Tuesday, July 17, 2007

ಮಂಗ ಮಾನವ್....!!!

ಬೆಳಗ್ಗೆ ಎದ್ದು ಕೂತೆನೆಂದರೇ ರಾತ್ರಿ ಕನವರಿಸಿದ ನಿನ್ನ ಮಲ್ಲಿಗೆ ನೆನಪುಗಳ ಸರಮಾಲೆ ಮತ್ತೆ ಮತ್ತೆ ಕಾಡತೊಡಗುತ್ತದೆ ಗೆಳೆಯ. ಮೇಲೇಳಲಾಗದೇ ಮತ್ತೆ ನಿನ್ನ ನೆನಪುಗಳ ರಗ್ಗು ಹೊದ್ದು ಮಲಗಿದರೆ ಮತ್ತೆ ನಿನ್ನ ಬಂಗಾರದ ಬೆರಳ ಕಚಗುಳಿಯಿಟ್ಟಂತಾಗಿ ಮೈತುಂಬಾ ಒಂದು ತೆರನಾದ ಜೀವಂತಿಕೆಯ ಹೂವು ಅರಳುತ್ತವೆ. ಇನ್ನು ಮಲಗಿದ್ದಿಯೇನೆ ಸೊಂಬೇರಿ ಅಂದವಳೇ ಅಮ್ಮ ಬಲವಂತವಾಗಿ ದಿಂಬನ್ನ ಬಿಸಾಕಿದರೇ..ಅಮ್ಮಾ ನಿಧಾನ ನೋವಾಗುತ್ತೆ ಕಣೆ ಅಂದು ತುಟಿ ಕಚ್ಚಿಕೊಳ್ಳುತ್ತೇನೆ..ಅಮ್ಮ ಯಾರಿಗೆ ನೋವಾಗುತ್ತೆ ಅಂತ ಅನುಮಾನದ ಕಣ್ಣುಗಳಲ್ಲಿ ನೋಡಿದರೇ ..ಹೇಗೇ ಹೇಳಲಿ ನಾನು ರಾತ್ರಿ ಪೂರ ತಬ್ಬಿ ಮಲಗುವ ದಿಂಬು ನಿನ್ನ ಪ್ರತಿರೂಪವೆಂದು..!!

ಅನುಮಾನವೇ ಬೇಡ ಬಿಡು ಮೊದಲು ನಿನ್ನ ನೊಡಿದಾಗ ಸಂಪೂರ್ಣವಾಗಿ ನಿನ್ನ ವಶವಾದವಳು ನಾನೆ...ಗಂಡುಬೀರಿ ಅಂದುಕೊಂಡರೂ ಪರವಾಗಿಲ್ಲ ಅಂತ ..ನಿಮ್ಮ ಹೆಸರೇನು ಅಂತ ಕೇಳಿದರೇ ಒಳ್ಳೆ ಹಾವು ತುಳಿದೋನ ತರ ನನ್ನಿಂದ ಮಾರುದ್ದ ದೂರ ಹೋದವನು ನೀನು.ಆದರೂ ನಿನ್ನ ಕಳ್ಳಬುದ್ದಿ ನನಗೆ ಗೊತ್ತಿಲ್ಲವ? ಮಾರನೇ ದಿನ ನಾನು ಕಾಲೇಜಿಗೆ ಬರೋದಕ್ಕಿಂತ ಮುಂಚೇನೆ ನನ್ ಹೆಸರೂ ಮಾನವ್ ನಿಮ್ಮ ಹೆಸರೇನು ಅಂತ ಕೇಳಿ ಹಲ್ಕಿರಿದವನು ನೀನು...ನಿಜ ಹೇಳಲ? ಅವತ್ತು ನನಗೆ ಆದ ಸಂತೊಷ ಆ ಸಂಬ್ರಮವನ್ನ ನೋಡಿ ಆ ದೇವತೆಗಳೂ ಹೊಟ್ಟೆಕಿಚ್ಚು ಪಟ್ಟಿರಬೇಕು ಕಣೊ....ದೇವತೆಗಳ ಮಾತು ಬಿಡು ಬಿಡು ಅವರ ಪಾಡಿಗೆ ಅವರಿರಿರಲಿ..ಆದರೆ ನಿನ್ನ ಜೀವನದಲ್ಲಿ ನಿನ್ನ ಬದುಕಿನಲ್ಲಿ ನನಗೊಂದಿಷ್ಟು ಪಾಲು ಕೊಡದೇ ಇದ್ದರೇ ಅವರೂ ದೇವತೆಗಳೂ ಅಂತ ಹೇಗೆ ಆಗುತ್ತಾರೋ? ಅವರನ್ನ ದೇವತೆಗಳೂ ಅಂತ ಯಾವ ಅರ್ತದಲ್ಲಿ ಕರಿಬೇಕು ಹೇಳೂ ಗುರೂ?

ನೋಡೋ ಅಮ್ಮನಿಗೆ ಅನುಮಾನ ಬಂದುಬಿಟ್ಟಿದೆ.ಮೊನ್ನೆ ಕೇಳ್ತ ಇದ್ಲು ಎನೇ ಇದು ಕೆನ್ನೆ ಮೇಲೆ ಯಾರೊ ಪರಚಿದ ಹಾಗಿದೆ? ಎನ್ ವಿಷ್ಯ ಅಂತ ..ಎನ್ ಇಲ್ಲಮ್ಮ ಮೊನ್ನೆ ಮೀನಾಕ್ಷಿ ಮನೆಗೆ ಹೋಗಿದ್ನಲ್ಲ ಅವರ ಬೆಕ್ಕು ಹೀಗೆ ಮಾಡಿಬಿಡ್ತು..ಆದ್ರೆ ಅದ್ನ ಸುಮ್ನೆ ಬಿದ್ಲಿಲ್ಲಮ್ಮ ನಾನು ಸರಿಯಾಗ್ ಪಾಠ ಕಲ್ಸಿದ್ದಿನಿ ಅಂತ ಮಳ್ಳಿ ತರ ಹೇಳಿದರೆ ಅಮ್ಮ ಆದವಳೂ ಹೇಗಾದರೂ ನಂಬುತ್ತಾಳೋ..ಹೇಗೆ ಹೇಳೋದು 2ಕಾಲಿನ ಬೆಕ್ಕಮ್ಮ ಪರಚಿದ್ದು ಅಂತ?..ಅದಕ್ಕೇ ಹೇಳಿದ್ದು ಹುಡುಗಬುದ್ದಿ ನಿಂದು ಅಂತ ಬಾ ಇವತ್ತು ನಿನಗಿದೆ ಹಬ್ಬ ಮೊನ್ನೆ ಪರಚಿದ್ದು ಬೆಕ್ಕು..ನಾಳೆ ನಿಮ್ಮಮ್ಮ ಕೇಳಬೇಕು "ಎನೋ ಇದು ಯಾವುದೋ ಹುಲಿ ಪರಚಿದ ಹಾಗಿದೆಯಲ್ಲೊ " ಅಂತ ಹಾಗೆ ಮಾಡದೇ ಇದ್ರೆ ನನ್ ಹೆಸರು ಬದಲಿ ಮಾಡು...ಬೇಡ ಕಣೋ ಈ ಹುಚ್ಚಾಟ..ನನಗೆ ದಿಗಿಲಾಗುತ್ತಿದೆ ಎಲ್ಲಿ ನನ್ನಿಂದ ದೂರಾಗುತ್ತಿಯಾ ಅಂತ..ಮನೆಗೆ ಬಾ ಅಮ್ಮ ಹತ್ತಿರ ಮಾತಾಡೂ .ಯಾವತ್ತು ಅಪ್ಪ ಅಮ್ಮನ ಎದುರು ನಿಂತೂ ಮಾತಾಡಲಿಕ್ಕು ಹೆದರುತ್ತಿದ್ದವಳು ನಿನ್ನ ಬುಜಕ್ಕೆ ತಾಗಿಕೊಂಡು "ಪಪ್ಪಾ ಪ್ಲೀಜ್ ಇದೊಂದನ್ನ ನನಗೆ ಕೊಟ್ಟುಬಿಡೀ" ಅಂತ ಕಣ್ಣೀರ ಕೋಡೀ ಹರಿಸಲಿಲ್ಲ ಅಂದರೇ ನಾನು ನಿನ್ನ ಮುದ್ದುಕೋತಿಯೆ ಅಲ್ಲ ಕಣೋ.ಜೀವವಿರುವ ತನಕ ಮರಿಬ್ಯಾಡ ಗೆಳೆಯಾಜೀವದ ಗೆಳತಿ.....ನಾನೆ

No comments: