Tuesday, July 17, 2007

ಹೆಸರು ಮಾತ್ರ ಬಂಗಾರ ಅಲ್ಲ

ನಿಮ್ಮ ಅವ್ವ ಅಪ್ಪ ಯೇಟೋಂದ್ ಸಂದಾಕಿರೋ ಹೆಸರು ಮಡುಗ್ ಬಿಟ್ರು ಕಣೇ....ಹೆಸರು ಮಾತ್ರ ಬಂಗಾರ ಅಲ್ಲ ಬುಡು ನಿನ್ನ ಪ್ರತಿ ಮಾತು ಕೂಡ ಬಂಗಾರನೇ....ನೋಡು ನನಗೆ ಬೆಳಗ್ಗೆ ಎದ್ದ್ ಒಬ್ನೆ ಕುರಿ ಕಾಯೋಕ್ ಹೊಂಟೆ ಅಂದ್ರೆ ಸಾಕು ಮನಸು ವಿಲವಿಲ ಅಂತ ಒದ್ದಾಡಿದ್ ಹಾಗೆ ಆಯ್ತದೆ...ದನಗಳ್ ಕಾಯೋಕ್ ಹೊರಟೆ ಅಂದ್ರೆ ಸಾಕು ಮನ್ಸ್ ಮತ್ತೆ ವಿಲವಿಲ ಅಂತ ಅಳೋ ತರ ಆಗುತ್ತೆ..ಜೊತೆಗ್ ನೀನಿರಬ್ರಾರ್ದಿತ್ತ ಅನ್ಸುತ್ತೆ..ಇಬ್ರು ದನ ಕುರಿ ಕಾಯ್ತಾ ನಮ್ಮೂರ ಕೆರೆ ಏರಿ ಮ್ಯಾಲ ರತ್ನನ್ ಪದಗಳ್ ಹಾಡಿಕೊಂಡು ನಿನ್ ಹೆಗಲ್ ಮ್ಯಾಗೆ ನಾನ್ ಕೈ ಹಾಕೊಂಡು...ಟುರ್ ರ್ ರ್ ರ್ ಬ್ಯಾ ಬ್ಯಾ ಬ್ಯ ಟುರ್ ರ್ ರ್ ರ್ ಬ್ಯಾ ಬ್ಯಾ ಬ್ಯ ಅಂತ ಕುರಿಗಳ್ ಮೇಯ್ಸ್ಕೋತ ಹೊರಟ್ವಿ ಅಂದ್ರೆ ನಮ್ಮುರ ಕೆರೆ ಪಕ್ಕದಲ್ಲಿರೊ ನಮ್ಮೂರ ದೇವತೆ ಚೌಡಮ್ಮನ ಹೊಟ್ಟೆನಲ್ಲಿ ಕೂಡ ಅವಲಕ್ಕಿ ಕುಟ್ಟಿದ ಹಾಗೆ ಆಗಬೇಕು ಬಂಗಾರಿ.........ಬೋ ದಿನದಿಂದ ಒಂದು ಆಸೆ ಐತೆ ಕಣೆ ಅವ್ವ ಮಾಡಿದ್ ರೊಟ್ಟಿ ಚಟ್ನಿ ನ ದನಕುರಿ ಕಾಯ್ತಾ ನಾನು ನಿನಗೆ ತಿನ್ನಿಸಬೇಕು.ನೀನ್ ಖಾರ ಕಣೊ ಅಂತಾ ಕಣ್ಣೀರ್ ಇಟ್ರೆ , ಹಂಗೆ ನಮ್ಮ್ ಹಸು ಗೌರಿ ಕೊಡೊ ನೊರೆ ಹಾಲನ್ನ ನಾನು ನಿನಗೆ ನನ್ ಮಡಿಲಲ್ಲಿ ಮಲಗಿಸ್ಕೊಂಡು ಕುಡಿಸ್ ಬೇಕು..ಹಾಲೆಷ್ಟು ಶುದ್ಧ ಅಂತ ಗೊತ್ತು ಅಲ್ವ? ನಮ್ ಪಿರೂತಿನು ಹಂಗೆ ಅಂತ ತಿಳ್ಕಂಡಿವ್ನಿ...

ಬಂಗಾರಿ, ಬಯಾ ಆಯ್ತ ಐತೆ ಕಣೆ ನಂಗೆ.ಹೀಗೆ ದನಕುರಿ ಕಾಯ್ತ ಇರೋನ ನಿನ್ ಹೇಗಾದ್ರು ಪಿರೂತಿ ಮಾಡೀಯ? ನಿಮ್ಮ್ ಅವ್ವ ಅಪ್ಪಾ ಆದ್ರು ಹೆಂಗಾರ ನನಗೆ ಮದ್ವಿ ಮಾಡಿ ಕೊಟ್ಟಾರು ಹೇಳು ನೋಡುವಾ.ಕಂಡು ಕಂಡು ಮಗಳನ್ನ ಹಳ್ ಬಾವಿಗ್ ಯಾಕಡ್ರು ನೂಕ್ತಾರೆ ಏಳ್ ನೋಡುವ ಮತ್ತೆ? ನನಗು ಎಲ್ಲ ಯೋಚ್ನೆ ಇತೆ ಕಣೆ ಅದ್ರೆ ಎನ್ ಮಾಡ್ಲಿ ಈ ಪೆದ್ದು ಮನ್ಸು ಕೇಳಾಕಿಲ್ಲ ಅನ್ನುತ್ತೆ..ನೀನೆ ಬೇಕು ಅನ್ನುತ್ತೆ ನೀನಿಲ್ದೆ ಇರಾಕಾಗಕಿಲ್ಲ ಅನ್ನುತ್ತೆ.ಈ ಮನ್ಸಿಗೆ ಇವೆಲ್ಲ ವಿಸ್ಯ ಹೆಂಗಾರ ಅರ್ಥ ಆಯ್ತದೆ ಹೇಳೂ.. ಅದಕ್ಕೆ ಬಂಗರದಂತಿರೋ ನೀನು ಬೇಕು ಅಷ್ಟೆ...ನಾನಾದ್ರು ಒಂದ್ ಕಿತಾ ನು ನಿನ್ ತಾವ ಏನು ಯೇಳೆ ಇಲ್ವಲ್ಲ,.. ಯೇಳೊಕೆ ಏಗಾದ್ರು ಮನ್ಸ್ ಬರ್ಥೈತೆ ಯೇಳು ನೋಡುವ ? ನನ್ ಹತ್ರ ಎನ್ ಇತೆ ಅಂತ ನಿನ್ ಮದ್ವೆ ಅಯ್ತೀನಿ ಬಂಗರಿ ಅಂತ ಹೇಳ್ಲಿ? ಅಪ್ಪ ಹಾಕಿದ್ ಆಲದ್ ಮರಾ ಅಂತರಲ್ಲ ಹಂಗೆ 1 ಎಕರೆ ಜಮೀನ್ ಇತೆ ಅದು ಬಿಟ್ರೆ ನನ್ನವ್ವೆ ಅಂತ ಸ್ವಲ್ಪ ದನಕುರಿಗಳ್ ಅದಾವೆ ಅದ್ರಲ್ಲ್ ರಾಜಕುಮಾರಿ ತರ ಬೆಳೆದ ನಿನ್ನ ಹೇಗ್ ರಾಜಕುಮಾರಿತ್ರ ನೋಡ್ಲಿ ಬಂಗಾರಿ? ನನಗೆ ಅಮ್ಮ ಇಲ್ಲ ಅಪ್ಪ ಇಲ್ಲ ನಿಜ.ಆದ್ರೆ ನನಗೆ ಒಂಟಿಯಾಗಿ ಬೆಳೆದ್ ಅಬ್ಯಾಸ ಆಗೋಗಿದೆ.ಅತ್ರೆ ಮುದ್ದಿಸೋರಿಲ್ಲ ಸತ್ರೆ ಹೊದ್ದಿಸೋರಿಲ್ಲ ಅಂತಾರಲ್ಲ ಚಿನ್ನ ಹಾಗೆ. ಆದ್ರೆ ಈ ಬದ್ಕು ಅನ್ನೋದು ಎಷ್ಟ್ ಬಣ್ಣ್ ಬಣ್ಣ್ದದ್ ಅಸೆ ಹೊಮ್ಮುಸ್ತೈತಿ ಅಂದ್ರೆ ನನಗೆ ಹೇಳಾಕಾಗಕಿಲ್ಲ. ನಿನ್ನೆವರ್ಗು ನನಗೆ ಯರು ಇಲ್ಲ ಅನ್ನೊ ಸತ್ಯ ನ ಇವತ್ತು ಬಂದ ನಿನ್ನ ನೆನಪು ಹ್ಯಾಗೆ ಮರೆ ಮಾಡಿ ಬುಡ್ತು ನೋಡು? ಹಾಗೆ ನೀನು ನಾ ಬದ್ಕಿರಗಂಟ ನನ್ ಕೂಡಿ ಇದ್ರೆ ಎಷ್ಟ್ ಸಂದಾಕಿರ್ತದೆ ಅಂತ ಏಚನೆ ಮಾಡಿದ್ರೆ ನಂಗೆ ಯೆಂಗೆ ಕುಸಿ ಆಯ್ತದೆ ಗೊತ್ತ ಬಂಗಾರಿ?.....ನನಗೆ ಗೊತ್ತು ನಿಮ್ಮ್ ಚಿನ್ನದಂತ ಅವ್ವಾ ಕೂಡ ನಿನ್ನ ನನಗೆ ಮದ್ವಿ ಮಡಿ ಕೊಟ್ಟು ನಿನ್ ಜೀವ್ನ ಹಳ್ ಮಾಡ್ಖೋಳ್ಳೋಕೆ ಒಪ್ಕೊಳ್ಳೋದಿಲ್ಲ ಅಂತ ನಿಮ್ಮ್ ಅಪ್ಪಾ ಕೂಡ..ಆದ್ರೆ ಒಂದು ಸಲ ನನ್ ನೋಡು ಯಾವತ್ತು ನಿಂಗೆ ಬ್ಯಾಸರ ಆಗ್ದೆ ಇರೊ ಹಂಗೆ ನೋಡ್ಕೊತೀನಿ..ಇರೋ1 ಎಕರೆ ಜಮೀನ್ ನಲ್ಲೆ ಬಂಗಾರ ಬೇಳಿಯೋಣ..ಕಷ್ತ ಪಟ್ಟು ದುಡಿತೀನಿ ರಾಜಕುಮರಿ ಹಂಗೆ ಅಲ್ಲ್ದೆ ಇದ್ರು ನಿನ್ನ ನನ್ನ ರಾಜಕುಮಾರಿ ತರ ನೋಡ್ಕೋತೀನಿ...ಲೋಕ ನೂರೆಂಟ್ ಹೇಳ್ಲಿ ನನಗು ನಿನ್ಗು ಜೋಡಿ ಸರಿಯಾಗಕಿಲ್ಲ ಅಂತ ..ಮನ್ಸು ಇಲ್ದ ಲೋಕ ಇದು ಪಿರೂತಿ ಬೆಲೆ ಗೊತ್ತಿಲ್ಲ ಇದಕ್ಕೆ. ಬರಿ ಸ್ವಾರ್ಥ ಇರೊ ಈ ಲೋಕದಗ ನನ್ನ ನೀನ್ ಬಿಟ್ ಹೋಗ್ ಬ್ಯಾಡ....ನನಿಗೆ ನಿನ್ನ ಬಂಗಾರ ಚಿನ್ನ ಮುದ್ದು ಅಂತ ಹೊಗಳಾಕೆ ಬರಾಕಿಲ್ಲ ನೋಡು ನಿನ್ನ ಜೀವದಾಗ ಜೀವ ಇಟ್ಟು ಪಿರೂತಿ ಮಡಾಕ ಮಾತ್ರ ಗೊತ್ತೈತೆ ನನಿಗೆ.ನಿನಗೆ ನಾನು ಇಷ್ಟ ಇಲ್ಲವ? ಇಷ್ಟ ಆಗಾಕಿಲ್ವ? ಬ್ಯಾದ ಬಿಡು ನಾನ್ ಇಷ್ಟ ಪಡ್ತೀನಿ..ನೀನ್ ನನ್ ಕೂಡಿ ಜೀವನ ಮಾಡಾಕಿಲ್ಲ ಅಂದ್ರೆ ಬ್ಯಾರೆಯವರ್ ತರ ನಿನ್ ಓಡಿಸ್ಕೊಂಡು ಹೋಗೋದು .ನಿಂಗೆ ತೊಂದ್ರಿ ಕೊಡೋದು ನಿಮ್ ಮನಿ ಮುಂದೆ ಬಂದ್ ಜೋರಾಗ್ ಕೂಗೋದು ಎನ್ ಅಂದ್ರೆ ಎನ್ ಮಾಡಾಕಿಲ್ಲ ..ನಾನು ಬಂಗರದಂತ ಹುಡುಗಿನ ಇಷ್ಟ ಪಟ್ಟೇನಿ ಅಂದ್ರ ನನ್ ಮನ್ಸಾಗ ವಿಷ ಇರಾಕ ಹೇಗಾದ್ರು ಸಾದ್ಯ ಹೇಳು ಚಿನ್ನ?ಜೀವನದಗ ಕಷ್ಟ ಸುಖಾ ಇರ್ತಾವಂತ ನನಿಗೆ ಅವೆಲ್ಲಾ ತಿಳಿಯಾಕಿಲ್ಲ ನನಿಗೆ ಇವೆರೆಡರ ಯತ್ವಾಸ ಕೂಡ ಗೊತ್ತಿಲ್ಲ.ಆದ್ರೆ ನೀನ್ ನನ್ ಜೊತಿ ಇಲ್ಲದ ವ್ಯಾಳೆ ಮಾತ್ರ ನಾನ್ ಕಳಿಯಾದು ಕಷ್ತ ಆಗುತ್ ನೋಡು..ಜೀವನ್ ಪರ್ಯಾಂತ ನೀನ್ ಇಲ್ದೆ ಇರೋದ್ನ ನೆನಪ್ ಮಡಿಕೊಂಡ್ರೆ ಯಾಕೊ ಮನ್ಸು ಹಿಂಡಿದ ಹಾಗ್ ಆಗುತ್ತೆ. ಆದ್ರೆ ಜೀವನ್ ಪರ್ಯಂತ ನಿನ್ ನೆನಪೊಳಗೆ ಇರ್ತಿನಲ್ಲ ಅಂತ ತಿಳ್ಕೋಂಡು ಮತ್ತೆ ಕುಸಿ ಆಗುತ್ತೆ. ಅದು ನೋವು ದುಃಖ ಹತಾಷೆ ಬರಿ ಕನ್ಸು ತುಂಬಿದ ಸಂತೋಷ ಅಷ್ಟೆ ಕಣೆ.ಅದ್ರಲ್ಲಿ ನನಿಗೆ ಹೇಗೆ ಬದುಕ್ ಬೇಕು ಅಂತ ತಿಳೀತಿಲ್ಲ...ಒಂದೋಂದು ಕಡೆ ಭೂಮಿ ಆಕಾಶ ಒಂದಾದ ಹಂಗೆ ಕಾಣುತ್ತಲ್ಲ? ಎಷ್ತ್ ಸಂದಾಕಿರುತ್ತೆ ಅದ್ನ ನೋಡೋಕೆ? ಅದು ನಿಜಕ್ಕು ಒಂದಾದ ಹಗೆ ಕಾಣುತ್ತೆ ಆದ್ರೆ ಸತ್ಯವಾಗಲು ತುಂಬಾ ದೂರಾನೆ ಇರುತ್ತೆ ಅಂತ ತಿಳಿದು ಒಂತರ ಬ್ಯಾಸರ ಆಗುತ್ತೆ ...ಒಂದಾದ್ರೆ ತುಂಬಾ ಕುಸಿ ಅಲ್ವ?.................ಗೊತ್ತು ಬಿಡು ಕನಸು ಕಾಣೊದು ತಪ್ಪಲ್ಲ ಆದ್ರೆ ಎಂತಾ ಕನಸು ಕಾಣಬೇಕು ಬಂಗಾರಿ? ಅಷ್ಟು ಗೊತ್ತಾಗೊಲ್ಲ ಈ ಹಳ್ಳಿ ಹೈದನಿಗೆ....ಕೇವಲ ನಿನ್ನ ನೆನಪೊಳಗೆ ಜೀವನದ ಅರ್ತ ಹುಡುಕ ಹೊರಟ ಒರಟನಿವನು. ಕ್ಷಮಿಸಿ ಬಿಡು ತುಂಬಾ ದೊಡ್ಡ ದೊಡ್ಡ?? ಆಸೆಗಳಿಟ್ಟು ಕೊಂಡ ನಿನ್ನ ಪ್ರೀತಿಯ ಅತೀ ಚಿಕ್ಕ ಹುಡುಗಹಳ್ಳಿ ಹೈದ ಮನ್ಸು ಶುದ್ಧ ಸುಳ್ಳು ಹೇಳೋ ಕುಲವಲ್ಲ

No comments: