Tuesday, July 17, 2007

ಹೂವೂಳಗಣ ಮಕರಂದವೇ

ಏನು ಮಾಡ್ತಿದ್ದೀಯ? ನಂಗೊತ್ತು ಖಂಡಿತ ನೀನು ಓದ್‌ಕೋತಾ ಇಲ್ಲ.ಮೊಬೈಲ್ ನ ಸೈಲೆಂಟ್ ಮೋಡ್ ನಲ್ಲಿಟ್ಟುಕೊಂಡು ನಿಮಿಷಕ್ಕೊಂದು ಸತಿ ನನ್ನ ಮೆಸೇಜ್ ಬಂದಿದೆಯಾ?? ಇಲ್ಲ ಕಾಲೇನಾದ್ರೂ ಮಾಡಿದಾನೋ??… ಅಂತ ನೋಡ್ತಿರ್‍ತೀಯಾ.ನಾನು ಕಾಲ್ ಮಾಡಿದ್ರೆ ನೀನು ಮಾತಾಡಲ್ಲ ಅಂತ ಗೊತ್ತು.ಆದ್ರೂ ನಾನು ಕಾಲ್ ಮಾಡಬೇಕು ಅದನ್ನ ನೋಡಿ ನೀನು ನಗ್ತೀಯಾ. ಅವನು ನನ್ನ ಮಿಸ್ಸ ಮಾಡ್‌ಕೊಳ್ಳುತಿದಾನೆ ಅಂತ ಅಂದುಕೊಳ್ಳುತ್ತೀಯ ಆದ್ರೆ ನೀನೆ ಅಲ್ವೇನೇ ನನ್ನ ಹೆಚ್ಚು ಮಿಸ್ ಮಾಡ್‌ಕೊಳ್ಳುತಿರೋದು?

ನಿಜ ಹೇಳಲೆನೇ ನಾನು ನಿನ್ನ ತುಂಬಾ ಇಷ್ಟ ಪಡ್ತೀನಿ ನೀನು ಎಲ್ಲರ ಬಗ್ಗೆ ತೂರಿಸೋ ಕಾಳಜಿ ಮನೆಯವರ ಬಗ್ಗೆ ತೋರಿಸೋ ಗೌರವ ಇಷ್ಟ ಆಗುತ್ತೆ ಒಂದೊಂದು ಸತಿ ಅತೀ ಮಾಡ್ತಳೆ ಅನ್ಸುತ್ತೆ ಆದ್ರೆ ಎಲ್ಲಕ್ಕಿಂತ ಇಷ್ಟ ಆಗೋದು ನಿನ್ನ ಕೊನ್ಫುಸೆಡ್ ಮೈಂಡ್ ಮತ್ತು ಮುಗ್ಧತೆ. ಅವತ್ತು ನಿನ್ನ ಆ ರೆಸ್ಟೋರ ದಲ್ಲಿ ನೂಡಿದಾಗಲೇ ಅರ್ಥ ಮಾಡ್ಕೊಂಡೆ ನಿಂಗೆ ಏನು ಆರ್ಡೆರ್ ಮಾಡ್ಬೇಕು ಅಂತ ಬಿಟ್ರೆ ಇವೆತ್ತೆಲ್ಲಾ ಆರ್ಡೆರ್ ಮಾಡೋಲ್ಲ ಅಂತ ಅದ್ರಲ್ಲೂ ಕೊನ್ಫುಶನ್ನಾ?? ನಿಮಗೆ ಕಷ್ಟ ಆದ್ರೆ ಕೊಡಿ ನಾನೇ ಆರ್ಡೆರ್ ಮಾಡುತ್ತಿನಿ ಅಂದಿದ್ದೆ ತಡ ಹೇಗೆ ತಕ್ಷಣ ಕೊಟ್ಬಿಟ್ತೆ.ನಿನ್ನ ಕಣ್ಣುಗಳಲ್ಲಿ ದೊಡ್ಡ ರಿಲೀಫ್ ನನ್ನ ಕಡೆಗೊಂದು ಚಿಕ್ಕ ಧನ್ಯವಾದ.
ನಿನಗೆ ಕಣ್ಣಲ್ಲೇ ಮಾತಾದೋಕೆ ಕಲಿಸಿದವರು ಯಾರೇ? ಅಥವಾ ನನಗೆ ಹಂಗೆ ಅನಿಸುತ್ತೋ? ನಿನ್ನ ಮೊದಲನೆ ಸತಿ ನಮ್ಮ ಕಾಲೇಜಿನ ಲಿಫ್ಟ್ ನಲ್ಲಿ ನೂಡಿದಾಗಲೇ ಅಂದುಕೊಂಡೆ ಇವಳ ಕಣ್ಣುಗಳು ಎಷ್ಟು ಚೆನ್ನಾಗಿವೆ ಅಂತ ಜೂನಿ ಯರ್ ಇರ್ಬೇಕು ಅನ್ನಿಸಿತು.ಅಷ್ಟ್ರಲ್ಲಿ ನೀನೆ ಕೇಳ್ದೆ ರೇಖಾ ಎಲ್ಲಿ ಕೆಲಸ ಮಾಡ್ತಾರೆ ಗೊತ್ತಾ?I mean which floor? ಯಾವ ರೇಖಾ ಅಂತ ನಾನು ಕೇಳಿದ್ರೆ “ಅಯ್ಯೂ! ಇದೇ ಕಾಲೇಜಿನ ವಿಧ್ಯಾರ್ಥಿ ಆಗಿ ನಿಮಗೆ ರೇಖಾಕ್ಕ ಗೋತ್ತಿಲ್ವ? ಅವರು ಇಲ್ಲಿ ಲಚ್ಚರರು ಆರು ತಿಂಗಳಾಯಿತು ಸೇರಿ. ಉದ್ದ ಜಡೆ ಇದೆ…” ನಿನ್ನ ಮಾತಿಗೆ ನನಗೆ ನಗು ನಿನ್ನ ಆ ಇನ್ಣೊಸೆನ್ಸೆಗೆ ಮುತ್ತು ಕೊಡೋಣ ಅನ್ನಿಸಿತ್ತು ಯಾವ ಬ್ರಂಚ್‌ನಲ್ಲಿದ್ದಾರೆ ಅಂತನೂ ತಿಳಿದುಕೊಳ್ಳದೇ ಬಂದಿದ್ದೆಯಲ್ಲ ಆಮೇಲೆ ನಿನಗೆ ನಿನ್ನ ರೇಖಾಕ್ಕನನ್ನ ಹುಡುಕಿಕೊಟ್ಟಾಗಲೆ ಸಮಾಧಾನ ಆಗಿದ್ದು.

ನೀನು ಲಾ ಸೇರಬೇಕು ಅಂತ ಹೇಗೆ ನಿರ್ಧಾರ ಮಾಡ್ದೇ! ನಿಂದಂತೂ ಅಲ್ಲ ಬಿಡು ಡಿಸೀಶನ್ನು.ನಿಮ್ಮ ಅಪ್ಪನೋ ಅಮ್ಮಾನೋ ಸೇರಿಸಿರಬೇಕು.ಆದರೆ ಮಾತಾಡೋದನ್ನ ನಿನ್ನಿಂದ ಕಲೀಬೇಕು. ನಿಮ್ಮ ಕಣ್ಣಿನ ಕ್ಯಾಮರಾದಲ್ಲಿ ನನ್ನದೊಂದು ಫೋಟೋ ಇರಲಿ, ಅಂದರೆ ರೀಲ್ ಖಾಲಿ ಆಗಿ ತುಂಬಾ ದಿನ ಆಗೊಯ್ತು ಅಂತೀಯ?? ಅಬ್ಚ!ಎಷ್ಟೇ ಜಂಬ ನಿಂಗೆ?? ಆದ್ರೆ ನಾನು ನಿನ್ನ ಪ್ರೀತಿಸುತೀಯ ಅಂತ ಕೇಳೋಲ್ಲ ಏಕೆಂದರೆ ನೀನು ಯಾವತ್ತಿಗೂ ನಿರ್ಧರಿಸಿ ಹೇಳೋಲ್ಲ ಆದ್ರೆ ನಾನು ನಿನ್ನ ಕಡಲಾಳಕ್ಕಿಂತಲೂ ಹೆಚ್ಚಾಗಿ ಪ್ರೀತಿಸುತ್ತೀನಿ ನಿರ್ಧಾರಗಳನೆಲ್ಲ ನನಗೆ ಬಿಟ್ಟುಬಿಡು ನನಗೇನೂ ಭಾರ ಆಗೋಲ್ಲ..ನಾನು ನಿನ್ನನ್ನೇ ಮದುವೆ ಆಗೋದು..ನಿನ್ನ ಹುಚ್ಚು ಹಿಡಿಸಿಕೊಂಡವ

No comments: