Tuesday, July 17, 2007

ಈ ಪ್ರಪಂಚದಲ್ಲಿ ನನ್ನಷ್ಟು ಸುಖೀ ಯಾರು ಇರಲಿಲ್ಲ.

ತುಂಬಾನೆ ತಪ್ಪುಗಳಿವೆ ಅದನ್ನು ಸರಿಪಡಿಸಿಕೊಂಡು ಓದಬೇಕಾಗಿ ಕೋರಿಕೊಳ್ಳುತ್ತಾ...... ಹೃದಯ ಸೂರೆಗೊಂಡ ಅವನೆ ನನ್ನ ಪಾಡಿಗೆ ನಾನಿದ್ದ ಅವಳ ಮುಂದೆ ಯಾಕೋ ಬಂದೆ. ಈ ಪ್ರಪಂಚದಲ್ಲಿ ನನ್ನಷ್ಟು ಸುಖೀ ಯಾರು ಇರಲಿಲ್ಲ. ಮಕ್ಕಳಿಗೆ ಮಕ್ಕಳಾಗಿ ನಲಿಯುತ್ತಿದ್ದೆ. ಜಾವ್ವನೆಯರಿಗೆ ಜಾವ್ವನೆಯಾಗಿ ಸಲಹೆಕೊಡುತ್ತಿದ್ದೆ. ತುಂತುರು ಮಳೆ-ಯಲ್ಲಿ ಯಾರ ಪರಿವೆ ಇಲ್ಲದೇ ನವಿಲಂತೆ ನರ್ತಿಸುತ್ತಿದ್ದೆ. ಗುಡುಗು-ಸಿಡಿಲಿನ ಪ್ರತಾಪಕ್ಕೆ ಗುಬ್ಬಚ್ಚಿಯಂತೆ ಬಾಗಿಲ ಸಂದಿ-ಯಲ್ಲಿ ಮುದುರುತ್ತಿದ್ದೆ. ಇಂತಹ ಮುಗ್ಧ ಮನದ ಕಿಶೋರಿಯನ್ನು ಪ್ರೀತಿಯೆಂಬ ಬಾವಿಗೆ ನೂಕಿ ಏನು ನಡೆದೇ ಇಲ್ಲದಂತೆ ನಿನ್ನದೇ ಒಂದು ಪ್ರಪಂಚದಲ್ಲಿ ಜೀವಿಸುತ್ತಿರುವೆಯಲ್ಲ ಇದು ಎಸ್ಟು ನ್ಯಾಯ? ಕಳೆದುಹೋದ ನನ್ನೆಲ್ಲಾ ಸುಖವನ್ನು ನಿನ್ನಿಂದ ಮರಳಿ ಕೊಡಲು ಸಾಧ್ಯವೇ? ಸಾಧ್ಯವೆಂದಾದಲ್ಲಿ ಅದನ್ನು ಮರಳಿಸು. ನಿನ್ನ ಪ್ರೀತಿಸುವುದನ್ನು ನಿಲ್ಲಿಸಲಾಗಾದಿದ್ದರು, ಅಂಗ- ಲಾಚುವುದನ್ನು ನಿಲ್ಲಿಸುತ್ತೇನೆ. ನಾನೀಗ ಮೌನದ ಚಿಪ್ಪಿನಲ್ಲಿ ಅಡಗಿ ಕುಳಿತ ಮುತ್ತಾಗಿದ್ದೇನೆ ಕಣೋ. ಮೂಕ ಹಕ್ಕಿಯಾಗಿ ವೇದನೆಯ ಗೀತೆ ಹಾಡುತ್ತಿದ್ದೇನೆ. ಅದ್ಯಾವುದು ನಿನಗೆ ತಿಳಿಯದು ಯಾಕೆಂದರೆ ನೀನು ಜಾಣ ಕೀವು-ಡ ಆದರೂ ನಿನ್ನದೇನು ತಪ್ಪಿಲ್ಲ ಬಿಡು. ಹುಡುಗರು ಸ್ನೇಹವನ್ನು ಪ್ರೀತಿಯೆಂದು ಭಾವಿಸುತ್ತಾರಂತೆ, ಹುಡುಗಿಯರು ಪ್ರೀತಿಯನ್ನು ಸ್ನೇಹವೆಂದು ಭಾವಿಸುತ್ತಾರಂತೆ ಆದರೆ ಅದು ನನ್ನ ವಿಷಯದಲ್ಲಿ ತಿರುಗಾ-ಮೂರುಗಾಯಿತು ಅಲ್ಲವೇ? ನೀನು ನನ್ನ ಜೊತೆ ಸ್ನೇಹಿತನಂತೆ ವರ್ತಿಸಿದೆ. ಆದರೆ ನಾನೇ ಅದನ್ನು ಅರ್ಥೈಸಿಕೊಂಡ ಪರಿ ಇದೆಯಲ್ಲ ಅದು ತಪ್ಪು. ಆಶಾಗೋಪುರ ಕಟ್ಟುತ್ತಾ ಹೋದವಲಿಗೆ ಅದು ಕುಸಿದಾಗಲೇ ಜೀವನವೆಂಬ ಶೀಖರ ಕುಸಿಯುತ್ತಿದೆ ಎಣಿಸಿದ್ದು. ನೀನು ಏನೋ ಸಮಾಜವನ್ನು ಉದ್ಧಾರ ಮಾಡುವ ಧ್ಯೇಯಕ್ಕಾಗಿ ಬ್ರಹ್ಮಚರ್ಯವನ್ನು ಸ್ವೀಕರಿಸಲು ಸಿದ್ಧವಾಗಿ ಹೊರಟೇಬಿಟ್ಟೆ. ಆದರೆ ನಾನು ಆ ರೀತಿ ಮಾಡಿದರೆ ನನಗೂ ನಿನಗೂ ಏನು ವ್ಯತ್ಯಾಸ? ನಾನು ಜೀವನದಲ್ಲಿ ಹೇದಿಯಾಗಿ ಜೀವನಕ್ಕೆ ಬೆನ್ನು ಹಾಕಿ ಒಡಲಾರೆ. ಹುಚ್ಚುಕಾನನದಲ್ಲಿ ಪೆಚ್ಚು ಮೊರೆಹಾಕಿಕೊಂಡು ಜೀವನನಡೆಸುತ್ತಿರುವೆ. ಪ್ರೀತಿ ಪ್ರೀತಿ ನಿನ್ನ ಆಟ ಸಾಕು ನಿಲ್ಲಿಸು ಒಂದೇ ಒಂದು ಮಾತಿನಲ್ಲಿ ನನ್ನ ಆಸೆ ನೆರವೇರಿಸು ಎಂದು ಎಸ್ಟು ಬೇಕಾದರೂ ಗೋಗರೆಯಲು ಸಿದ್ಧವಾಗಿದ್ದೆ. ಆದರೆ ಅದಕ್ಕೆಲ್ಲಾ ಗುಡ್‌ಬೈ ಎಂದು ಮಾತು ಮುರಿದು ಮರೆಯಾಗಿ ಹೋದೆ. ಮೂಕಮನಸ್ಸು ಮಂಕಾಗಿ ರೋಧಿಸುತ್ತಿದೆ. ಎಲ್ಲೇ ಇರು ಹೇಗೆ ಇರು ಓ ನನ್ನ ಒಲವೆ ನೀ ಸುಖವಾಗಿರು.

No comments: