Tuesday, July 17, 2007

ರಾಕ್ಷಸ..

ನಮ್ ಕೆಲ್ಸದ್ ನಂಜಿ ಬಂದು "ಚಿಕ್ಕವಾರೆ ಸೋಮಣ್ಣ ದೇವಸ್ಥಾನದ್ ಕಂಬದ್ ತಾವಾ ಕಾಗ್ಜ ಇಟ್ಟವ್ನಂತೆ. ನೀವ್ ಒದ್ ಬೈಕಂತೆ" ಅಂದಾಗ ನನ್ ಎದೆ ಧಸಕ್ ಅಂತು. ಅಪ್ಪ ಎಲ್ಲಾದ್ರೂ ನೋಡಿದ್ರೆ ಎನ್ ಗತಿ ? ಅಲ್ಲ್ಯಕಿಟ್ಟಿದ್ಯೋ ಒರಟ..ನಾನು ಕಿರುಗಣ್ಣಿನಲ್ಲಿ ನಿನ್ನ ನೋಡ್ತೀರೋದು ನಿಂಗ್ ಗೊತ್ತಗೋಯ್ತಾ ಅಂತ ಒಳಗೊಲ್ಗೆ ಚಿಂತೆಯಾಗಿತ್ತು. ಎನ್ ಬರ್ದಿದ್ಯೋ ಅಂತ ಕಾತ್ರ ಬೇರೆ. ಅಪ್ಪ ಓದೋ ಕಾಳಿದಾಸ ಕುಮಾರವ್ಯಾಸ ಪದ್ಯದ್ ಥರ ಏನಾದ್ರೂ ಬಾರ್‍ದಿರ್ತಿಯ ಅನ್ಕೊಂಡಿದ್ದೆ.ಅವತ್ತು ಅಪ್ಪನ್ ಕಣ್ನ್ ತಪ್ಸಿ ನಂಜಿ ಜೊತೆ ಟೆoಟ್ ನಲ್ ಬಂದಿದ್ದ ಕರಿಯ ಸಿನ್ಮ ನೋಡಕ್ ಹೋಗಿದ್ದೆ ಆಗ ನಂಜಿ "ನಮ್ ಸೋಮಣ್ಣನೂ ಈ ಈರೋ ಥರಾನೆಯ ಬೆಲೆ ಗಂಡು ಹತ್ತೂರಲ್ ಯಾವ್ ನನ್ ಮಗ್ ನು ಅವ್ನ್ ಮುಂದೆ ಏನು ಕಿಸ್ಯಕ್ ಆಗಕ್ಕಿಲ್ಲ" ಅಂತ ನಿನ್ನ ಹೊಗಳಿದ್ಲೂ. ಸಿನ್ಮ ಮುಗಿದ್ಮೇಲೆ ಲೇಟಾಯ್ತು ಅಪ್ಪ ಬೈತಾರೆ ಅಂತ ಭಯ ಆಗಿತ್ತು ಆವಾಗ ನಂಜಿ "ಹೆದ್ರಕಬೇಡಿ ಚಿಕ್ಕವ್ವಾರೆ ಅತ್ರುದ್ ದಾರಿಲಿ ಬೇಗ ಮಾನೀಗ್ ಕರ್ಕೊಂಡ್ ಹೋಯ್ತಿನಿ" ಅಂತ ಶಂಕ್ರಣ್ಣನ ಸರಾಯಿ ಅಂಗಡಿ ಮುಂದಿನ್ ದಾರೀಲಿ ಕರ್ಕೊಂಡ್ ಹೋಗಿದ್ಲು ಅಲ್ಲಿ ಕುಡ್ದು ಬಿದ್ದಿರೋರ್ನ ನೋಡಿ ಛೀ ಗಬ್ಬು ಅಂತ ಅವ್ಳ ಕಿವೀಲಿ ಹೇಳಿದ್ದೆ. ನೀನು ಅಲ್ಲೇ ಬಿದ್ದಿದ್ದೆ ಅಂತ ಇವತ್ತೇ ಗೊತ್ತಾಗಿದ್ದು.ಅವತ್ತು ಗೌಡ್ರ ಮನೆ ಎದ್ರೂ ನೀನು ಹಸ್ರು ಲೂಂಗಿ ಸುತ್ಕೊಂಡು ಕಟ್ಟಿಗೆ ಓಡೀತಿದ್ದೆ ನಾನು ಗೌಡ್ರ ಮಗ್ಲೂ ಪಗ್ಡೆ ಆಡ್ತಿದ್ವಿ..ನನ್ನ ಕಣ್ಣೆಲ್ಲಾ ನಿನ್ನ ಮೇಲೆ ನಿನ್ನ ಕರೀ ಬಣ್ಣ, ಅಗಲವಾದ ಭುಜ, ಧಾರಾಕಾರವಾಗಿ ಸುರೀ..ತಿದ್ದ ಬೆವ್ರು. ಅಬ್ಚ!! ಗಂಡು ಅಂದ್ರೆ ನೀನು ಅನ್ನುಸ್ಟು. ಆ ನಿನ್ನ ಅಗಲವಾದ ಎದೆಯ ಪುಟ್ಟ ಹೃದಯದಲ್ಲಿ ಗುಬ್ಬಚ್ಚಿ ತರ ಸೇರ್‌ಕೋಬೇಕು ಅನ್ಸಿತ್ತು . ಯಾವತ್ತು ಆಟದಲ್ಲಿ ಸೋಲ್‌ದವ್ಲು ಅವತ್ತು ಸೋತಿದ್ದೆ. ನಿಂಗೆ ಸೋತಮೇಲೆ ಪಗಡೆಲಿ ಗೆದ್ದರೆಷ್ಟು ಬಿಟ್ಟ್ರೆಷ್ಟು?? ಕಟ್ಟಿಗೆ ಓಡದ್ ಬಿಟ್ಟು ಒಂದೆ ಸಮನೆ ತಿಂದು ಹಾಕೊಹಾಗೆ ನೂಡ್ತೀದ್ಯಲ್ಲ ನನ್ನ ನಂಗೆಷ್ಟು ಭಯ ಆಗಿತ್ತು ಗೊತ್ತಾ??ಕರಿಯ ಐ ಲವ್ ಯುಕರು ನಾಡ ಮೆಲಾಣೆ (ರೇಡಿಯೋಲಿ ಬರ್ತಿತ್ತು ಕಣೋ ಅವತ್ತು)ಓರ್ಟ್ ಒರಟಾಗಿ ಇರೋದು ಕೆದರಿದ್ ಕೂದ್ಲೂ ಚೆನ್ನಾಗ್ ಕಾಣುತ್ತೆ ನಿಂಗೆ. ನಿಜ ಹೇಳಲ ನಿನ್ ಕಪ್ಪು ಬಣ್ಣ ತುಂಬಾ ಇಷ್ಟ ನಂಗೆ.ಆದ್ರೆ ನೀನು ಹಿಂಗೆ ಬರೀ ಲಾಂಗು, ಮಚ್ಚು ಅಂತ ಮಾತಾಡ್ಟಿದ್ರೆ ಹೆದ್ರಿಕೆಯಾಗುತ್ತಪ್ಪ ..ಥು ಥು ಥು ಎಷ್ಟ್ ಕುಡೀತೀಯೋ ನೀನು??? ಕುಡಿಯೋದನ್ನ ಬಿಟ್ರೆ ಮಾತ್ರ ನಾ ನಿನ್ನ ಮಾತಾಡ್ಸೋದು. ಇಲ್ಲ ಅಂದ್ರೆ ನಿನ್ ಕಡೆ ತಿರ್ಗೂ ನೋಡಲ್ಲ............ಅಂಧಹಾಗೆ ಈ ಸಿಂಗಾರವ್ವ ಯಾರು???ಹಾ ಅಪ್ಪ ಹುಡ್ಗುನ್ ನೋಡ್ಕೋ ಬಂದಿದಾರೆ ಪಕ್ಕದ್ ಹಳ್ಳಿಳಿ ಪ್ರೈಮರಿ ಸ್ಕೂಲ್ ಮೇಷ್ಟ್ರಂತೆ. ನಂಗೊಂಚೂರು ಇಷ್ಟ ಇಲ್ಲ ಅವ್ನು.. ಆದ್ರೆ ನೀನು ಅಪ್ಪನ್ನ ಜುಟ್ಟು ಗಿಟ್ಟು ಅಂದ್ರೆ ಸರಿ ಇರಲ್ಲ ನೋಡು.

ಮಾರಮ್ಮಾನ್ ಗುಡಿ ಹತ್ರ ಬೇಡ ನಮ್ ತೋಟದ್ ಬಾವಿ ಹತ್ರ ಬಾ. ಅವತ್ತು ನೀನು ನನ್ನ ಮೊದಲ್‌ನೆ ಸತಿ ನೋಡಿದಾಗ ಉಟ್ಟಿದ್ದ ನೀಲಿ ಬಣ್ಣದ ಲಂಗ ದಾವಾಣಿನೇ ಉಟ್ಟುಕೊಂಡ್ ಬರ್ತೀನಿ. ನನ್ನ ಹೆಸರಿರೋ ಮಚ್ಚು ತೊಗೊಂಡು ಬಾ ಅಲ್ಲೇ ಬಾವಿಗೆ ಎಸೆಯೋಣ. ಮಲ್ಲಿಗೆ ಅಂದ್ರೆ ನಂಗೆ ತುಂಬಾ ಇಷ್ಟ ನೀನೇ ಮುಡುಸ್ತಿಯಂತೆ. ............................................................. ನಿನ್ನವ್ಳೆ ಗೌರಿ

No comments: