೆ ಚಿತ್ತಾರವಿರುವ ಚಾದರ ಹೊದ್ದು ಮಲಗಿಬಿಟ್ಟಿದ್ದೇನೆ. ಈ ಪರಿ ಮಳೆಯಲ್ಲಿ ತೊಯ್ದರೆ ಮತ್ತಿನ್ನೇನಾಗೊತ್ತೆ ಹೇಳು? ಆದರೆ ಅಷ್ಟು ಚಂದದ ಮಳೆ ಬೀಳುತ್ತಿರುವಾಗ ತೋಯದೇ ಇರಲಿ ಹೇಗೆ ಹೇಳು? ನಿನ್ನ ನೆನಪೆಲ್ಲಾ ತೊಳೆದು ಹೋಗಲಿ ಎಂದುಕೊಂಡು ತೊಯ್ದೇ ತೊಯ್ದೆ. ಆದರೆ ಏನು ಮಾಡಿದರೂ ಬಿಟ್ಟು ಹೋಗುತ್ತಿಲ್ಲ ಅದು...ಹಾಸ್ಟೆಲ್ಲಿನ ನನ್ನ ಕೋಣೆಯಲ್ಲಿ ಏಕಾಂಗಿ ಮಲಗಿದ್ದೇನೆ. ಮಂಚ ನಾನು ಹೊರಳಿದಾಗ ಮಾತ್ರ ಕಿರುಗುಡುತ್ತದೆ. ಕಿಟಕಿಯಲ್ಲಿ ಮಳೆ ಕಾಣಿಸುತ್ತಿದೆ... ಅದೆಲ್ಲಿಗೇಂತ ಓಡಿ ಹೋದೆಯೋ ಮಾರಾಯಾ? ಯಾವ ದೇಶ ಅದು? ಹೇಗೆ ಹೋದೆ? ಯಾಕೆ ಹೋದೆ? ಯಾವ ಮೋಹನ ಮುರಳಿ ಕರೆಯಿತು ಅಂತ ಹೋದೆ? ನೀನು ಹೋಗುವುದೇನೋ ಹೋದೆ, ಆದರೆ ನಿನ್ನ ನೆನಪನ್ನೇಕೆ ಉಳಿಸಿ ಹೋದೆ?ಏನೆಂದರೆ ಏನೂ ಗೊತ್ತಿರಲಿಲ್ಲ ನನಗೆ ಈ ರಾಜಧಾನಿಗೆ ಬಂದ ಮೊದಲಿಗೆ. ಇಲ್ಲಿಯ ತಳುಕು-ಬಳುಕು ಜೀವನ ಭಯ ಹುಟ್ಟಿಸಿತ್ತು. ಕಷ್ಟ ಪಟ್ಟು ಹುಡುಕಿ ಹಿಡಿದ ಕೆಲಸ.. ಬಾಸ್ ಬೈದರೆ ಕಣ್ಣಲ್ಲಿ ನೀರೇ ಬಂದುಬಿಡುತ್ತಿತ್ತು.. ಯಾವ ಸಿಗ್ನಲ್ಲಿನಲ್ಲಿ ನೋಡಿದರೂ ಬೈಕಿನಲ್ಲಿ ಹುಡುಗನ ಬೆನ್ನಿಗಂಟಿ ಕುಳಿತ ಹುಡುಗಿ. ಪಾರ್ಕುಗಳು, ಕಾಫೀ ಡೇಗಳು, ಶಾಪಿಂಗ್ ಮಾಲ್‍ಗಳು... ಎಲ್ಲಿ ನೋಡಿದರೂ ಜೋಡಿಗಳೋ ಜೋಡಿಗಳು. ನನಗೆ ನಾನು ತುಂಬಾ ಒಂಟಿ ಎನ್ನಿಸತೊಡಗಿತ್ತು. ಆಗಲೇ ನಾನು ಇಂಟರ್ನೆಟ್ಟಿಗೆ ಅಡಿಕ್ಟ್ ಆಗಿದ್ದು.ಮೊದಲಿನಿಂದಲೂ ನಾನು ಪುಸ್ತಕದ ಹುಳು. ಸಾಹಿತ್ಯ ಎಂದರೆ ಹುಚ್ಚು. ನೀನು ಯಾವುದೋ ಕಮ್ಯೂನಿಟಿಯಿಂದ ಪರಿಚಯವಾದೆ. ನಿನ್ನ ಪುಟ್ಟ ಪುಟ್ಟ ಕವಿತೆಗಳನ್ನು, ಭಾವಲಹರಿಗಳನ್ನು, ಚಿಕ್ಕ-ಚೊಕ್ಕ ಕತೆಗಳನ್ನೂ ನನಗೆ ಕಳುಹಿಸುತ್ತಿದ್ದೆ. ಓದುತ್ತಿದ್ದರೆ ಏನೋ ಖುಷಿಯಾಗುತ್ತಿತ್ತು. ನೀನು ಯಾರಿಗಾಗಿ ಬರೆಯುತ್ತಿದ್ದೆಯೋ ಏನೋ? ಆದರೆ ನನಗೆ ನಿನ್ನ ಪ್ರೇಮಪತ್ರಗಳಲ್ಲಿ ನಾನೇ ಕಾಣಿಸುತ್ತಿದ್ದೆ. ಅವನ್ನು ನೀನು ನನಗಾಗಿಯೇ ಬರೆದಿದ್ದೀಯ ಎಂದುಕೊಳ್ಳುತ್ತಿದ್ದೆ. ನನಗೆ ಗೊತ್ತೇ ಆಗದ ಹಾಗೆ ನನ್ನ ಮನಸು ನಿನ್ನನ್ನು ಇಷ್ಟಪಡಲಿಕ್ಕೆ ಶುರು ಮಾಡಿಬಿಟ್ಟಿತ್ತು.

ನನ್ನ ಮೊಬೈಲ್ ನಂಬರನ್ನು ನೀನು ಪಡೆದುಕೊಂಡಮೇಲಂತೂ ಕಂತೆ ಕಂತೆ ಎಸ್ಸೆಮ್ಮೆಸ್ಸುಗಳನ್ನು ಕಳುಹಿಸುತ್ತಿದ್ದೆ. ಆ ಮೆಸೇಜುಗಳಲ್ಲಿರುತ್ತಿದ್ದ ದ್ವಂದ್ವಾರ್ಥಗಳು ನನ್ನನ್ನು ಪೂರ್ತಿ ಕನ್‍ಫ್ಯೂಸ್ ಮಾಡುತ್ತಿದ್ದವು. ನನಗೇನು ಗೊತ್ತಿತ್ತು ನಿನಗೆ ನನ್ನಂತಹ ಸಾವಿರಾರು ಗೆಳತಿಯರು ಅಂತ? ಒಬ್ಬ ಹುಡುಗ ಒಬ್ಬ ಹುಡುಗಿಯನ್ನು ಇಷ್ಟೊಂದು ಹಚ್ಚಿಕೊಂಡಿದ್ದಾನೆಂದರೆ ಅದು ಪ್ರೀತಿಯೇ ಸರಿ ಎಂದುಕೊಂಡಿದ್ದ ಮೂರ್ಖೆ ನಾನು. ಅವತ್ತು ನಾವು ಕುಳಿತಿದ್ದ ಹೋಟೆಲ್ಲಿನ ನಾಲ್ಕನೇ ಬೆಂಚಿನ ಮೇಲಿದ್ದ ಪುಟ್ಟ ಹೂದಾನಿಯಲ್ಲಿ ಗುಲಾಬಿಯೇ ಇತ್ತು. ಅಂದು ನನ್ನ ಕಣ್ಣ ಆಸೆಯನ್ನು ನಿನ್ನ ಬಳಿ ಹೇಳಿಕೊಂಡುಬಿಟ್ಟೆ. ಅದೇ ಆ ಗುಲಾಬಿಯನ್ನು ಹಾಗೇ ತೆಗೆದು ನನ್ನ ಕೈಗಿತ್ತು 'ಐ ಟೂ' ಎನ್ನುತ್ತೀಯೇನೋ ಅಂದುಕೊಂಡಿದ್ದೆ. ಆದರೆ ನೀನು ನನ್ನ ಪ್ರಪೋಸಲ್ಲನ್ನು ಖಡಾಖಂಡಿತವಾಗಿ ನಿರಾಕರಿಸಿಬಿಟ್ಟೆ. ಹೂದಾನಿ ಒಡೆದು ಹೋದಂತಾಯಿತು. ನೀನು ನನ್ನನ್ನು ಪ್ರೀತಿಸುತ್ತಿರಲಿಲ್ಲ ಎಂದರೆ ನಂಬಲಿಕ್ಕೇ ಸಾಧ್ಯವಾಗಲಿಲ್ಲ ನನಗೆ... ಆದರೆ ಯಾವತ್ತು ನಿನ್ನ ಬೈಕಿನ ಹಿಂದೆ ಮತ್ಯಾರೋ ಹುಡುಗಿಯನ್ನು ನೋಡಿದೆನೋ, ಅವತ್ತು ನೀನು ಮತ್ತೆ ನನ್ನೆಡೆಗೆ ಬಂದೀಯೆಂಬ ಆಸೆಯನ್ನು ಕೈಬಿಟ್ಟೆ. ಅದ್ಯಾರೋ ನನ್ನಂಥವಳೇ ನತದೃಷ್ಟೆಯಿರಬೇಕೆಂದುಕೊಂಡೆ. ಊಹುಂ, ನಾನಲ್ಲ ನತದೃಷ್ಟೆ; ನೀನು ನತದೃಷ್ಟ. ನನ್ನಂತಹ ಹುಡುಗಿಯ ಪ್ರೀತಿಯನ್ನು ನಿರಾಕರಿಸಿದ ನೀನು ನತದೃಷ್ಟ... ಒಡೆದ ಮನಸು ಬೈದುಕೊಳ್ಳುತ್ತಿತ್ತು.ಆದರೆ ಮನಸು ಅಷ್ಟೇ ಬೇಗ ಚೇತರಿಸಿಕೊಂಡುಬಿಟ್ಟಿತು ನೋಡು! ಈಗ ನನಗೂ ಹೊಸ ಹುಡುಗ ಸಿಕ್ಕಿದ್ದಾನೆ. ಈ ಹುಡುಗ ನನ್ನನ್ನು ಎಷ್ಟು ಪ್ರೀತಿಸುತ್ತಾನೆ ಅಂತೀಯಾ..? ಅವನ ಪ್ರೀತಿಕೊಳದಲ್ಲಿ ಈಜುವಾಗ ನಾನು ಕೆಲವೊಮ್ಮೆ ಕಳೆದೇ ಹೋಗುತ್ತೇನೆ ಅಕ್ಷರಶಃ ...ಅಷ್ಟು ಆಳ ಅವನ ಪ್ರೀತಿ! ನಿನಗೆ ಈ ಪತ್ರ ಬರೆಯುತ್ತಿರುವುದು ಹೊಟ್ಟೆ ಉರಿಸುವುದಕ್ಕಲ್ಲ. ಆದರೆ, ಇಷ್ಟೆಲ್ಲಾ ಪ್ರೀತಿ ಮಾಡುವ ಹುಡುಗನಿದ್ದೂ ನೀನು ಆಗಾಗ ನೆನಪಾಗಿ ಬಂದು ಕಾಡುತ್ತೀಯಲ್ಲಾ, ಅದು ಯಾಕೆ ಅಂತ ಕೇಳುವುದಕ್ಕೆ.. ಅದ್ಯಾವುದೋ ದೇಶದಲ್ಲಿದ್ದೀಯ ನೀನೀಗ... ಇಲ್ಲಿ ಹಗಲಾದರೆ ಅಲ್ಲಿ ರಾತ್ರಿ... ನನ್ನ ಆಫೀಸ್ ಸಮಯದಲ್ಲಿ ನಿನ್ನ ಮೆಸೆಂಜರಿನ ಸ್ಟೇಟಸ್ 'ಸ್ಲೀಪಿಂಗ್!'.. ಆದರೂ ಆ ಕೆಂಪು ಗುಂಡಿಯನ್ನು ಕಳ್ಳಕಣ್ಣು ನೋಡುವುದು ಬಿಡುವುದಿಲ್ಲ.. ಯಾಕೆ ಹೀಗೆ? ಹಾಸ್ಟೆಲ್ಲಿನ ಈ ಕೋಣೆಯಲ್ಲಿ ಯಾರೆಂದರೆ ಯಾರೂ ಇಲ್ಲ. ಹೊರಗೆ ಮಳೆ. ಮಳೆ ನೋಡುತ್ತಿದ್ದರೆ ನನಗೆ ಮತ್ತೆ ಹುಚ್ಚು ಹೆಚ್ಚಾಗುತ್ತದೆ. ನಾನು ಬೆಡ್‍ಶೀಟಿನಿಂದ ಮುಖವನ್ನು ಮುಚ್ಚಿಕೊಳ್ಳುತ್ತೇನೆ... ಗಟ್ಟಿ ಕಣ್ಣು ಮುಚ್ಚಿಕೊಳ್ಳುತ್ತೇನೆ... ಹೊರಗಿನಿಂದ ನನ್ನ ಹೊಸ ಗೆಳೆಯ ಬಂದು ತಬ್ಬಿಕೊಂಡಂತೆ ಅನಿಸುತ್ತದೆ... ಬೆಡ್‍ಶೀಟ್ ಕಿತ್ತೊಗೆದು ಎದ್ದು ಕೂರುತ್ತೇನೆ... ಏನೂ ಇಲ್ಲ.. ಎದಿರುಗಡೆಯ ಗೋಡೆಯಲ್ಲಿ ನಿನ್ನದೇ ಚಿತ್ರ ಮೂಡಿಬರುತ್ತದೆ... ನೀನು ಹಲ್ಕಾ ನಗೆ ನಗುತ್ತೀಯ...

ಏಯ್, ಯಾಕೋ ಹೀಗೆ ಕಾಡ್ತೀಯಾ? ನನ್ನ ಕನಸುಗಳ ಜೊತೆ ಆಗ ಅಷ್ಟೆಲ್ಲಾ ಆಡಿದ್ದು ಸಾಕಾಗಲಿಲ್ಲವೇನೋ? ನಿನ್ನ ಹೊಸ ಗೆಳತಿಯರಿಂದ ನೀನು ಬಯಸಿದ್ದು ಸಿಗುತ್ತಿಲ್ಲವೇನೋ? ಯಾವ ದೇಶಕ್ಕೆ ಹೋದರೂ ಬಿಡದ ಇಲ್ಲಿಯ ಮೋಹ ನಿನ್ನ ಮನಸನ್ನು ವಿಕೃತಗೊಳಿಸಿದೆಯೇನೋ? ಹೇಳೋ... ಏಕೆ ಹೀಗೆ ನನ್ನ ಹಿಂದೆಯೇ ಸುತ್ತುತ್ತಿದ್ದೀಯಾ ಇನ್ನೂ? ಹೇಳು, ಕಾರಣ ಕೊಡು... ನನ್ನ ಹೊಸ ಹುಡುಗನಿಗೆ ಈ ವಿಷಯ ಗೊತ್ತಾದರೆ ನಿನ್ನನ್ನು ಕೊಂದುಬಿಟ್ಟಾನು... ಹೇಳಿದ್ದೀನಿ, ಸುಮ್ಮನಿದ್ದುಬಿಡು... ಬದುಕಿಕೊಂಡುಬಿಡು... ಹೊರಗೆ ಮಳೆ ಹೊಳವಾಗುತ್ತಿದೆ... ಹೊರಡು... ಹೊರಟುಹೋಗು ಇಲ್ಲಿಂದ... ನನ್ನ ಮನದ ಮಂದಿರದಿಂದ ಮರೆಯಾಗಿ ಹೋಗು...ನೋ ಮೋರ್ ಯುವರ್ಸ್,

ಪ್ರಿಯೆ ನಿನ್ನ ಏನಂಥ ಕರೆಯಲೇ

ಅಮಿ ಅಲ್ಲ ಚಿನ್ನಾ ಅಲ್ಲ ಪ್ರಿಯೆ ನಿನ್ನ ಏನಂಥ ಕರೆಯಲೇ? ಜಗತ್ತಿನ ಎಲ್ಲ ಹೆಸರು ಸೇರಿಸಿ ಅದರಲ್ಲಿ ಒಂದು ಅಮೂಲ್ಯವಾದ ಹೆಸರನ್ನ ಆಯ್ಕೆ ಮಾಡಿ ಕೊಳ್ಳಲು ಆಸೆ ಕಣೆ . ಇನ್ನೂ ನಿನ್ನ ಆಪ್ತ ಗೆಳೆಯನಂತೆ ನಾಟಕ ಆಡುತ್ತಲೇ ಇದ್ದೀನಿ ನನಗೂ ಸಾಕಾಗಿ ಹೋಗಿದೆ ಕಣೆ .ನಾನು ಮನುಷ್ಯ ತಾನೆ ನನಗೂ ನೋವನ್ನು ಸಹಿಸೋ ಒಂದು ರೇಖೆ ಇರುತ್ತೆ ಅದನ್ನ ದಾಟಿ ಬಂದ ಮೇಲೂ ಹೇಗೆ ತಾನೆ ಸಹಿಸಲಿ ಹೇಳು? ಆದರೂ ಈ ನೋವು ಕೊಟ್ತಷ್ಟು ಯಾತನೆಯಲ್ಲಿ ಏನೋ ಸುಖ ಈ ನೋವು ಕೊಡೋ ಸಂಕಟದಲ್ಲಿ ಏನೋ ಅಹ್ಲಾದತೆ ಯಾಕೋ ಗೊತಿಲ್ಲ ಅನುಭವಿಸಿದಷ್ಟು ಸಾಲದು. ಈ ಪ್ರೀತಿನೇ ಹಾಗೆ ಯಾವಾಗ ಎಲ್ಲಿ ಯಾರ ಮೇಲೆ ಯಾಕಾಗಿ ಹುಟ್ಟುತದೆ ಅಂತ ಗೊತ್ತಾಗೋಲ್ಲ ನನ್ನದು ಹಾಗೆ ನೇ ನಿನ್ನನ್ಣ ಯಾಕೆ ಪ್ರೀತಿಸ್ಥಿದ್ದೀನಿ ಅಂತ ನನಗೆ ಗೊತಿಲ್ಲ ದಯವಿಟ್ಟು ಯಾವತ್ತು ನಿನ್ನ ನಾನು ಯಾಕೆ ಪ್ರೀತಿಸ್ಥಿದ್ದೀನಿ ಅಂತ ಕೇಳಬೇಡ ಕಣೆ ನನ್ನಲ್ಲಿ ನಿಜಕ್ಕೂ ಉತ್ತರ ಇಲ್ಲ. ಈಗ ನಾನು ಇಷ್ಟು ದೂರದ ದೇಶದಲ್ಲಿ ಇದ್ದರೂ ,ನಿನ್ನ ಮುಖಾವ ಇನ್ನೂ ನೋಡದಿದ್ದರು ಯಾಕೋ ಆ ಪ್ರೀತಿಯ ತೀವ್ರತೆ ಕಮ್ಮಿ ಆಗಿಲ್ಲ ನಿಜವಾದ ಪ್ರೀತಿ ಅಂದರೆ ಇದೆ ಏನೋ? ಇನ್ನೂ ನಾವು ಶಾಲೆಯಲ್ಲಿ ಕಳೆದ ಆ ರಸ ನಿಮಿಷಗಳು ಆ ಸವಿ ನೆನಪುಗಳು ನನ್ನ ಮನದಂಗಳದಿ ಬೀಸುವ ಗಾಳಿಯಂತೆ ಆಗೊಮ್ಮೆ ಈಗೊಮ್ಮೆ ಬೀಸಿ ಮನಕೆ ತಂಪಾದ ಅನುಭೂತಿಯ ಕೊಡುತ್ತಲಿದೆ. ನನಾಗೊತ್ತು ಕಣೆ ಈ ಪತ್ರ ನೋಡಿದ ಕೂಡಲೇ ನಿನ್ನ ಮುಖ ಕೋಪದಿಂದ ಕೆಂಪಗುತ್ತೆ ಅಂತ ಆದರೂ ಇವತ್ತು ನಾನು ಇದನ್ನ ಹೇಳಲೇ ಬೇಕು ಹೇಳದಿದ್ದಾರೆ ಈ ನೋವು ನನ್ನ ಕೊಂದು ಬಿಟ್ಟರೆ ಅನ್ನುವ ಭಯ ನನಗೆ. ನಿನ್ನ ನೋಡಿ ಇಷ್ಟು ವರುಷ ಕಳೆದರು ನಿನ್ನ ಮುಖ ಇನ್ನೂ ನನ್ನ ಮನದ ಕನ್ನಡಿಯಿಂದ ಮಾಸಿಲ್ಲ ನಿನ್ನ ಪ್ರತಿಬಿಂಬ ಅದರಲ್ಲಿ ಇನ್ನೂ ಇದೆ. ಅಂದು ನೀನು ಶಾಲೆಯಲ್ಲಿ ಹಾಡಿದ ಆ ಹಾಡು ಇನ್ನೂ ನನ್ನ ಕಿವಿಯಲ್ಲಿ ಸುತ್ತುತ್ತಲೇ ಇದೆ. ಅಂದು ನೀನು ಕೊಟ್ಟ ಕಥೆ ಪುಸ್ತಕಗಳಲ್ಲಿನ ಕಥೆಗಳು ಈಗಲು ನನ್ನ ಸ್ಮೃತಿಪಟಲ ದಲ್ಲಿ ಅಚ್ಚಳಿಯದೇ ನಿಂದೇವೆ ಈಗಲು ಆ ಕಥೆಗಳನ್ನ ಮನಸಾ ದರೆ ಮೆಲುಕು ಹಾಕುತ್ತಾ ಇರುತ್ತೇನೆ. ಅಂದು ನೀನು ಉಟ್ತಿದ್ಧ ಆ ತಿಳಿ ನೀಲಿ ಬಣ್ಣದ ಲಂಗ ಧಾವಣಿಯಲಿ ಅದೆಷ್ಟು ಸುಂದರವಾಗಿ ಕಾಣುತಿದ್ದೆ. ನಾನು ನಿನ್ನ ನೋಡುತ್ತಲೇ ಅಂದೇ ಪರವಶಣಾಗಿ ಬಿಟ್ಟೆ ಕಣೆ. ನಾವು ಕ್ರಿಕೆಟ್ ಆಡುತಿದ್ದಾಗ ನೀನು ಚಪ್ಪಾಳೆ ತಟ್ಟಿ ಮೇಲೆನಿಂದ ಹಾಗೆಣೆ ನೋಡುತಿದ್ದದ್ದು, ನೀನು ನನ್ನ ನೋಡಿ ಹಾಗೆ ನಗುತಿದದ್ದು ಈಗಲು ಮನದಲ್ಲಿ ಹಾಗೆ ನೇ ಇದೆ. ಒಂದು ಮಾತು ಹೇಳಿದರೆ ಬೇಜಾರು ಪಟ್ಟುಕೋಳೋಲ್ಲ ತಾನೆ ನನಗೆ ಮೊನ್ನೆಯವರೆಗೆ ನಾ ನಿನ್ನ ಪ್ರೀತಿಸುತಿದ್ದೇನೆ ಅಂತ ಗೊತ್ತೇ ಇರಲಿಲ್ಲ ನೀನು ನನ್ನ ಜೊತೆ ಆಡಿದ ನಾಟಕ ನೆನಪಿದೆಯೇ? ನೀನು ಅಂದು ನಾನು ಒಬ್ಬ ಹುಡುಗನನ್ನು ಪ್ರೀತಿಸುತಿದ್ದೇನೆ ಅಂತ ನಂಬಿಸಿದ್ದು ದೊಡ್ಡ ದೊಡ್ಡ ಪ್ರೀತಿಯ ಮಾತುಗಳನ್ನ ಆಡಿ ನನ್ನನ್ನೇ ಮಂಗನ ಹಾಗೆ ಆಡಿಸಿದೆ ಅಲ್ವಾ?

ಅವತ್ತು ಯಾಕೋ ಮಾನಸಿಗೆ ತುಂಬಾ ನೋವೈತು ಕಣೆ ಯಾಕೋ ಗೊತಿಲ್ಲ ಏನೋ ಸಂಕಟ ಮನದಲ್ಲಿ ತುಂಬಿ ಹರಿದಿತ್ತು ಏನೋ ವ್ಯಕ್ತಪಡಿಸಲಾಗದ ಯಾತನೆ ನನ್ನಲ್ಲಿ ಗೂಡು ಮಾಡಿಕೊಂಡು ಬಿಟ್ಟಿತ್ತು. ರಾತ್ರಿಯಾಲಿ ಒಬ್ಬನೇ ಇರುವ ಕಂಬನಿ ಸುರಿಸಿದ್ದೆ ಕಣೆ ನನಗೆ ಅಳುವುದೆಂದರೆ ಏನಂತೇಲೆ ಗೊತಿಲ್ಲ ಆದರೆ ಮೊನ್ನೆ ತುಂಬಾ ಅತ್ತೆ ಅತ್ತು ಅತ್ತು ನನ್ನ ಮನಸನ್ನ ನಾನೇ ಸಮಾಧಾನ ಮಾಡಲು ನೋಡಿಕೊಂಡೆ ಆದ್ರೆ ನಿನಗೆ ನಾನು ಬೆಂಗವಳಾಗಿ ನಿಲ್ಲುವಂತೆ ನಾಟಕ ಆಡುತ್ತಲೇ ಇದ್ದೇ. ಅದನ್ನ ನಾಟಕ ಅಂತ ಹೇಳುವ ಹಾಗೆ ಕೂಡ ಇಲ್ಲ ಯಾಕೋ ನೀನು ಸಂತೋಷವಾಗಿದ್ದಾರೆ ಅಷ್ಟೇ ಸಾಕು ಅಂತ ನನ್ನ ಹೃದಯ ಹೇಳುತಿತ್ಟು ಇನ್ನೂ ಹೇಳುತಿದೆ. ನಾನು ಯಾವತು ಸ್ವಾರ್ತಿ ಅಲ್ಲ ನನ್ನ ಪ್ರೀತಿಯಲ್ಲಿ ಸ್ವಾರ್ಥತೆ ತುಂಬಿಲ್ಲ. ಅದು ಯಾವತ್ತು ನಿನ್ನ ಸಂತೋಷವನ್ನು ಬಯಸುತ್ತೆ ಹೊರತು ದು:ಖವನ್ನು ಅಲ್ಲ..ಆದರೂ ನಿನಗಾಗಿ ಕೊರಗ್ತಾ ಇದ್ದೀನಿ ನಿನ್ನ ಪ್ರೀತಿಗಾಗಿ ಪರಿತಪಿಸ್ತ ಇದ್ದೀನಿ ಏನು ಮಾಡಲಿ ಹೇಳು ನಾನು ನಿಸ್ಸಾಹಯಕ ಈ ವಿಷಯದಲ್ಲಿ.ಆದರೆ ನಿನಗೆ ಎಷ್ಟು ಧನ್ಯವಾದಗಳನ್ನ ಹೇಳಿದರು ಸಾಲದು ನಿನ್ನ ಮೇಲೆ ನನಗೆ ಉಂಟಾದ ಪ್ರೀತಿ ನನ್ನನ್ನು ಕವಿಯನ್ನಾಗಿ ಮಾಡಿತು ಕಣೆ ನಾನೀಗ ಪ್ರೇಮ ಕವಿತೆ ಗಳನ್ನ ಬರೆಯಬಲ್ಲೆ ಎಷ್ಟೇಂದರಷ್ಟು ಬರೆಯಬಲ್ಲೆ ಯಕಾಂದರೆ ನನ್ನಲ್ಲಿ ಇರುವ ಭಾವನೆಗಳಿಗೆ ಮಿತಿಯೇ ಇಲ್ಲ ಕವನ ಬರೆದು ನನ್ನ ಮನಸನ್ನ ನನ್ನ ಹೃದಯವನ್ಣ ನಾನೇ ಸಮಾಧಾನ ಮಾಡುತ್ತಾ ಇರುತ್ತೇನೆ. ಬಹುಶಹ ಇದು ನಾ ಬರೆಯುತ್ತಿರುವ ಕೊನೆಯ ಹಾಗೂ ಅಂತಿಮಾ ಪತ್ರ ನನಗೆ ಇದಕ್ಕೆ ಉತ್ತರ ಕೊಡುತ್ತಿಯ ಅಂತ ನಂಬಿದ್ದೇನೆ. ನಿನಗೆ ನೋವು ಮಾಡಳಿಕ್ಕಾಗಿ ನಾನು ಈ ಪತ್ರ ಬರೆಯುತಿಲ್ಲ ನನ್ನ ಮಾನಸಿನ ಮಾತು ನಿನಗೆ ಇನ್ನ ದಾರು ಮು ಟ್ಟ ಲೀ ಎಂದು ಬರೆಯಿತ್ತಿದೇನೇ. ದಯವಿಟ್ಟು ಇದನ್ನ ಓದಿದ ಮೇಲೆ ನನಗೆ ಬಯ್ಯ ಬೇಡ ನನಗೆ ಅದನ್ನ ಸಹಿಸೋ ಶಕ್ತಿ ಇಲ್ಲ . ನಿನಗೊತ್ತು ನಾನು ನಿನ್ನ ಬೇಕಂತ ಪ್ರೀತಿಸಲಿಲ್ಲ ತನಗೆ ಆ ಪ್ರೀತಿ ಬೆಳೆದು ಹೆಮ್ಮರವಾಗುವ ವರೆಗೂ ನನಗೆ ಗೊತ್ತಗಲೆ ಇಲ್ಲ. ನೀನು ನನ್ನ ಬಾಳ ಸಂಗತಿ ಆದರೂ ಸರಿಯೇ ನನ್ನ ಗೆಳತಿಯಾಗಿ ಆದರೂ ಸರಿಯೇ ನೀ ನನ್ನ ಜೀವನದಿಂದ ದೂರ ಹೋಗಬೇಡ...ಪತ್ರ ಹೇಗೆ ಮುಗಿಸಬೇಕು ಅಂತಾನೆ ನನಗೆ ಗೊತಿಲ್ಲ ಕಣೆ ನನ್ನ ಮಾನಸಿಕ ತೊಳಲಾಟ ಅಷ್ಟಿದೆ ಅದನ್ನ ಅನುಭವಿಸಿದ್ದೀನಿ ಅನುಭವಿಸುತ್ತಾ ಇದ್ದೀನಿ ಮತ್ತೆ ಇರುತ್ತೀನಿ.. ನಿನ್ನ ಉತ್ತರದ ನೀರೀಕ್ಷೆಯಲ್ಲಿ ನಿನ್ನ..... ??

ಮಂಗ ಮಾನವ್....!!!

ಬೆಳಗ್ಗೆ ಎದ್ದು ಕೂತೆನೆಂದರೇ ರಾತ್ರಿ ಕನವರಿಸಿದ ನಿನ್ನ ಮಲ್ಲಿಗೆ ನೆನಪುಗಳ ಸರಮಾಲೆ ಮತ್ತೆ ಮತ್ತೆ ಕಾಡತೊಡಗುತ್ತದೆ ಗೆಳೆಯ. ಮೇಲೇಳಲಾಗದೇ ಮತ್ತೆ ನಿನ್ನ ನೆನಪುಗಳ ರಗ್ಗು ಹೊದ್ದು ಮಲಗಿದರೆ ಮತ್ತೆ ನಿನ್ನ ಬಂಗಾರದ ಬೆರಳ ಕಚಗುಳಿಯಿಟ್ಟಂತಾಗಿ ಮೈತುಂಬಾ ಒಂದು ತೆರನಾದ ಜೀವಂತಿಕೆಯ ಹೂವು ಅರಳುತ್ತವೆ. ಇನ್ನು ಮಲಗಿದ್ದಿಯೇನೆ ಸೊಂಬೇರಿ ಅಂದವಳೇ ಅಮ್ಮ ಬಲವಂತವಾಗಿ ದಿಂಬನ್ನ ಬಿಸಾಕಿದರೇ..ಅಮ್ಮಾ ನಿಧಾನ ನೋವಾಗುತ್ತೆ ಕಣೆ ಅಂದು ತುಟಿ ಕಚ್ಚಿಕೊಳ್ಳುತ್ತೇನೆ..ಅಮ್ಮ ಯಾರಿಗೆ ನೋವಾಗುತ್ತೆ ಅಂತ ಅನುಮಾನದ ಕಣ್ಣುಗಳಲ್ಲಿ ನೋಡಿದರೇ ..ಹೇಗೇ ಹೇಳಲಿ ನಾನು ರಾತ್ರಿ ಪೂರ ತಬ್ಬಿ ಮಲಗುವ ದಿಂಬು ನಿನ್ನ ಪ್ರತಿರೂಪವೆಂದು..!!

ಅನುಮಾನವೇ ಬೇಡ ಬಿಡು ಮೊದಲು ನಿನ್ನ ನೊಡಿದಾಗ ಸಂಪೂರ್ಣವಾಗಿ ನಿನ್ನ ವಶವಾದವಳು ನಾನೆ...ಗಂಡುಬೀರಿ ಅಂದುಕೊಂಡರೂ ಪರವಾಗಿಲ್ಲ ಅಂತ ..ನಿಮ್ಮ ಹೆಸರೇನು ಅಂತ ಕೇಳಿದರೇ ಒಳ್ಳೆ ಹಾವು ತುಳಿದೋನ ತರ ನನ್ನಿಂದ ಮಾರುದ್ದ ದೂರ ಹೋದವನು ನೀನು.ಆದರೂ ನಿನ್ನ ಕಳ್ಳಬುದ್ದಿ ನನಗೆ ಗೊತ್ತಿಲ್ಲವ? ಮಾರನೇ ದಿನ ನಾನು ಕಾಲೇಜಿಗೆ ಬರೋದಕ್ಕಿಂತ ಮುಂಚೇನೆ ನನ್ ಹೆಸರೂ ಮಾನವ್ ನಿಮ್ಮ ಹೆಸರೇನು ಅಂತ ಕೇಳಿ ಹಲ್ಕಿರಿದವನು ನೀನು...ನಿಜ ಹೇಳಲ? ಅವತ್ತು ನನಗೆ ಆದ ಸಂತೊಷ ಆ ಸಂಬ್ರಮವನ್ನ ನೋಡಿ ಆ ದೇವತೆಗಳೂ ಹೊಟ್ಟೆಕಿಚ್ಚು ಪಟ್ಟಿರಬೇಕು ಕಣೊ....ದೇವತೆಗಳ ಮಾತು ಬಿಡು ಬಿಡು ಅವರ ಪಾಡಿಗೆ ಅವರಿರಿರಲಿ..ಆದರೆ ನಿನ್ನ ಜೀವನದಲ್ಲಿ ನಿನ್ನ ಬದುಕಿನಲ್ಲಿ ನನಗೊಂದಿಷ್ಟು ಪಾಲು ಕೊಡದೇ ಇದ್ದರೇ ಅವರೂ ದೇವತೆಗಳೂ ಅಂತ ಹೇಗೆ ಆಗುತ್ತಾರೋ? ಅವರನ್ನ ದೇವತೆಗಳೂ ಅಂತ ಯಾವ ಅರ್ತದಲ್ಲಿ ಕರಿಬೇಕು ಹೇಳೂ ಗುರೂ?

ನೋಡೋ ಅಮ್ಮನಿಗೆ ಅನುಮಾನ ಬಂದುಬಿಟ್ಟಿದೆ.ಮೊನ್ನೆ ಕೇಳ್ತ ಇದ್ಲು ಎನೇ ಇದು ಕೆನ್ನೆ ಮೇಲೆ ಯಾರೊ ಪರಚಿದ ಹಾಗಿದೆ? ಎನ್ ವಿಷ್ಯ ಅಂತ ..ಎನ್ ಇಲ್ಲಮ್ಮ ಮೊನ್ನೆ ಮೀನಾಕ್ಷಿ ಮನೆಗೆ ಹೋಗಿದ್ನಲ್ಲ ಅವರ ಬೆಕ್ಕು ಹೀಗೆ ಮಾಡಿಬಿಡ್ತು..ಆದ್ರೆ ಅದ್ನ ಸುಮ್ನೆ ಬಿದ್ಲಿಲ್ಲಮ್ಮ ನಾನು ಸರಿಯಾಗ್ ಪಾಠ ಕಲ್ಸಿದ್ದಿನಿ ಅಂತ ಮಳ್ಳಿ ತರ ಹೇಳಿದರೆ ಅಮ್ಮ ಆದವಳೂ ಹೇಗಾದರೂ ನಂಬುತ್ತಾಳೋ..ಹೇಗೆ ಹೇಳೋದು 2ಕಾಲಿನ ಬೆಕ್ಕಮ್ಮ ಪರಚಿದ್ದು ಅಂತ?..ಅದಕ್ಕೇ ಹೇಳಿದ್ದು ಹುಡುಗಬುದ್ದಿ ನಿಂದು ಅಂತ ಬಾ ಇವತ್ತು ನಿನಗಿದೆ ಹಬ್ಬ ಮೊನ್ನೆ ಪರಚಿದ್ದು ಬೆಕ್ಕು..ನಾಳೆ ನಿಮ್ಮಮ್ಮ ಕೇಳಬೇಕು "ಎನೋ ಇದು ಯಾವುದೋ ಹುಲಿ ಪರಚಿದ ಹಾಗಿದೆಯಲ್ಲೊ " ಅಂತ ಹಾಗೆ ಮಾಡದೇ ಇದ್ರೆ ನನ್ ಹೆಸರು ಬದಲಿ ಮಾಡು...ಬೇಡ ಕಣೋ ಈ ಹುಚ್ಚಾಟ..ನನಗೆ ದಿಗಿಲಾಗುತ್ತಿದೆ ಎಲ್ಲಿ ನನ್ನಿಂದ ದೂರಾಗುತ್ತಿಯಾ ಅಂತ..ಮನೆಗೆ ಬಾ ಅಮ್ಮ ಹತ್ತಿರ ಮಾತಾಡೂ .ಯಾವತ್ತು ಅಪ್ಪ ಅಮ್ಮನ ಎದುರು ನಿಂತೂ ಮಾತಾಡಲಿಕ್ಕು ಹೆದರುತ್ತಿದ್ದವಳು ನಿನ್ನ ಬುಜಕ್ಕೆ ತಾಗಿಕೊಂಡು "ಪಪ್ಪಾ ಪ್ಲೀಜ್ ಇದೊಂದನ್ನ ನನಗೆ ಕೊಟ್ಟುಬಿಡೀ" ಅಂತ ಕಣ್ಣೀರ ಕೋಡೀ ಹರಿಸಲಿಲ್ಲ ಅಂದರೇ ನಾನು ನಿನ್ನ ಮುದ್ದುಕೋತಿಯೆ ಅಲ್ಲ ಕಣೋ.ಜೀವವಿರುವ ತನಕ ಮರಿಬ್ಯಾಡ ಗೆಳೆಯಾಜೀವದ ಗೆಳತಿ.....ನಾನೆ

ಕಾಡು ಕುದುರೆಯ ಆವೇಗವೇ

ಈಗಷ್ಟೇ ನೀನು ಎದ್ದು ಹೋದೆ. ಮೃದು ಹಾಸಿಗೆಯ ಮೇಲೆ ಮಲಗಿರುವ ನೀಲಿ ಬಣ್ಣದ ಹೂಗಳಿರುವ ಆ ಮೇಲು ಹಾಸಿನ ಮುದುರುಗಳಲ್ಲಿ ನಿನ್ನ ಘಮ.ಬೆಳಗಿನ ನಾಲ್ಕು ಘಂಟೆಗೆ ನೀನು ನನ್ನ ಮಳೆಯಾಗಿ ಸೇರುತ್ತಿದ್ದರೆ ಮೊದಲ ಮಳೆಗೆ ಘಂ ಎನ್ನುವ ಭುವಿಯಂತೆ ನಾನು ಕರಗುತ್ತಿದ್ದೆ.ನೀನು ಮುಗಿಲು ನಾನು ನೆಲನಾನು ಎಳೆವೆ ನೀನು ಮಣಿವೆನಾನು ಕರೆವೆ ನೀನು ಸುರಿವೆ ನಾ ಅಚಲದ ತುಟಿ ಎತ್ತುವೆ ನೀ ಮಳೆಯೊಳು ಮುತ್ತನಿಡುವೆಹೊದಿಕೆಯೋ ಎಂಬಂತೆ ಸುಮ್ಮನೇ ನಿನ್ನ ಮೇಲಿದ್ದವಳಿಗೆ ಕರೆಗಂಟೆಯ ಸದ್ದು ಇಷ್ಟವಾಗಲಿಲ್ಲ. ಆದರೂ ಇಷ್ಟು ಮುಂಜಾನೆ ಬಾಗಿಲು ಬಡಿ ಯುತ್ತಿದ್ದಾರೆಂದರೆ ಯಾವುದೋ ಸೀರಿಯಸ್ ಕೇಸೇ ಬಂದಿರಬೇಕೆಂದು ಓಲ್ಲದ ಮನಸ್ಸಿನಿದ ಬಾಗಿಲು ತೆರೆದರೆ ಕಂಡಿದ್ದು ಕೆಂಡದಂತೆ ಮೈ ಸುಡುತ್ತಿರುವ 8ವರ್ಷದ ಹುಡುಗಿಯ ಜೊತೆ ಚಿಂತೆಗಣ್ಣಿನ ಅವರಪ್ಪ.ನನಗೆ ಗೊತ್ತು ನೀನು ಜಾಣ ಹುಡುಗ ಆ ಹುಡುಗಿಗೆ ಬೇಗ ವಾಸಿಯಾಗುತ್ತೆ.ಬೆಳಗಿನ ಆ ಚಳಿಯಲ್ಲಿ ಮಗುವಿನ ಜೊತೆ ಬಂದ ತಂದೆಗೆ ಕಾಫಿಯ ಅವಶ್ಯಕತೆ ಇದೆ ಅನ್ನಿಸಿ ಹಬೆಯಾಡುವ ಕಾಫಿ ತಂದಿಟ್ಟಾಗ ನಿನ್ನ ಕಣ್ಣುಗಳಲ್ಲಿ ನನ್ನೆಡೆಗಿದ್ದ ಮೆಚ್ಚುಗೆ ನೋಡಿ ಹಿತವಾಯಿತು ಮನಸಿಗೆ.ನಮ್ಮಿಬ್ಬರದು ಅರೆಂಜ್ ಮ್ಯಾರೇಜ್ ಅಂದರೆ ಯಾರು ನಂಬುವುದಿಲ್ಲ...ಏನೆಂದು ಕರೆಯಲಿ ನಿನ್ನ??ಗಂಡ? ಗೆಳೆಯ? ಆತ್ಮಸಖ??ಆಸ್ಪತ್ರೆ ವಾಸನೆ ಅಂದರೆ ವಾಕರಿಸುತ್ತಿದ್ದ ನಾನು ದಿನಾ ಅದೇ ವಾಸನೆಯನ್ನು ಹೊತ್ತು ತರುವ ವೈದ್ಯನನ್ನು ಮದುವೆಯಾದದ್ದು ಹೇಗೆ??ಇದಕ್ಕೆ ಋಣಾನು ಬಂಧ ಎನ್ನುವುದ??ಈಗ ನೀನು ಮಹಡಿ ಮೇಲಿನ ಕೊಣೆಯ ಆರಾಮು ಖುರ್ಚಿಯ ಮೇಲೆ ಕುಳಿತುಕೊಂಡು ಯಾವುದೋ medical journal ಓದುತ್ತಿರುತ್ತೀಯ. ಹಾಗೆ ನೀನು ಓದುವುದನ್ನು ದೂರದಿಂದ ನಿನಗೆ ಗೊತ್ತಾಗದ ಹಾಗೆ ನೋಡುವುದು ನನಗೆ ತುಂಬಾ ಖುಷಿ ಕೊಡುತ್ತೆ.ಸ್ನಾನ ಮಾಡಿ ಬಾ ಹುಡುಗ, ನಿನಗಿಷ್ಟವಾದ ದೋಸೆ ತಿನ್ನುತ್ತಾ ಈ ಪತ್ರ ಓದುವೆಯಂತೆ. ನಿನ್ನನ್ನು ಆಸ್ಪತ್ರೆಗೆ ಕಳುಹಿಸಿ ನಾನು ಬ್ಯಾಂಕಿನ ಕೆಲಸಕ್ಕೆ ಹೊರಡುವೆ. ಸಂಜೆ ಬೇಗ ಬಾ ಕಲಾಕ್ಷೇತ್ರದಲ್ಲಿ ಅಶ್ವತರ ಸಂಗೀತವಂತೆ. ಹೋಗೋಣ..ಅವರ ಭಾವ ಲೀಲೆಯಲ್ಲಿ ಮಿಂದುಬರೋಣನಿನ್ನ ಬೆಳ್ಳಿ

ಹೂವೂಳಗಣ ಮಕರಂದವೇ...

ಏನು ಮಾಡ್ತಿದ್ದೀಯ? ನಂಗೊತ್ತು ಖಂಡಿತ ನೀನು ಓದ್‌ಕೋತಾ ಇಲ್ಲ.ಮೊಬೈಲ್ ನ ಸೈಲೆಂಟ್ ಮೋಡ್ ನಲ್ಲಿಟ್ಟುಕೊಂಡು ನಿಮಿಷಕ್ಕೊಂದು ಸತಿ ನನ್ನ ಮೆಸೇಜ್ ಬಂದಿದೆಯಾ?? ಇಲ್ಲ ಕಾಲೇನಾದ್ರೂ ಮಾಡಿದಾನೋ??... ಅಂತ ನೋಡ್ತಿರ್‍ತೀಯಾ.ನಾನು ಕಾಲ್ ಮಾಡಿದ್ರೆ ನೀನು ಮಾತಾಡಲ್ಲ ಅಂತ ಗೊತ್ತು.ಆದ್ರೂ ನಾನು ಕಾಲ್ ಮಾಡಬೇಕು ಅದನ್ನ ನೋಡಿ ನೀನು ನಗ್ತೀಯಾ. ಅವನು ನನ್ನ ಮಿಸ್ಸ ಮಾಡ್‌ಕೊಳ್ಳುತಿದಾನೆ ಅಂತ ಅಂದುಕೊಳ್ಳುತ್ತೀಯ ಆದ್ರೆ ನೀನೆ ಅಲ್ವೇನೇ ನನ್ನ ಹೆಚ್ಚು ಮಿಸ್ ಮಾಡ್‌ಕೊಳ್ಳುತಿರೋದು?ನಿಜ ಹೇಳಲೆನೇ ನಾನು ನಿನ್ನ ತುಂಬಾ ಇಷ್ಟ ಪಡ್ತೀನಿ ನೀನು ಎಲ್ಲರ ಬಗ್ಗೆ ತೂರಿಸೋ ಕಾಳಜಿ ಮನೆಯವರ ಬಗ್ಗೆ ತೋರಿಸೋ ಗೌರವ ಇಷ್ಟ ಆಗುತ್ತೆ ಒಂದೊಂದು ಸತಿ ಅತೀ ಮಾಡ್ತಳೆ ಅನ್ಸುತ್ತೆ ಆದ್ರೆ ಎಲ್ಲಕ್ಕಿಂತ ಇಷ್ಟ ಆಗೋದು ನಿನ್ನ ಕೊನ್ಫುಸೆಡ್ ಮೈಂಡ್ ಮತ್ತು ಮುಗ್ಧತೆ. ಅವತ್ತು ನಿನ್ನ ಆ ರೆಸ್ಟೋರ ದಲ್ಲಿ ನೂಡಿದಾಗಲೇ ಅರ್ಥ ಮಾಡ್ಕೊಂಡೆ ನಿಂಗೆ ಏನು ಆರ್ಡೆರ್ ಮಾಡ್ಬೇಕು ಅಂತ ಬಿಟ್ರೆ ಇವೆತ್ತೆಲ್ಲಾ ಆರ್ಡೆರ್ ಮಾಡೋಲ್ಲ ಅಂತ ಅದ್ರಲ್ಲೂ ಕೊನ್ಫುಶನ್ನಾ?? ನಿಮಗೆ ಕಷ್ಟ ಆದ್ರೆ ಕೊಡಿ ನಾನೇ ಆರ್ಡೆರ್ ಮಾಡುತ್ತಿನಿ ಅಂದಿದ್ದೆ ತಡ ಹೇಗೆ ತಕ್ಷಣ ಕೊಟ್ಬಿಟ್ತೆ.ನಿನ್ನ ಕಣ್ಣುಗಳಲ್ಲಿ ದೊಡ್ಡ ರಿಲೀಫ್ ನನ್ನ ಕಡೆಗೊಂದು ಚಿಕ್ಕ ಧನ್ಯವಾದ.ನಿನಗೆ ಕಣ್ಣಲ್ಲೇ ಮಾತಾದೋಕೆ ಕಲಿಸಿದವರು ಯಾರೇ? ಅಥವಾ ನನಗೆ ಹಂಗೆ ಅನಿಸುತ್ತೋ? ನಿನ್ನ ಮೊದಲನೆ ಸತಿ ನಮ್ಮ ಕಾಲೇಜಿನ ಲಿಫ್ಟ್ ನಲ್ಲಿ ನೂಡಿದಾಗಲೇ ಅಂದುಕೊಂಡೆ ಇವಳ ಕಣ್ಣುಗಳು ಎಷ್ಟು ಚೆನ್ನಾಗಿವೆ ಅಂತ ಜೂನಿ ಯರ್ ಇರ್ಬೇಕು ಅನ್ನಿಸಿತು.ಅಷ್ಟ್ರಲ್ಲಿ ನೀನೆ ಕೇಳ್ದೆ ರೇಖಾ ಎಲ್ಲಿ ಕೆಲಸ ಮಾಡ್ತಾರೆ ಗೊತ್ತಾ?I mean which floor? ಯಾವ ರೇಖಾ ಅಂತ ನಾನು ಕೇಳಿದ್ರೆ "ಅಯ್ಯೂ! ಇದೇ ಕಾಲೇಜಿನ ವಿಧ್ಯಾರ್ಥಿ ಆಗಿ ನಿಮಗೆ ರೇಖಾಕ್ಕ ಗೋತ್ತಿಲ್ವ? ಅವರು ಇಲ್ಲಿ ಲಚ್ಚರರು ಆರು ತಿಂಗಳಾಯಿತು ಸೇರಿ. ಉದ್ದ ಜಡೆ ಇದೆ..." ನಿನ್ನ ಮಾತಿಗೆ ನನಗೆ ನಗು ನಿನ್ನ ಆ ಇನ್ಣೊಸೆನ್ಸೆಗೆ ಮುತ್ತು ಕೊಡೋಣ ಅನ್ನಿಸಿತ್ತು ಯಾವ ಬ್ರಂಚ್‌ನಲ್ಲಿದ್ದಾರೆ ಅಂತನೂ ತಿಳಿದುಕೊಳ್ಳದೇ ಬಂದಿದ್ದೆಯಲ್ಲ ಆಮೇಲೆ ನಿನಗೆ ನಿನ್ನ ರೇಖಾಕ್ಕನನ್ನ ಹುಡುಕಿಕೊಟ್ಟಾಗಲೆ ಸಮಾಧಾನ ಆಗಿದ್ದು.ನೀನು ಲಾ ಸೇರಬೇಕು ಅಂತ ಹೇಗೆ ನಿರ್ಧಾರ ಮಾಡ್ದೇ! ನಿಂದಂತೂ ಅಲ್ಲ ಬಿಡು ಡಿಸೀಶನ್ನು.ನಿಮ್ಮ ಅಪ್ಪನೋ ಅಮ್ಮಾನೋ ಸೇರಿಸಿರಬೇಕು.ಆದರೆ ಮಾತಾಡೋದನ್ನ ನಿನ್ನಿಂದ ಕಲೀಬೇಕು. ನಿಮ್ಮ ಕಣ್ಣಿನ ಕ್ಯಾಮರಾದಲ್ಲಿ ನನ್ನದೊಂದು ಫೋಟೋ ಇರಲಿ, ಅಂದರೆ ರೀಲ್ ಖಾಲಿ ಆಗಿ ತುಂಬಾ ದಿನ ಆಗೊಯ್ತು ಅಂತೀಯ?? ಅಬ್ಚ!ಎಷ್ಟೇ ಜಂಬ ನಿಂಗೆ?? ಆದ್ರೆ ನಾನು ನಿನ್ನ ಪ್ರೀತಿಸುತೀಯ ಅಂತ ಕೇಳೋಲ್ಲ ಏಕೆಂದರೆ ನೀನು ಯಾವತ್ತಿಗೂ ನಿರ್ಧರಿಸಿ ಹೇಳೋಲ್ಲ ಆದ್ರೆ ನಾನು ನಿನ್ನ ಕಡಲಾಳಕ್ಕಿಂತಲೂ ಹೆಚ್ಚಾಗಿ ಪ್ರೀತಿಸುತ್ತೀನಿ ನಿರ್ಧಾರಗಳನೆಲ್ಲ ನನಗೆ ಬಿಟ್ಟುಬಿಡು ನನಗೇನೂ ಭಾರ ಆಗೋಲ್ಲ..ನಾನು ನಿನ್ನನ್ನೇ ಮದುವೆ ಆಗೋದು.. ನಿನ್ನ ಹುಚ್ಚು ಹಿಡಿಸಿಕೊಂಡವ

ಪ್ರೀತಿಯ ಅಪ್ಪು,


ನಿಂಗೆ ಹಿಂಗೆ ಕರಿಯಬಹುದೋ ಇಲ್ವೋ ಗೊತ್ತಿಲ್ಲ ಕಣೋ. ಪ್ರೀತಿಯ ಅಪ್ಪು ಯಾರಿಗೆ ಪ್ರೀತಿಯ ಅಂತಾ ಗೊತ್ತಿಲ್ಲ. ನಿಂಗೆ ಈ letter ನೋಡಿ ಆಶ್ಚರ್ಯವಾಗ್ತೀರಬಹುದು ಅಲ್ವಾ. ಇವಳೇನು ೩ ವರ್ಷದ ನಂತರ ಇದ್ದಕ್ಕಿದ್ದ ಹಾಗೇ letter ಬರೆದಿದ್ದಳಲ್ಲಾ ಅಂತಾ.ನಂಗೂ ಗೊತ್ತಿಲ್ಲಾ ಇವತ್ತು ನಿಂಗೆ ಹೀಗೆ ಯಾಕೇ ಒಂದು letter ಅದು ಮದ್ಯ ರಾತ್ರಿಯಲ್ಲಿ ಬರಿತಿದಿನಿ ಅಂತಾ.
ಅಪ್ಪು ಗೊತ್ತಿಲ್ಲಾ ಕಣೋ ಇವತ್ತು ಬೆಳಗ್ಗೆ ಕಣ್ಣು ಬಿಟ್ಟ ತಕ್ಷಣ ದೇವರು ನೆನಪಾಗೋ ಮೊದಲು ನೀನು ನೆನಪಾಗಿದ್ದೆ.( ಅಂದ್ರೆ ನಿಂಗೆ ಈಗ ಗೊತ್ತಾಗಿರಬಹುದು ನಾನು ನಿನ್ನ ಮರೆತಿದ್ದೀನಿ ಅಂತ) ನಾ ಹೋದಲ್ಲೆಲ್ಲಾ ನಿನ್ನ ನೆನಪು ನನ್ನ ಹಿಂದೆ ಸುತ್ತುತ್ತಿತ್ತು. ಎಲ್ಲೆಂದರಲ್ಲಿ ನೀನನ್ನ ಕೈ ಹಿಡಿದು ಬರುತ್ತಿದ್ದೆ ಕಣೋ.
ಈ ಬೆಂಗಳೂರಿಗೆ ಬಂದ ಹೊಸದರಲ್ಲಿ ನಂಗೆ ನೀನು ಹೀಗೆ ಕಾಡಿಸ್ತಿದ್ದೆ. ಈ ಮಹಾನಗರದಲ್ಲಿ ಎಲ್ಲೆಂದರಲ್ಲಿ ಬರಿ ಜೋಡಿ ಹಕ್ಕಿಗಳನ್ನು ನೋಡಿ ಈ ಒಂಟಿಹಕ್ಕಿ ಚಡಪಡಿಸಿದ್ದು ನಿಜ. ಅದರೆ ಈಗ ಎಲ್ಲವು ಅಭ್ಯಾಸವಾಗಿದೆ. ಎಲ್ಲವೂ ಯಾಂತ್ರಿಕವಾಗಿದೆ.ಬಸ್ಸಲ್ಲಿ ಕುಳಿತಾಗಲು ನೀನೆ ಕಣ್ಮುಂದೆ, ಯಾಕೋ ಅಪ್ಪು ಒಂದು ಕ್ಷಣ ಕಣ್ಣಹನಿಯಾಗಿ ಕೆಳಗಿಳಿದೆ.ನಿನ್ನ ಪ್ರೀತಿಗೆ ಅದರ ರೀತಿಗೆ ಕಣ್ಣ ಹನಿಗಳೆ ಕಾಣಿಕೆ.ನಾನು ನಿನ್ನ ಬಗ್ಗೆ ಚಿಂತೆ ಮಾಡಿ ಕಣ್ಣೀರು ಹಾಕಬಾರದು ಅಂಥಾ ನೀನು ಯಾವಾಗ ಬಿಟ್ಟು ಹೋದೆಯೋ ಅವತ್ತೆ decide ಮಾಡಿದ್ದೆ. ಆದ್ರು ಇವತ್ತು ತಡೆಯಕೆ ಆಗಲಾರದ ಯಾತನೆ ಅಗಿ ಹೋಯ್ತು.ನನ್ನ ದುಃಖ ಮರೆಯಲು ಏನೆನು ಮಾಡಿಲ್ಲಾ ಹೇಳು.ಒಂದು ಮೀನು ತಂದು ಸಾಕ್ಕೊಂಡೆ ಯಾಕೆ ಗೊತ್ತಾ? ಅದು ಅಲ್ಲಿ ಗ್ಲಾಸಿನ ಸೀಸೆ ಒಳಗೆ ಒಂಟಿಯಾಗಿ ಈಜಾಡುತ್ತಿದ್ದರೆ ನಂಗೂ ಏನೋ ಸಮಾಧಾನ ಈ ಜಗತ್ತಿನಲ್ಲಿ ನಾನೊಬ್ಬಳೆ ಒಂಟಿ ಅಲ್ಲಾ ಅನ್ನೋ. ಸಮಾಧಾನ..
ಆಫೀಸ್ ನಲ್ಲೂ ಎನೂ ಕೆಲಸ ಮಾಡಕು ಮನ್ನಸ್ಸು ಆಕ್ತಾ ಇರಲಿಲ್ಲ. ಪದೇ ಪದೇ ನಿಮ್ಮ ಮನೆ ಫೋನ್ ನಂಬರ್ ಡೈಯಲ್ ಮಾಡ್ತಾ ಇದ್ದೆ. ೪ ವರ್ಷದ ಹಿಂದಿನ ನಂಬರ್ ಇನ್ನು ತಲೆ ಯಲ್ಲಿ ಇದೆ ಯಲ್ಲಾ ಅಂತಾ ನಂಗೆ ಆಶ್ಚರ್ಯ ಆಯ್ತು.ಸಂಜೆ ನಿಜಕ್ಕು ಯಾತನಾಮಯ. ಸಂಗಾತಿ ಬೇಕು ಅನ್ನಿಸೋದೆ ಸಂಜೆ ಮೇಲೆ. ದಣಿದ ಮನಕ್ಕೆ ಒಂದೆರೆಡು ಪ್ರೀತಿ ಮಾತು ಕೇಳಿದರೆ ಅವತ್ತಿನ್ನ ಸುಸ್ತೆಲ್ಲಾ ಮಾಯ.ಹೆಂಗೆ ಅನ್ಕೊಂಡತಾ ನೆಡೆದು ಬರುತ್ತ ಇರುವಾಗಲೇ signal ನಲ್ಲಿ ಆ ಜೋಡಿಹಕ್ಕಿ ಕಣ್ಣಿಗೆ ಬಿತ್ತಲ್ಲ ಅಪ್ಪು. ನಾನು ಯಾವಗಲು ಎನನ್ನ ನೋಡಬಾರದು ಅಂತ ಅನ್ಕೋಡಿದ್ನೋ ಅದೇ ದೃಶ್ಯ. ಅಪ್ಪು ನಿನ್ನೋಟ್ಟಿಗೆ ನಿನ್ನ ಪಕ್ಕದ ಸೀಟ್ ನಲ್ಲಿ ಯಾರೋ ಅದು? ಮನೆಯಲ್ಲಿ ಹುಡುಗಿ ನೋಡಿದಾರಾ? ಛೇ ಛೇ ಇರ್ಲಿಕ್ಕಿಲ್ಲಾ ಮರ್ಯಾದಸ್ಥರ ಮನೆ ಹುಡುಗಿ ಇದ್ದಹಾಗೆ ಇಲ್ಲಾ ಅವಳು. ಮತ್ತೆ ಇಷ್ಟು ಬೇಗ ನೀನು ಅಂತಾ ಒಂದು commitment ಮಾಡ್ಕೋಳ್ಳಲ್ಲಾ ಬಿಡು. ಇನ್ನು ಎಷ್ಟು ಜನ ಹುಡುಗೀರ life ನಲ್ಲಿ ಆಟ ಆಡಬೇಕು, ಎಷ್ಟಲ್ಲಾ flirting ಮಾಡಬೇಕು ಎನ್ ಕತೆ… ಅಲ್ವಾ ಅಪ್ಪು.
ಒಂದೇ ಒಂದು ಸಾರಿ ಹೊರಗೆ ನೋಡಿದ್ರೆ ನಾನು ಕಾಣಿಸ್ತಿದ್ದೆ. ಆದ್ರೆ ನೀನು ಹೊರಗೆ ನೋಡೊ chance ಇರ್ಲೇ ಇಲ್ಲಾ ಬಿಡು. ಒಂದು ಹುಡುಗಿ ನಿನ್ನೊಟ್ಟಿಗೆ ಇದ್ದಾಳೆ ಅಂದ್ರೆ ಅಷ್ಟೋತನಕ ನೀನು ಬೆರೆ ಯಾವ ಹುಡುಗೀರನ್ನು ಕಣ್ಣೆತ್ತೀಯು ನೋಡಲ್ಲಾ ಬಿಡು. ಬಾರಿ ನಿಯತ್ತು ಇರೋ ಮನುಷ್ಯ. ಹುಡುಗೀರನ್ನ ಹೆಂಗೆ ಬುಟ್ಟಿಗೆ ಹಕ್ಕೊಳ್ಳೋದು ಅಂತಾ ನಿಂಗೆ ಚನ್ನಗಿ ಗೊತ್ತು. ಬಾರಿ ಕಲಾವಿದ ನೀನು.ಆದ್ರೆ ಅಪ್ಪು ನಿನ್ನ life ನಲ್ಲಿ ಹಿಂದೆ ಎಷ್ಟೋ ಜನ ಬಂದು ಹೋಗಿರಬಹುದು ಮುಂದೆ ಬರಲು ಬಹುದು ಅದ್ರೆ ನನ್ನಷ್ಟು ನಿಷ್ಕಲ್ಮಶ ಪ್ರೀತಿನಾ ನಿಂಗೆ ಯಾರು ಕೊಡಲ್ಲ. ನಿನ್ನ ಹೆಂಡತಿನೂ ನಾನು ಕೊಟ್ಟಷ್ಟು ಪ್ರೀತಿ, ಆ dedication ಕೊಡಲ್ಲ ಕಣೋ. ಆದ್ರೆ ಹೇಳ್ತೀನಿ ಕೇಳು ನಿಂಗೆ ಪ್ರೀತಿ ಮಾಡಿದ್ನಲ್ಲಾ ಅದರ ಹತ್ತು ಪಟ್ಟು ಜಾಸ್ತಿ ನನ್ನ ಗಂಡನ್ನ ಪ್ರೀತಿಸ್ತಿನಿ ಕಣೋ.ನಂಗೂ ಇತ್ತೀಚಿಗೆ ಒಬ್ಳೆ ಇರಕೆ ಆಕ್ತಾ ಇಲ್ಲಾ ಅಪ್ಪು. ನನ್ನ ಕಷ್ಟ ಸುಖ ಹಂಚಿಕ್ಕೊಳ್ಳೊಕೆ ಒಂದು ಜೀವ ಬೇಕು ಅನ್ನಿಸ್ತಿದೆ. ಈ ಸನ್ಯಾಸತ್ವದ ಜೀವನ ಸಾಕಾಗಿದೆ.. ನನ್ನ ಮೀನಿಗೆ ಕೂಡ ಒಂದು ಜೊತೆಗಾರನಾ ತಂದು ಕೊಟ್ಟಿದ್ದೀನಿ.ನಂಗೂ ಒಂದು ಜೊತೆನಾ ಹುಡ್ಕಾ ಇದಿನಿ. ಸರಿ ಇಷ್ಟು ಸಾಕು ಅನ್ಕೋತೀನಿ. ಮೊದ್ಲೆ ಹೇಳ್ತೀಯಾ ತುಂಬಾ ಚೊರೆ ಮಾಡ್ತಿನಿ ಅಂತಾ.
ಸರಿ ಆರೋಗ್ಯ ಚನ್ನಾಗಿ ನೋಡ್ಕೋ. ತುಂಬಾ smoke ಮಾಡಬೇಡ. drinks ಕೂಡಾ ಅಷ್ಟೆ limit ನಲ್ಲಿ ಇರಲಿ. ok bye take care.

ಪ್ರೀತಿಯ ಗೆಳತಿ,


ಅಂದು ಸಂಜೆಯ ಸೂರ್ಯ ನಮ್ಮಿಬ್ಬರನ್ನೂ ಅದ್ಯಾವುದೋ ವಾತ್ಸಲ್ಯ ತುಂಬಿದ ಕಣ್ಣುಗಳೊಂದಿಗೆ ನೋಡುತ್ತಾ ಕತ್ತಲೆಯ ಮನೆಗೆ ಹೋಗುತ್ತಲಿದ್ದ. ಆಗ ತಾನೆ ಬಿದ್ದಿದ್ದ ತುಂತುರು ಮಳೆಯಲ್ಲಿ ಇಡೀ ಮೈದಾನದ ಮೈ ನೆಂದು ಅಪೂರ್ವವಾದ ವಾಸನೆ ಹೊಮ್ಮುತ್ತಿತ್ತು. ಆಗ ತತ್ ಕ್ಷಣ ನನಗೆ ನೆನಪಾದದ್ದು ಹಿಂದೊಂದು ದಿನ ಕಾಲೇಜಿನ ಫೀ ಕಟ್ಟುವಾಗ ಕ್ಯೂನಲ್ಲಿ ನಿನ್ನ ಹಿಂದೆ ನಿಂತಾಗ ನನ್ನ ಇಂದ್ರಿಯಗಳನ್ನೆಲ್ಲಾ ಮಂತ್ರ ಮುಗ್ಧವಾಗಿಸಿದ ನಿನ್ನ ಮುಡಿಯಲ್ಲಿನ ಹೂವ ಘಮ.ನಮ್ಮ ನೂರಾರು ಕನಸುಗಳ ಸೌಧವನ್ನು ಕಟ್ಟುವಷ್ಟು ವಿಶಾಲವಾಗಿದ್ದ ಮೈದಾನದ ನಡು ನಡುವೆ ಒಂದಷ್ಟು ಮಂದಿ ಹುಡುಗ ಹುಡುಗಿಯರು ಕೈ ಕೈಹಿಡಿದು ಓಡಾಡುತ್ತಿದ್ದರು. ಕೆಲವರು ಆಡುವ ಆಟದಲ್ಲಿ ಎಲ್ಲವನ್ನೂ ಮರೆತು ತಲ್ಲೀನರಾಗಿದ್ದರು. ಮತ್ತೊಂದಷ್ಟು ಮಂದಿ ಪ್ರಕೃತಿಯ ಆ ರಮಣೀಯ ಸೌಂದರ್ಯವನ್ನು ಎಡಗಾಲಲ್ಲಿ ಒದೆಯುವ ಭಾವದಲ್ಲಿ ಕುಳಿತು ಶುಷ್ಕವಾದ ಆಲ್‍ಜೀಬ್ರಾ, ಕ್ಯಾಲ್ಕುಲಸ್‌ಗಳಲ್ಲಿ ಮುಳುಗಿದ್ದರು. ಪ್ರಕೃತಿ ತಾನಾಗಿ ಕೊಡಮಾಡುವ ಇಂತಹ ಅಸಂಖ್ಯ ಆನಂದದ ಅವಕಾಶಗಳನ್ನು ಮರೆತು ಎಂದೋ ಒಂದು ದಿನ ಸಿಗುವ ಡಿಗ್ರಿಗಾಗಿ ಇವರು ಯಾಕಿಷ್ಟು ಪರದಾಡುತ್ತಾರೋ ಅಂದುಕೊಂಡೆ. ನಿನ್ನ ಪ್ರೀತಿಯು ನನ್ನ ಆವರಿಸಿಕೊಳ್ಳುವ ಮುನ್ನ ನಾನೂ ಹೀಗೇ ಇದ್ದೆನಲ್ಲಾ ಎಂಬುದು ನೆನಪಾಗಿ, ಮನಸ್ಸು ಹಿಂದಕ್ಕೆ ಹಿಂದಕ್ಕೆ ಓಡಲಾರಂಭಿಸಿತು.


ಪ್ರೀತಿ, ಹಾಗಂದರೇನು ಅಂತ ಎಲ್ಲರೂ ಕೇಳ್ತಾರೆ. ಅದೇನು ಅಂತ ಗೊತ್ತಿಲ್ಲದೆ ಎಷ್ಟೋ ಮಂದಿ ಪ್ರೀತಿಸ್ತಾರೆ, ದ್ವೇಷಿಸ್ತಾರೆ, ಒಂದಾಗುತ್ತಾರೆ, ಬೇರೆಯಾಗುತ್ತಾರೆ. ಮನುಷ್ಯನ ಆಸೆ, ಮಹತ್ವಾಕಾಂಕ್ಷೆ, ಆದರ್ಶ, ಸದ್ಗುಣ, ಶಿಸ್ತು, ಆಧ್ಯಾತ್ಮದಂತೆಯೇ ಪ್ರೀತಿಯೂ ಕೂಡ. ಪ್ರೀತಿಗೆ ಆ ಸ್ಥಾನ ಸಾಕು. ಪ್ರೀತಿ ಜೀವನದ ಒಂದು ಭಾಗವಾದರೆ ಸಾಕು. ಪ್ರೀತಿಸುವ ಜೀವಗಳೆರಡು ನಂತರ ಎದ್ದು ಮನೆಗೆ ಹೋಗಿ ಉಣ್ಣಬೇಕು, ದುಡಿಯಬೇಕು. ಪ್ರೀತಿ ಅವಾಸ್ತವ. ಪ್ರೀತಿ ಬೇಜವಾಬ್ದಾರಿತನ. ಪ್ರೀತಿ ಕಪಟ, ಇಲ್ಲದ ಭಾವಗಳನ್ನು ಒಬ್ಬನೇ ವ್ಯಕ್ತಿಯ ಮೇಲೆ ಪ್ರದರ್ಶಿಸುವುದು, ದೇಹದ ಬಯಕೆ, ಹಸಿವುಗಳನ್ನೇ ದೊಡ್ಡ ದೊಡ್ಡ ಪದಗಳ ನೆರಳಲ್ಲಿ ನಿಲ್ಲಿಸಿ ಸುಳ್ಳು ಭಾವನೆಯಲ್ಲಿ ಸಮಯ ಕಳೆಯುವ ಕಪಟತೆ- ಹೀಗೇ ಏನೆಲ್ಲಾ ಮಾತನಾಡುತ್ತಿದ್ದೆ ನಾನು. ನಿನ್ನ ಸನ್ನಿಧಾನದ ಅನುಭೂತಿಯಲ್ಲಿ ಮಿಂದ ತಕ್ಷಣ ನನ್ನ ಮಾತುಗಳೆಲ್ಲಾ ಒಣಗಿದ ಹೂವಿನ ಪಕಳೆಗಳಂತೆ ಎಷ್ಟು ಅನಾಯಾಸವಾಗಿ ಉದುರಿಹೋದವಲ್ಲ! ಮಾತುಗಳ ಸದ್ದೆಲ್ಲಾ ಅಡಗಿ ಹೋಗಿ ಮೌನ ನೆಲೆಯಾಯಿತಲ್ಲ? ಜೀವನವೇ ನಶ್ವರ ಎಂದು ಭಾಷಣ ಮಾಡಿದ ನಂತರ ತೆರೆ-ತೆರೆಯಾಗಿ ಬೀಸುವ ತಂಗಾಳಿಗೆ ಮೆಲುವಾಗಿ ತಲೆದೂಗುವ ಉಪದೇಶಿಯಂತೆ ನನ್ನ ಪಾಡಾಯಿತಲ್ಲ? ಜಗತ್ತನ್ನೇ ಸುಟ್ಟು ಬಿಡುವ ಭೀಕರತೆಯಿಂದ ಅರಚಾಡುವ ಮಗು ಮಗುವಿನ ಮಡಿಲನ್ನು ಸೇರಿದ ಕ್ಷಣ ತನ್ನ ಅಸ್ಥಿತ್ವವನ್ನೇ ಮರೆತು ಒಂದಾಗಿಬಿಡುವಂತೆ ನಾನು ನನ್ನನ್ನೇ ಕಳೆದುಕೊಂಡೆ. ಇದೇನಾ ಪ್ರೀತಿ ಅಂದರೆ?ಪತ್ರ ಮುಗಿದಿಲ್ಲ, …


ಪ್ರಿಯ ಗೆಳತಿ,ಅರ್ಧಕ್ಕೇ ನಿಲ್ಲಿಸಿದ ಪತ್ರವನ್ನು ಬರೆಯಲು ಕೂತಾಗಲೆಲ್ಲಾ ಮನಸ್ಸು ವಿಪರೀತ ಹೋರಾಟಕ್ಕೆ ಬೀಳುತ್ತೆ. ಸಂಜೆಯ ಮಂದ ಬೆಳಕಿನ ಹಿನ್ನೆಲೆಯಲ್ಲಿ ಸುಂದರವಾಗಿ ಕಾಣುವ ಮರಗಳಲ್ಲಿರುವ ಗೂಡು ಸೇರುವ ಪಕ್ಷಿಗಳ ನಿರಾಳತೆಯಲ್ಲಿ ನಿನ್ನ ನೆನಪಾಯಿತು. ಮುಂಗಾರಿನ ಮೊದಲ ಮಳೆ ಹನಿ ಶಾಲೆ ಬಿಟ್ಟ ನಂತರ ಓಡಿ ಬಂದು ತಾಯಿಯ ತೆಕ್ಕೆಗೆ ಬಂದು ಬೀಳುವ ಮಗುವಿನ ಹಾಗೆ ನೆಲದ ಒಡಲನ್ನು ಸೇರುವಾಗ ನೀನು ಬಳಿಯಿರಬೇಕಿತ್ತು. ಭರಿಸಲಾಗದ ದುಃಖವನ್ನು, ಅವಮಾನಗಳನ್ನು ಹೊಟ್ಟೆಯಲ್ಲಿ ತುಂಬಿಕೊಂಡು ಜಗತ್ತಿನ ದುಃಖವನ್ನೇ ಮರೆಸುವಂತೆ ನಗಿಸಿದ ಚಾಪ್ಲಿನ್‍ನ 'ದಿ ಸಿಟಿ ಲೈಟ್ಸ್' ಸಿನೆಮಾ ನೋಡಿ ಭಾವಿಸುತ್ತಿರುವಾಗ ನೀವು ಪಕ್ಕದಲ್ಲಿರಬೇಕಿತ್ತು - ಹೀಗೆ ಎಂದೂ ನನಗೆ ಅನ್ನಿಸಿಯೇ ಇಲ್ಲ. ಅನ್ನಿಸುವುದೇ ಇಲ್ಲ. ಹೀಗಿದ್ದೂ ನಿನಗೆ ಬರೆಯುವ ಪತ್ರದಲ್ಲಿ ಕಾಡಬೇಡ ಕನಸಲಿ ಬಂದು ಎಂದೇಕೆ ಸುಳ್ಳು ಹೇಳಬೇಕು ಅರ್ಥವಾಗುವುದಿಲ್ಲ. ನಾನದೆಷ್ಟೋ ಪ್ರೇಮ ಪತ್ರಗಳನ್ನು ಓದಿದ್ದೇನೆ, ಪ್ರೇಮ ನಿವೇದನೆಯ ಹಾಡುಗಳನ್ನು ಕೇಳಿದ್ದೇನೆ ಆದರೆ ಎಂದೂ 'ಆಕಾಶವೇ ಬೀಳಲಿ ಮೇಲೆ ನಾನೆಂದು ನಿನ್ನವನು…' ಅಂತ ನಿನ್ನ ಕೈಹಿಡಿದು ಹೇಳಬೇಕು ಅನ್ನಿಸೋದಿಲ್ಲ. ಎಷ್ಟೇ ಪ್ರಯತ್ನ ಪಟ್ಟರೂ ನಿನಗೊಂದು ಸಲ ಅಪರಾತ್ರಿಯಲ್ಲಿ ಫೋನ್ ಮಾಡಿ 'ಐ ಲವ್ ಯೂ ಕಣೇ…' ಅಂತ ಹೇಳೋಕಾಗಿಲ್ಲ. ಇಷ್ಟಕ್ಕೂ ನೀನೇಕೆ ನನಗೆ ಇಷ್ಟವಾಗ್ತಿದ್ದೀಯ ಅನ್ನೋದೇ ನನಗಿನ್ನೂ ಗೊತ್ತಾಗಿಲ್ಲ. ಮೊನ್ನೆ ಹಾಗೇ ಲಹರಿ ಹಿಡಿದು ಸುರಿಯುತ್ತಿದ್ದ ಮಳೆಯನ್ನೇ ನೋಡುತ್ತಾ ಒಂದು ವೇಳೆ ನಾನೊಂದು ಮಳೆಯ ಹನಿಯಾಗಿದ್ದರೆ… ಎಂದು ಯೋಚಿಸುತ್ತಿದ್ದೆ. ದೂರದ ಆಗಸದಿಂದ ಗುರಿಯಿಟ್ಟ ಬಾಣದ ಹಾಗೆ ನೆಲೆದೆಡೆಗೆ ಚಿಮ್ಮುತ್ತಾ ಬರುವಾಗ ಸಿಗುವ ಅನುಭವ ಎಂಥದ್ದು, ನನ್ನ ಮನಸ್ಸಿನಲ್ಲಿ ಆಗ ಏನು ನಡೆಯುತ್ತಿರಬಹುದು, ಬಿಟ್ಟು ಬಂದ ಮುಗಿಲಿನ ನೆನಪು ಕಾಡುತ್ತದೆಯೋ ಇಲ್ಲ ಸೇರಬೇಕಾದ ಭುವಿಯ ಒಲವು ನೆನಪಾಗುತ್ತದೆಯೋ ಇಲ್ಲ, ಸುತ್ತ ನನ್ನ ಹಾಗೆಯೇ ಭುವಿಯೆಡೆಗೆ ಬೀಳುವ ಅನೇಕ ಬಿಂದುಗಳೊಂದಿಗೆ ಕುರಿಯ ಮಂದೆಯಲ್ಲೊಂದರಂತೆ ಕಣ್ಣು ಮುಚ್ಚಿಕೊಂಡು ಧುಮುಕಿಬಿಡುತ್ತಿದ್ದೆನೋ… ಕೈಲಿದ್ದ ಕಾಫಿ ಲೋಟ ಸಣ್ಣಗೆ ಹಗುರಾಗುತ್ತಿತ್ತು. ಓದಲೇಬೇಕು ಅಂತ ಲೈಬ್ರರಿಯಿಂದ ತಂದಿಟ್ಟುಕೊಂಡಿದ್ದ ಪುಸ್ತಕ ಮೇಜಿನ ಮೇಲಿತ್ತು. ನನ್ನಾಣೆಗೂ ಆಗ ನಿನ್ನ ನೆನಪಾಯಿತು ಕಣೆ… ಯಾತಕ್ಕೆ ಅಂತೀಯ, ನಾನು ಮಳೆಯ ಹನಿಯಾದರೆ ನೀನೇನಾಗಬೇಕೆಂದಿರುವೆ ಅಂತ ಕೇಳಬೇಕನ್ನ್ಸಿಸಿತು. ಮರುಕ್ಷಣವೇ ನೀನು ನನ್ನ ಈ ಕಲ್ಪನೆಯನ್ನು ಕೇಳಿ ಬೆರಗಾಗಬಹುದು ಅಂದುಕೊಂಡೆ. ಇಲ್ಲ, ಹಿಂದೊಂದು ಬಾರಿ ನಾನು ಹೀಗೆ ಏನೋ ಕೇಳಿದಾಗ ನೀನು 'ಅದೆಲ್ಲ ನನಗೆ ಇಷ್ಟವಿಲ್ಲ, ನೀನು ನನ್ನನ್ನು ಎಷ್ಟು ಪ್ರೀತಿಸ್ತಿಯ ಹೇಳು' ಅಂತ ಗಂಟು ಬಿದ್ದಿದ್ದೆ. ನಾನಾಗ ಸುಳ್ಳುಗಾರನಾಗಲೇ ಬೇಕಾಗಿತ್ತು, ಆದರೂ ಮಾತು ಮರೆಸಿ ಹಾಕಿದ್ದೆ ಅವತ್ತು ನಾನು. ನಿನಗೆ ನನ್ನ ಆಲೋಚನೆಗಳಲ್ಲಿ ಆಸಕ್ತಿಯಿಲ್ಲ ಅನ್ನಿಸಿತು, ಇಂತಹದ್ದನ್ನೆಲ್ಲಾ ಹೇಳಿಕೊಳ್ಳಲು ಆಕೆಯೇ ಸರಿ ಅನ್ನಿಸಿತು. ..ಆಕೆಯೋ, ಪಾದರಸವೇ ಮೈತಾಳಿ ಬಂದ ಹುಡುಗಿ. ನಿನ್ನ ಮೆಚ್ಚಿನ ಗೆಳತಿ. ಹಾಗೆ ನೋಡಿದರೆ ಆಕೆ ಕ್ಲಾಸಿನ ಎಲ್ಲರಿಗೂ ಒಳ್ಳೆಯ ಗೆಳತಿಯೇ. ನಿನ್ನಷ್ಟು ಸುಂದರವಾಗಿಲ್ಲ ಆಕೆ. ಒಂದು ಸಲ ನೋಡಿದರೆ ಮತ್ತೆ ತಿರುಗಿ ನೋಡಬೇಕು ಅಂತ ಅನ್ನಿಸದ ರೂಪು. ಆದರೆ ಅದೊಂದೇ ಕಾರಣಕ್ಕೆ ಆಕೆಯನ್ನು ಇಷ್ಟ ಪಡದೆ ಇರಲು ಆಕೆಯೇನು ಷೋಕೇಸ್‍ನಲ್ಲಿಟ್ಟ ಬೊಂಬೆಯೇ? ಆಕೆಗೆ ನಿನಗಿಂತ ಮೃದುವಾದ ಮನಸ್ಸಿದೆ. ಎಲ್ಲರನ್ನೂ ಒಳಕ್ಕೆಳೆದುಕೊಳ್ಳುವಷ್ಟು ವಿಶಾಲವಾದ ಹೃದಯವಿದೆ. ಎಲ್ಲಕ್ಕಿಂತ ಹೆಚ್ಚಾಗಿ ಆಕೆಯಲ್ಲಿ ನಿನಗಿರುವ ಅಂದದ ಬಗೆಗಿನ ಅಹಂಕಾರವಿಲ್ಲ. ಅದಕ್ಕೇ ನಾನು ನನ್ನ ತಿಕ್ಕಲು-ತಿಕ್ಕಲು ಆಲೋಚನೆಗಳನ್ನು, ದಿನಕ್ಕೊಂದರಂತೆ ಹುಟ್ಟುವ ಆದರೆ ಅಷ್ಟೇ ಬೇಗ ಸಾಯುವ ಅಲ್ಪಾಯುಷಿ ಕನಸುಗಳನ್ನು ಹಂಚಿಕೊಳ್ಳಲು ನಾನು ನಿನಗಿಂತ ಹೆಚ್ಚಾಗಿ ಆಕೆಯನ್ನೇ ಬಯಸುವುದು. ಆಕೆಯೂ ಅಷ್ಟೇ ಒಮ್ಮೆಯೂ, 'ನಿನಗೆಷ್ಟು ಮಂದಿ ಗರ್ಲ್ ಫ್ರೆಂಡ್ಸ್ ಇದ್ದಾರೆ?' , 'ನೀನೇಕೆ ರೆಗ್ಯುಲರ್ ಆಗಿ ಶೇವ್ ಮಾಡೊಲ್ಲ?', 'ಆ ಸ್ಪೆಕ್ಟ್ಸ್ ತೆಗೆದು ಕಾಂಟ್ಯಾಕ್ಟ್ಸ್ ಹಾಕಿಕೊಳ್ಳಬಾರದಾ', 'ರೆಡ್ ಟೀ ಶರ್ಟ್ ನಿನಗೊಪ್ಪಲ್ಲ, ಹಾಕಿಕೊಳ್ಳಬೇಡ' ಅಂತ ಹೇಳೋದೇ ಇಲ್ಲ. ಆಕೆ ಮನಸ್ಸಿನ ಬೇಗುದಿಗಳನ್ನು, ತನ್ನ ರೂಪಿನ ಬಗೆಗಿನ ಕೀಳರಿಮೆಯನ್ನು, ತನ್ನ ಭವಿಷ್ಯದ ಗುರಿಗಳನ್ನು ನನ್ನೊಂದಿಗೆ ಹಂಚಿಕೊಳ್ಳುತ್ತಾಳೆ. ನಾನೂ ಕೂಡ ಅಷ್ಟೇ, ನಿನಗೆ ಹೇಳಿದಂತೆ ಆಕೆಗೆ 'ಅವನೊಂದಿಗೆ ಜಾಸ್ತಿ ಸಲಿಗೆಯಿಂದಿರಬೇಡ', 'ಹೆಚ್ಚು ಹಾಟ್ ಆಗಿ ಡ್ರೆಸ್ ಮಾಡ್ಕೋಬೇಡ' ಅಂತೆಲ್ಲಾ ಹೇಳೋದಿಲ್ಲ. ಇಷ್ಟವಿಲ್ಲದಿದ್ದರೂ ಆಕೆಯ ಡ್ರೆಸ್‌ನ್ನು 'ಓಹ್, ವಂಡರ್‌‍ಫುಲ್' ಅಂತ ಹೊಗಳುವುದಿಲ್ಲ. ಆಕೆಯೊಡನಿರುವಾಗ ಒಂದು ಸಲವೂ ನನ್ನ ಕ್ರಾಪನ್ನು ತೀಡಿಕೊಳ್ಳಬೇಕು, ಇನ್‍ಶರ್ಟ್ ಸರಿ ಮಾಡಿಕೊಳ್ಳಬೇಕು ಅಂತ ಅನ್ನಿಸೋದಿಲ್ಲ ಗೊತ್ತಾ… ಆಕೆಯೊಂದಿಗೆ ಹಾಗೇ ಕತ್ತಲಾಗುವವರೆಗೂ ಕೂತಿರಬೇಕು ಅನ್ನಿಸೋದೇ ಇಲ್ಲ. ಆಕೆಯನ್ನು ಹೊಳೆಯ ದಂಡೆಯಲ್ಲಿ ಏಕಾಂತವಾಗಿ ಭೇಟಿಯಾಗಬೇಕು ಅಂತ ನಾನು ಆಲೋಚಿಸುವುದೇ ಇಲ್ಲ. ನನ್ನಾಣೆಗೂ ಹೇಳ್ತೀನಿ ಆಕೆಯನ್ನು ಪ್ರೀತಿಸುತ್ತಿದ್ದೀನಾ ಅಂತ ಒಂದೇ ಒಂದು ಬಾರಿಯೂ ನಾನು ಕೇಳಿಕೊಂಡಿಲ್ಲ.ನೀನು ಅಸೂಯೆ ಪಡ್ತೀಯ ಅಂತ ಗೊತ್ತು ಆದರೂ ಹೇಳ್ತೀನಿ ಕೇಳು, ನನಗೆ ದಿನವೊಂದರಲ್ಲಿ ನಿನಗಿಂತ ಹೆಚ್ಚು ಬಾರಿ ಅವಳೇ ನೆನಪಾಗ್ತಾಳೆ. ಅವಳಿದ್ದಿದ್ರೆ ಈ ಸಿನೆಮಾ ಬಗ್ಗೆ ಏನಂತ ಮಾತಾಡ್ತಿದ್ದಳು, ಅವಳಿಗೆ ಈ ಪುಸ್ತಕ ಇಷ್ಟವಾಗ್ತಿತ್ತಾ ಅಂತ ಪದೇ ಪದೇ ಕೇಳಿಕೊಳ್ತಿದ್ದೆ. ಹಾಗೆ ಆಕೆಯ ನೆನಪಾದಾಗಲೆಲ್ಲಾ ಮಿಂಚಿನ ಹಿಂದೇ ಬರುವ ಗುಡುಗಿನ ಹಾಗೆ ನಿನ್ನ ನೆನಪಾಗುತ್ತದೆ. ನಿನ್ನ ಕಪಟವಿಲ್ಲದ ನಗೆ ನೆನಪಾಗುತ್ತೆ, ನನಗಾಗಿ ಅಂದು ಮಳೆಯಲ್ಲೇ ನೆನೆದು ಮನೆಯವರೆಗೂ ಬಂದು ಊಟ ಕೊಟ್ಟುಹೋದ ಘಟನೆ ನೆನಪಾಗುತ್ತೆ. ಆದರೆ ಮೊದಲೇ ಹೇಳಿದೆನಲ್ಲಾ, ಇವೆಲ್ಲಾ ಒಂದೇ ಕ್ಷಣ, ಮರುಘಳಿಗೆ ಟಿವಿಯಲ್ಲಿ ನೋಡಿದ ಅಧ್ಭುತವಾದ ಸಿನೆಮಾ, ರಸ್ತೆಯ ತಿರುವಲ್ಲಿ ಸಿಕ್ಕ ಹೈಸ್ಕೂಲ್ ಹುಡುಗಿ, ಆರ್ಕುಟ್ಟಿನಲ್ಲಿ ಅಕಸ್ಮಾತಾಗಿ ಭೇಟಿಯಾದ ಹಳೆಯ ಗೆಳತಿಯ ಚಿತ್ರ ಮನಸ್ಸನ್ನಾವರಿಸುತ್ತೆ. ಹೀಗಿರೋವಾಗ ನಿನ್ನ ನೆನಪು ನನ್ನ ಕಾಡುತಿದೆ ಅಂತ ಹೇಗೆ ಹೇಳಲಿ…ಪತ್ರದ ಅಂತ್ಯ ಇನ್ನೂ ದೂರವಿದೆ,


ಗೆಳತಿ ಸಪ್ತಮಿಗೆ……

ಪ್ರೀತಿ ಅಂದ್ರೆ ನೇ ಹಾಗೆ ಒಂಥರಾ ಫಜೀತಿ, ಯಾಕ್ ಅಂದ್ರೆ ಯಾರಿಗೂ ತಿಳಿಯದು ಅದು ಹುಟ್ಟುವ ರೀತಿ. ಪ್ರೀತಿ ವಿಚಿತ್ರ ವಿಸ್ಮಯ. ಅಂತದೊಂದು ಫಜೀತಿಗೆ ನಾವಿಬ್ಬರೂ ಸಿಲುಕಿದ್ದು ನಮ್ಮೂರ ಜಾತ್ರೇಲಿ, ಅಂದು ರಥ ಸಪ್ತಮಿ. ನೀನು ಆ ದಿನ ಗಿಳಿ ಹಸಿರು ಬಣ್ಣದ ಚೂಡಿ ದಾರ ತೊಟ್ಟು ರಥ ಬೀದಿ ತುಂಬಾ ಲವಲವಿಕೆಯಿಂದ ಓಡಾಡುತಿದ್ದೆ. ಸಿಕ್ಕ ಸಿಕ್ಕ ಬಳೆ ಅಂಗಡಿಗಳಲ್ಲಿ ಬಣ್ಣ ಬಣ್ಣದ ಬಳೆಗಳನ್ನು ಆಲಾಂಕರಿಕ ಸಾಮಗ್ರಿಗಳನ್ನು ಕೊಂಡು ಕೊಳ್ಳುತಿದ್ದೆ. ಅದನ್ನು ನೋಡಿದ ನಾನು ನಿನ್ನನ್ನು ಗೇಲಿ ಮಾಡಿದ್ದೆ. ಸಿಟ್ಟು ಮಾಡಿಕೊಂಡ ನೀನು ನಿನ್ನ ಅಮ್ಮನ ಹತ್ರ ದೂರು ಹೇಳಿ ವಾಪಸು ಬರೋವಾಗ ಜೊತೆಗೆ ನಿನ್ನ ತಮ್ಮನಿದ್ದ, ಬಾಡಿ ಗಾರ್ಡ್ ನಂತೆ. ಆದರೆ ನನ್ನ ಮಿತ್ರ ಪಡೆ ನೋಡಿ ನಿನ್ನ ತಮ್ಮ ಪರಾರಿ.ಆಮೇಲಿನದ್ದು ಬಾರಿ ನಿನ್ನ ಓಡಾಟ, ನಿನಗೆ ನನ್ನ ಬೆನ್ನು ಬಿಡದ ಕಾಟ, ನಕ್ಷತ್ರಿಕನಂತೆ. ಆದರೂ ಪುನಃ ಪುನಃ ನೀನು ತಿರುಗಿ ನನ್ನನ್ನು ನೋಡುತಿದ್ದೆ, ಆಗೆಲ್ಲಾ ನಿನ್ನ್ ಕೆನ್ನೆ ಕೆಂಪಾಗಿರುತಿತ್ತು. ನಾಚಿಕೆಯಿಂದಲೋ ,ಕೋಪದಿಂದಲೋ ಗೊತ್ತಿಲ್ಲ.ಆದರೆ ಮಧ್ಯ ದಲ್ಲಿ ಒಮ್ಮೆ ನನ್ನ ಕಣ್ಣಿಂದ ಮರೆಯಾಗಿ ಹೋದ ನೀನು ಪುನಃ ಕಾಣಿಸಿದ್ದು ರಥದ ಸುತ್ತ ನೆರೆದ ಜನ ಜಂಗುಳಿಯಲ್ಲಿ. ನಮ್ಮೂರ ಜಾತ್ರೆ ಅಂದ್ರೆ ಏನ್ ತಮಾಷೇನಾ ?ಸುತ್ತ ಹತ್ತು ಊರಿನ ಜನರೆಲ್ಲಾ ಮನೆಮಂದಿ ಸಮೇತ ಬರುತ್ತಾರೆ.ದೂರದಿಂದ ನೋಡುತಿದ್ದರೆ ಅದೊಂದು ಜನ ಸಾಗರ. ಸೇರಿದ್ದ ಜನರೆಲ್ಲಾ ಉತ್ಸವದ ರಥವನ್ನು ದಿಟ್ಟಿಸಿ ನೋಡುತಿದ್ದರೆ, ನಾನು ನಿನ್ನನ್ನು ಎವೆಯಿಕ್ಕದೆ ನೋಡುತಿದ್ದೆ. ನೀನು ಕೂಡಾ ನನ್ನನ್ನು ನೋಡುತಿದ್ದೆ, ನನಗೆ ಗೊತ್ತಿಲ್ಲದಂತೆ. ನಮ್ಮೂರಿನ ಯುವಕರೆಲ್ಲ ಸೇರಿ ಬಣ್ಣ ಬಣ್ಣದ ಧ್ವಜಗಳಿಂದ, ಫಲ ಪುಷ್ಪ , ತಳಿರು ತೋರಣ ಗಳಿಂದ ರಥವನ್ನು ಅಲಂಕರಿಸಿ ಉತ್ಸವಕ್ಕೆ ಆಣಿಗೊಳಿಸುತಿದ್ದಾರೆ ಈ ಕಡೆ ನನ್ನ ನಿನ್ನ ಮಧ್ಯ ಪ್ರೀತಿಯ ಕಿರು ತೇರು ಕಳೆ ಏರುತಿತ್ತು. ಪಶ್ಚಿಮದಲ್ಲಿ ಸೂರ್ಯ ಕೆಂಪಾಗುತಿದ್ದರೆ, ನಿನ್ನ ಕೆನ್ನೆ ಯಲ್ಲೂ ಅದರ ಪ್ರತಿ ಫ ಲನ. ಅತ್ತ ರಥ ಮಂಗಳ ಘೋಷದ ಜೊತೆಗೆ ನಿಧಾನವಾಗಿ ಮುಂದಕ್ಕೆ ಚಲಿಸುತಿದ್ದರೆ ಮುಗಿಲು ಮುಟ್ಟಿ ತ್ತು ಜನರ ಜೈಕಾರ. ಆ ಗದ್ದಲದಲ್ಲೂ ಸದ್ದಿಲ್ಲದೇ ಆಗಿತ್ತು ನಮ್ಮಿಬ್ಬರ ನಡುವೆ ಪ್ರೇಮಾಂಕುರ.ಜಾತ್ರೆ ಮುಗಿಯುವ ಅಷ್ಟರಲ್ಲಿ ನಮ್ಮೀರ್ವರ ಪ್ರೇಮ ಯಾತ್ರೆ ಶುರು ಆಗಿತ್ತು. ನಮ್ಮ ಪ್ರೀತಿಯ ರಥ ಕ್ಕೆ ನಾನೇ ಸಾರಥಿ ನೀನು ಮಹಾ ರಥಿ.

ನಮಗೊ ಊರು ಸುತ್ತುವ ಭ್ರಾಂತಿ.ಹಾಗೆ ಒಂದೂರಿನಿಂದ ಇನ್ನೊಂದೂರಿಗೆ ಹೋಗುವಾಗ ಒಂದೊಂದು ಕನಸು, ಹೊಸ ಉತ್ಸಾಹ. ಬೈಕಿನ ಸ್ಪೀಡು ಹೆಚ್ಚಾಗುತಿದ್ದಂತೆ ಹಿಂದೆ ಕುಳಿತ ನೀನು ಮತ್ತಷ್ಟು ಹತ್ತಿರ. ಆಮೇಲೆ ನೀನು ನಿಮ್ಮೂರಿಗೆ ಹೋದೆ ರಜೆಯಲ್ಲಿ. ಆದರೂ ಅಪರೂಪಕೊಮ್ಮೆ ನನ್ನನ್ನು ಭೇಟಿ ಆಗುತಿದ್ದೆ, ಗುಟ್ಟಾಗಿ. ನಿನ್ನ ಭೇಟಿ ಮಾಡಿದ ದಿನ ನನಗೆ ಎಲ್ಲಿಲ್ಲದ ಖುಷಿ, ಆ ಖುಷಿಗೆ ಸಂಜೆ ಗೆಳೆಯರಿಗೆಲ್ಲ ಮಸ್ತ್ ಪಾರ್ಟಿ. ಅಂದು ನಮ್ಮೆಲ್ಲರಿಗೆ ಸಂಭ್ರಮದ ಹುಣ್ಣಿಮೆ. ರಾತ್ರಿ ಅದೇ ಗುಂಗಿನಲ್ಲಿ ಮನೆಗೆ ಬಂದು ಟೆರೆಸ್ ಮೇಲೆ ಮೈಚೆಲ್ಲಿ ಸುಮ್ಮನೇ ಆಕಾಶ ದಿಟ್ಟಿಸಿದರೆ ಮತ್ತೆ ಬೆಳದಿಂಗಳಾಗಿ ಸುರಿಯುತ್ತದೆ ನಿನ್ನ ಪ್ರೀತಿ. ಆದರೆ ನಿನ್ನ ದರ್ಶನ ಆಗದ ದಿನ ವಿಪರೀತ ಚಡಪಡಿಕೆ. ಅದೇ ಬೇಸರಕ್ಕೆ ನಾನು ಏಕಾಂಗಿಯಾಗಿ ಯಾವುದೋ ಬಾರ್ ನ ಕತ್ತಲ ಮೂಲೆಯಲ್ಲಿ. ಮನಸ್ಸು ಅಲ್ಲೋಲ ಕಲ್ಲೋಲ, ಕೈಯಲ್ಲಿ ಅಲ್ಕೋಹಾಲು, ಪೆಗ್ ನ ಪ್ರತಿ ಸಿಪ್ ನಲ್ಲೂ ನಿನ್ನದೇ ಫೀಲು.ಆಮೇಲೆ ಹೇಗೋ ಕಾಲ್ ಎಳೆದು ಕೊಂಡು ರೂಮ್ ಸೇರಿ ಕೊಂಡರೆ ಅಲ್ಲಿ ಘೋರ ಕತ್ತಲು . ಆ ಕತ್ತಲ ಕೋಣೆಯಲ್ಲಿ ಮಲಗಿ ಮಗ್ಗಲು ಬದಲಿಸಿದರೆ ಜಾರ ತೊಡಗುತ್ತದೆ ಕಣ್ಣೀರು. ಒಂದೊಂದು ಹನಿ ಕೆಳ ಗುರುಳುತಿದ್ದಂತೆ ಮನಸು ನಿರಾಳ. ಕತ್ತಲಲ್ಲಿ ಹಾಗೆ ಏಕಾಂಗಿಯಾಗಿ ಅತ್ತು ಹಗುರಾಗುತಿದ್ದರೆ ಎಂಥ ದುಃಖ ನೂ ಮಾಯ.ಇವತ್ತು ಇಷ್ಟೆಲ್ಲಾ ಹೇಳುವುದಕ್ಕೂ ಕಾರಣವಿದೆ ಗೆಳತಿ. ನೀನು ಸಿಗದೆ ಎಷ್ಟು ದಿನವಾಯ್ತು. ಆ ಖುಷಿ, ಜಾಲಿ ರೈಡು, ಮಸ್ತ್ ಪಾರ್ಟಿ, ಬೆಳದಿಂಗಳಂಥ ಪ್ರೀತಿ ಎಲ್ಲಾ ಮರೆತೇ ಹೋದಂತಿದೆ. ಆದರೆ ಮುಂದಿನ ವಾರನೇ ನಮ್ಮೂರ ಜಾತ್ರೆ. ಈಗಲೂ ನಿನಗೆ ನನ್ನ ನೆನಪಾಗದಿದ್ದರೆ ಹೇಗೆ. ಬರ್ತೀಯಲ್ಲಾ ಜಾತ್ರೆಗೆ. ಈ ಸಲದ ರಥ ಸಪ್ತಮಿ ಯ ಬೆನ್ನಿಗೆ ನಮ್ಮಿಬ್ಬರ ಸಪ್ತಪದಿ. ಆಮೇಲೆ ” ಜೊತೆಯಾಗಿ ಹಿತವಾಗಿ, ಸೇರಿ ನಲಿವ, ಸೇರಿ ನುಡಿವ ” okna .

ನಿನ್ನ ನಿರೀಕ್ಷೆಯಲ್ಲಿರಥ ಬೀದಿ ಗೆಳೆಯ

ಹೂವೂಳಗಣ ಮಕರಂದವೇ

ಏನು ಮಾಡ್ತಿದ್ದೀಯ? ನಂಗೊತ್ತು ಖಂಡಿತ ನೀನು ಓದ್‌ಕೋತಾ ಇಲ್ಲ.ಮೊಬೈಲ್ ನ ಸೈಲೆಂಟ್ ಮೋಡ್ ನಲ್ಲಿಟ್ಟುಕೊಂಡು ನಿಮಿಷಕ್ಕೊಂದು ಸತಿ ನನ್ನ ಮೆಸೇಜ್ ಬಂದಿದೆಯಾ?? ಇಲ್ಲ ಕಾಲೇನಾದ್ರೂ ಮಾಡಿದಾನೋ??… ಅಂತ ನೋಡ್ತಿರ್‍ತೀಯಾ.ನಾನು ಕಾಲ್ ಮಾಡಿದ್ರೆ ನೀನು ಮಾತಾಡಲ್ಲ ಅಂತ ಗೊತ್ತು.ಆದ್ರೂ ನಾನು ಕಾಲ್ ಮಾಡಬೇಕು ಅದನ್ನ ನೋಡಿ ನೀನು ನಗ್ತೀಯಾ. ಅವನು ನನ್ನ ಮಿಸ್ಸ ಮಾಡ್‌ಕೊಳ್ಳುತಿದಾನೆ ಅಂತ ಅಂದುಕೊಳ್ಳುತ್ತೀಯ ಆದ್ರೆ ನೀನೆ ಅಲ್ವೇನೇ ನನ್ನ ಹೆಚ್ಚು ಮಿಸ್ ಮಾಡ್‌ಕೊಳ್ಳುತಿರೋದು?

ನಿಜ ಹೇಳಲೆನೇ ನಾನು ನಿನ್ನ ತುಂಬಾ ಇಷ್ಟ ಪಡ್ತೀನಿ ನೀನು ಎಲ್ಲರ ಬಗ್ಗೆ ತೂರಿಸೋ ಕಾಳಜಿ ಮನೆಯವರ ಬಗ್ಗೆ ತೋರಿಸೋ ಗೌರವ ಇಷ್ಟ ಆಗುತ್ತೆ ಒಂದೊಂದು ಸತಿ ಅತೀ ಮಾಡ್ತಳೆ ಅನ್ಸುತ್ತೆ ಆದ್ರೆ ಎಲ್ಲಕ್ಕಿಂತ ಇಷ್ಟ ಆಗೋದು ನಿನ್ನ ಕೊನ್ಫುಸೆಡ್ ಮೈಂಡ್ ಮತ್ತು ಮುಗ್ಧತೆ. ಅವತ್ತು ನಿನ್ನ ಆ ರೆಸ್ಟೋರ ದಲ್ಲಿ ನೂಡಿದಾಗಲೇ ಅರ್ಥ ಮಾಡ್ಕೊಂಡೆ ನಿಂಗೆ ಏನು ಆರ್ಡೆರ್ ಮಾಡ್ಬೇಕು ಅಂತ ಬಿಟ್ರೆ ಇವೆತ್ತೆಲ್ಲಾ ಆರ್ಡೆರ್ ಮಾಡೋಲ್ಲ ಅಂತ ಅದ್ರಲ್ಲೂ ಕೊನ್ಫುಶನ್ನಾ?? ನಿಮಗೆ ಕಷ್ಟ ಆದ್ರೆ ಕೊಡಿ ನಾನೇ ಆರ್ಡೆರ್ ಮಾಡುತ್ತಿನಿ ಅಂದಿದ್ದೆ ತಡ ಹೇಗೆ ತಕ್ಷಣ ಕೊಟ್ಬಿಟ್ತೆ.ನಿನ್ನ ಕಣ್ಣುಗಳಲ್ಲಿ ದೊಡ್ಡ ರಿಲೀಫ್ ನನ್ನ ಕಡೆಗೊಂದು ಚಿಕ್ಕ ಧನ್ಯವಾದ.
ನಿನಗೆ ಕಣ್ಣಲ್ಲೇ ಮಾತಾದೋಕೆ ಕಲಿಸಿದವರು ಯಾರೇ? ಅಥವಾ ನನಗೆ ಹಂಗೆ ಅನಿಸುತ್ತೋ? ನಿನ್ನ ಮೊದಲನೆ ಸತಿ ನಮ್ಮ ಕಾಲೇಜಿನ ಲಿಫ್ಟ್ ನಲ್ಲಿ ನೂಡಿದಾಗಲೇ ಅಂದುಕೊಂಡೆ ಇವಳ ಕಣ್ಣುಗಳು ಎಷ್ಟು ಚೆನ್ನಾಗಿವೆ ಅಂತ ಜೂನಿ ಯರ್ ಇರ್ಬೇಕು ಅನ್ನಿಸಿತು.ಅಷ್ಟ್ರಲ್ಲಿ ನೀನೆ ಕೇಳ್ದೆ ರೇಖಾ ಎಲ್ಲಿ ಕೆಲಸ ಮಾಡ್ತಾರೆ ಗೊತ್ತಾ?I mean which floor? ಯಾವ ರೇಖಾ ಅಂತ ನಾನು ಕೇಳಿದ್ರೆ “ಅಯ್ಯೂ! ಇದೇ ಕಾಲೇಜಿನ ವಿಧ್ಯಾರ್ಥಿ ಆಗಿ ನಿಮಗೆ ರೇಖಾಕ್ಕ ಗೋತ್ತಿಲ್ವ? ಅವರು ಇಲ್ಲಿ ಲಚ್ಚರರು ಆರು ತಿಂಗಳಾಯಿತು ಸೇರಿ. ಉದ್ದ ಜಡೆ ಇದೆ…” ನಿನ್ನ ಮಾತಿಗೆ ನನಗೆ ನಗು ನಿನ್ನ ಆ ಇನ್ಣೊಸೆನ್ಸೆಗೆ ಮುತ್ತು ಕೊಡೋಣ ಅನ್ನಿಸಿತ್ತು ಯಾವ ಬ್ರಂಚ್‌ನಲ್ಲಿದ್ದಾರೆ ಅಂತನೂ ತಿಳಿದುಕೊಳ್ಳದೇ ಬಂದಿದ್ದೆಯಲ್ಲ ಆಮೇಲೆ ನಿನಗೆ ನಿನ್ನ ರೇಖಾಕ್ಕನನ್ನ ಹುಡುಕಿಕೊಟ್ಟಾಗಲೆ ಸಮಾಧಾನ ಆಗಿದ್ದು.

ನೀನು ಲಾ ಸೇರಬೇಕು ಅಂತ ಹೇಗೆ ನಿರ್ಧಾರ ಮಾಡ್ದೇ! ನಿಂದಂತೂ ಅಲ್ಲ ಬಿಡು ಡಿಸೀಶನ್ನು.ನಿಮ್ಮ ಅಪ್ಪನೋ ಅಮ್ಮಾನೋ ಸೇರಿಸಿರಬೇಕು.ಆದರೆ ಮಾತಾಡೋದನ್ನ ನಿನ್ನಿಂದ ಕಲೀಬೇಕು. ನಿಮ್ಮ ಕಣ್ಣಿನ ಕ್ಯಾಮರಾದಲ್ಲಿ ನನ್ನದೊಂದು ಫೋಟೋ ಇರಲಿ, ಅಂದರೆ ರೀಲ್ ಖಾಲಿ ಆಗಿ ತುಂಬಾ ದಿನ ಆಗೊಯ್ತು ಅಂತೀಯ?? ಅಬ್ಚ!ಎಷ್ಟೇ ಜಂಬ ನಿಂಗೆ?? ಆದ್ರೆ ನಾನು ನಿನ್ನ ಪ್ರೀತಿಸುತೀಯ ಅಂತ ಕೇಳೋಲ್ಲ ಏಕೆಂದರೆ ನೀನು ಯಾವತ್ತಿಗೂ ನಿರ್ಧರಿಸಿ ಹೇಳೋಲ್ಲ ಆದ್ರೆ ನಾನು ನಿನ್ನ ಕಡಲಾಳಕ್ಕಿಂತಲೂ ಹೆಚ್ಚಾಗಿ ಪ್ರೀತಿಸುತ್ತೀನಿ ನಿರ್ಧಾರಗಳನೆಲ್ಲ ನನಗೆ ಬಿಟ್ಟುಬಿಡು ನನಗೇನೂ ಭಾರ ಆಗೋಲ್ಲ..ನಾನು ನಿನ್ನನ್ನೇ ಮದುವೆ ಆಗೋದು..ನಿನ್ನ ಹುಚ್ಚು ಹಿಡಿಸಿಕೊಂಡವ