Saturday, July 21, 2007

ನೀಲಿ ಗಗನವೇ ಶಾಪ ಕೊಡು.............

ಅಬ್ಬಾ ಗಗನವೇ.. ಅದೆಷ್ಟು ನಕ್ಷತ್ರಗಳನ್ನ ನಿನ್ನೆದೆಯಲ್ಲಿಟ್ಟುಕೊಂಡು ಹಾಗೆ ಶಾಂತವಾಗಿದ್ದೀಯ? ನನಗೂ ಹೇಳಿ ಕೊಡು.ನಿನ್ನ ಸಹನಾ ಶಕ್ತಿಯನ್ನ. ನನ್ನೆದೆಯಲ್ಲಿ ಒಂದೇ ಒಂದು ನಕ್ಷತ್ರವನ್ನಿಟ್ಟುಕೊಳ್ಳಲಾಗದೆ ನಿನ್ನ ಮುಂದೆ ಕುಬ್ಜನಾಗಿ ನಿಂತಿರುವ ನನ್ನೆದೆಗೆ ನಿನ್ನ ಪ್ರೀತಿ ಕೊಡು ನಿನ್ನ ಸಹನೆ ಕೊಡು ನೋವುಗಳನ್ನ ಮರೆಯಬೇಕಿದೆ. ಅಷ್ಟಕ್ಕೂ ಮರೆಯುವುದಕ್ಕೆ ಅಂತ ಮಾತಿಗೆ ಹೇಳುತ್ತೇನಷ್ಟೆ ನಿಜಕ್ಕು ಅದು ಸಾದ್ಯಾನ ಅಂತ ನಿನ್ನೆದೆ ಗೂಡಲ್ಲಿ ಹುದುಗಿರುವ ಅಸಂಖ್ಹ್ಯಾತ ನಕ್ಷತ್ರಗಳನ್ನೆ ಕೇಳಿ ನೋಡು ! ಅಷ್ಟು ನಕ್ಷತ್ರಗಳಲ್ಲಿ ಒಂದೆ ಒಂದು ಮರೆಯುವುದಕ್ಕೆ ಸಾದ್ಯಾ ಅನ್ನುವುದೇ ಆದರೆ ನಾನು ಈ ಬದುಕು ಈ ಬವಣೆ ಈ ನೋವು ಈ ಹಿಂಸೆ ಈ ಜಗತ್ತಿನ ಅಷ್ಟೂ ಮೋಸಗಳಿಗೆ ಒಂದು ವಿದಾಯ ಹೇಳಿ ನಾನು ಕೂಡ ನಿನ್ನೆದೆಯಲ್ಲಿ ಒಂದು ನಕ್ಷತ್ರವಾಗುತ್ತೇನೆ.[:(]
ಗೊತ್ತಿಲ್ಲ ನಿನಗೆ ಪ್ರತಿ ದಿನ ಪ್ರತಿ ಗಳಿಗೆ ನಾನು ಅನುಭವಿಸುತ್ತಿರುವ ನೋವು ದುಃಖ ಹಿಂಸೆ ಅವಮಾನವನ್ನ ನಾನು ಜಗತ್ತಿಗೇ ಹಂಚಿ ಮತ್ತೆ ನಿನ್ನೆದೆಗೆ ಸುರಿದರೂ ಕಾಲಿಯಾಗದಷ್ಟಿದೆ. ಪ್ರತಿ ಆ ಕ್ಷಣ ಕೂಡ ನನಗೆ ಒಂದು ಜ್ಯೋತೀರ್ವರ್ಷದ ಸಮಾನ. ನಿನಗೆ ಗೊತ್ತ? ನಾನು ಅಂತ ಪ್ರತೀ ಕ್ಷಣಗಳನ್ನು ಕೂಡ ಪ್ರೀತಿಯಿಂದ ಅನುಭವಿಸುತ್ತಿದ್ದೇನೆ.ನೋವಲ್ಲಿದ್ದಷ್ಟು ಹೊತ್ತೂ "ಅವರು " ನೆನಪಲ್ಲಿರುತ್ತಾರಲ್ಲ ಎಂಬ ವಿಲಕ್ಷಣ ಆಸೆ. ಆಸೆ ನಿರಾಸೆಗಳ ಲೆಕ್ಕವಿಲ್ಲ .ಬದುಕಿನಲ್ಲಿ ಯಾವತ್ತೊ ಪ್ರೀತಿಯ ಲೆಕ್ಕದಲ್ಲಿ ನಪಾಸು ನಾನು..ಮತ್ತೆ ಪಾಸು ಮಾಡೊಕೆ ಇದು ಪರೀಕ್ಷೆಯಲ್ಲ ಕೇವಲ ನನ್ನ ಕನಸುಗಳ ಕೇವಲ ಕನಸುಗಳ ನಿರೀಕ್ಷೆ ಅಷ್ಟೆ.
ಮನಸಿನ ಯಾವುದೋ ಒಂದು ಮೂಲೆಯಲ್ಲಿ ನೆನಪು ಅನ್ನೊದು ಇದ್ದಿದ್ದರೆ ಅದನ್ನ ಮರೆತು ಬಿಡಬಹುದಿತ್ತು ಅಲ್ಲವ? ವಿಷಮ ಶೀತ ಜ್ವರದ ಹಾಗೆ ಮೈಮನವನ್ನೆಲ್ಲ ಆವರಿಸಿದ ಆ ಮಾಯೆಯ ಸುಳಿಯಿಂದ ಹೇಗೆ ಹೊರಬರಲಿ ಹೇಳು ನೀಲಿ ಗಗನವೇ. ನೀನು ನೊಂದಿದ್ದೀಯ? ಅದಕ್ಕೇನ ಒಂದೊಂದು ಸಲ ಮಳೆಯ ರೂಪದಲ್ಲಿ ಅಷ್ಟೂ ದುಃಖವನ್ನ ಹೊರಹಾಕುವುದು? ನಿನ್ನ ಹಾಗೆ ಮಳೆ ಸುರಿಸುವ ತಾಕತ್ತು ನನಗಿಲ್ಲ ಆದರೆ ನಾನು ಸುರಿಸುವ ಕಣ್ಣೀರಿನಲ್ಲಿರುವ ನೋವಿಗೆ ನೀನು ಮತ್ತೆ ನಿನ್ನ ಅಸಾಂಖ್ಯಾತ ನೋವುಗಳು ಸಾಟಿಯಾಗಲಾರಿರಿ ನೆನಪಿಡಿ. ನನಗೆ ಹೋಲಿಕೆ ಮಾಡಿ ಅಭ್ಯಾಸವಿಲ್ಲ ಕೇವಲ ಮೋಸ ಹೋಗಿ ಅಭ್ಯಾಸವಷ್ಟೆ.ಪ್ರೀತಿಯಲ್ಲಿ ಮೋಸ ಹೋಗುವುದು ನನಗೆ ಅಂತ ವಿಚಿತ್ರವೆನಿಸುತ್ತಿಲ್ಲ.ಆದರೆ ಪ್ರೀತಿ ಮೋಸಮಾಡುವುದು ನನಗೆ ವಿಚಿತ್ರವೆನಿಸುತ್ತೆ....ಯಾಕೊ ಬದುಕೇ ವಿಚಿತ್ರವೆನಿಸುತ್ತೆ ಯಾರಿಗೋ ಯಾರೋ ಕಣ್ಣೀರು ಹಾಕುವುದು, ಯಾರಿಗೋಸ್ಕರವೋ ಬದುಕಿ ಬಿಡುವುದು,ಯಾರೋ ನಮ್ಮ ಬದುಕಾಗಿಬಿಡುವುದು, ಅವರಿಲ್ಲವೆಂದ ಮಾತ್ರಕ್ಕೆ ಬದುಕೇ ಇಲ್ಲವೆನಿಸುವುದು ಇದು ಯಾವ ಮಾಯೆಯ ಮಾಯೆ? ಬಿಡು ಕಳೆದು ಹೋಗಿದ್ದರ ಬಗ್ಗೆ ಅಗಾಧ ನೋವಿದೆ...ಆ ನೋವು ಆ ಮಧುರ ಯಾತನೆ ಈ ಪ್ರಪಂಚದಲ್ಲಿ ನಾನಿರುವವರೆಗೆ ಇರುತ್ತೆ. ನಿನ್ನಲ್ಲಿ ಕೇಳಿಕೊಳ್ಳುವುದು ಇಷ್ಟೆ. ನನಗೆ ಯಾವತ್ತು ಈ ನೋವು ಮರೆತುಹೊಗದಂತ ಶಾಪ ಕೊಡು .ನೀನು ನೀಲಿಗಗನ.. ನಿನ್ನ ನಕ್ಷತ್ರಗಳ ಜೊತೆ ನಗುನಗುತ್ತಿರು..ನಾನು ನನ್ನ ನೋವುಗಳ ಜೊತೆ ಒಳಗೆ ಅಳುತ್ತ ಹೊರಗೆ ನಗುತ್ತಿರುತ್ತೇನೆ..

ನಿನ್ನ ಚೋಮು....

5 comments:

Unknown said...

Registration- Seminar on KSC's 8th year Celebration


Dear All,

On the occasion of 8th year celebration of Kannada saahithya. com we are arranging one day seminar at Christ college.

As seats are limited interested participants are requested to register at below link.

Please note Registration is compulsory to attend the seminar.

If time permits informal bloggers meet will be held at the same venue after the seminar.

For further details and registration click on below link.

http://saadhaara.com/events/index/english

http://saadhaara.com/events/index/kannada


Please do come and forward the same to your like minded friends

veena said...

snehithara patragalannu kaddu oduva buddhi yavatthininda?????

Jay said...

Why have you stopped postings?
What happened?
I am on a similar train.
God help me.
My story is on
http://nakadiruve.blogspot.com/

Jay said...

This is a good site.
Wonder why its abandoned now.
My pains are similar, but I have lot of faith and hope.
In God and in her.

My Life is on
http://nakadiruve.blogspot.com

ವಾಣಿಶ್ರೀ ಭಟ್ said...

ontara chennagide..

nanna blogigomme banni