Tuesday, July 17, 2007

ಕಾಡು ಕುದುರೆಯ ಆವೇಗವೇ

ಈಗಷ್ಟೇ ನೀನು ಎದ್ದು ಹೋದೆ. ಮೃದು ಹಾಸಿಗೆಯ ಮೇಲೆ ಮಲಗಿರುವ ನೀಲಿ ಬಣ್ಣದ ಹೂಗಳಿರುವ ಆ ಮೇಲು ಹಾಸಿನ ಮುದುರುಗಳಲ್ಲಿ ನಿನ್ನ ಘಮ.ಬೆಳಗಿನ ನಾಲ್ಕು ಘಂಟೆಗೆ ನೀನು ನನ್ನ ಮಳೆಯಾಗಿ ಸೇರುತ್ತಿದ್ದರೆ ಮೊದಲ ಮಳೆಗೆ ಘಂ ಎನ್ನುವ ಭುವಿಯಂತೆ ನಾನು ಕರಗುತ್ತಿದ್ದೆ.ನೀನು ಮುಗಿಲು ನಾನು ನೆಲನಾನು ಎಳೆವೆ ನೀನು ಮಣಿವೆನಾನು ಕರೆವೆ ನೀನು ಸುರಿವೆ ನಾ ಅಚಲದ ತುಟಿ ಎತ್ತುವೆ ನೀ ಮಳೆಯೊಳು ಮುತ್ತನಿಡುವೆಹೊದಿಕೆಯೋ ಎಂಬಂತೆ ಸುಮ್ಮನೇ ನಿನ್ನ ಮೇಲಿದ್ದವಳಿಗೆ ಕರೆಗಂಟೆಯ ಸದ್ದು ಇಷ್ಟವಾಗಲಿಲ್ಲ. ಆದರೂ ಇಷ್ಟು ಮುಂಜಾನೆ ಬಾಗಿಲು ಬಡಿ ಯುತ್ತಿದ್ದಾರೆಂದರೆ ಯಾವುದೋ ಸೀರಿಯಸ್ ಕೇಸೇ ಬಂದಿರಬೇಕೆಂದು ಓಲ್ಲದ ಮನಸ್ಸಿನಿದ ಬಾಗಿಲು ತೆರೆದರೆ ಕಂಡಿದ್ದು ಕೆಂಡದಂತೆ ಮೈ ಸುಡುತ್ತಿರುವ 8ವರ್ಷದ ಹುಡುಗಿಯ ಜೊತೆ ಚಿಂತೆಗಣ್ಣಿನ ಅವರಪ್ಪ.ನನಗೆ ಗೊತ್ತು ನೀನು ಜಾಣ ಹುಡುಗ ಆ ಹುಡುಗಿಗೆ ಬೇಗ ವಾಸಿಯಾಗುತ್ತೆ.ಬೆಳಗಿನ ಆ ಚಳಿಯಲ್ಲಿ ಮಗುವಿನ ಜೊತೆ ಬಂದ ತಂದೆಗೆ ಕಾಫಿಯ ಅವಶ್ಯಕತೆ ಇದೆ ಅನ್ನಿಸಿ ಹಬೆಯಾಡುವ ಕಾಫಿ ತಂದಿಟ್ಟಾಗ ನಿನ್ನ ಕಣ್ಣುಗಳಲ್ಲಿ ನನ್ನೆಡೆಗಿದ್ದ ಮೆಚ್ಚುಗೆ ನೋಡಿ ಹಿತವಾಯಿತು ಮನಸಿಗೆ.ನಮ್ಮಿಬ್ಬರದು ಅರೆಂಜ್ ಮ್ಯಾರೇಜ್ ಅಂದರೆ ಯಾರು ನಂಬುವುದಿಲ್ಲ...ಏನೆಂದು ಕರೆಯಲಿ ನಿನ್ನ??ಗಂಡ? ಗೆಳೆಯ? ಆತ್ಮಸಖ??ಆಸ್ಪತ್ರೆ ವಾಸನೆ ಅಂದರೆ ವಾಕರಿಸುತ್ತಿದ್ದ ನಾನು ದಿನಾ ಅದೇ ವಾಸನೆಯನ್ನು ಹೊತ್ತು ತರುವ ವೈದ್ಯನನ್ನು ಮದುವೆಯಾದದ್ದು ಹೇಗೆ??ಇದಕ್ಕೆ ಋಣಾನು ಬಂಧ ಎನ್ನುವುದ??ಈಗ ನೀನು ಮಹಡಿ ಮೇಲಿನ ಕೊಣೆಯ ಆರಾಮು ಖುರ್ಚಿಯ ಮೇಲೆ ಕುಳಿತುಕೊಂಡು ಯಾವುದೋ medical journal ಓದುತ್ತಿರುತ್ತೀಯ. ಹಾಗೆ ನೀನು ಓದುವುದನ್ನು ದೂರದಿಂದ ನಿನಗೆ ಗೊತ್ತಾಗದ ಹಾಗೆ ನೋಡುವುದು ನನಗೆ ತುಂಬಾ ಖುಷಿ ಕೊಡುತ್ತೆ.ಸ್ನಾನ ಮಾಡಿ ಬಾ ಹುಡುಗ, ನಿನಗಿಷ್ಟವಾದ ದೋಸೆ ತಿನ್ನುತ್ತಾ ಈ ಪತ್ರ ಓದುವೆಯಂತೆ. ನಿನ್ನನ್ನು ಆಸ್ಪತ್ರೆಗೆ ಕಳುಹಿಸಿ ನಾನು ಬ್ಯಾಂಕಿನ ಕೆಲಸಕ್ಕೆ ಹೊರಡುವೆ. ಸಂಜೆ ಬೇಗ ಬಾ ಕಲಾಕ್ಷೇತ್ರದಲ್ಲಿ ಅಶ್ವತರ ಸಂಗೀತವಂತೆ. ಹೋಗೋಣ..ಅವರ ಭಾವ ಲೀಲೆಯಲ್ಲಿ ಮಿಂದುಬರೋಣನಿನ್ನ ಬೆಳ್ಳಿ

No comments: